News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಣಿಪುರದ ಈ ಜಿಲ್ಲಾಧಿಕಾರಿ ನಿಜಕ್ಕೂ ‘ಮಿರಾಕಲ್ ಮ್ಯಾನ್’

ಐಎಎಸ್ ಆರ್ಮ್‌ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ನ...

Read More

ಪತಿ ಮನೆಯವರ ಸಹಕಾರದಿಂದ ನೀಟ್ ಎಕ್ಸಾಂ ಪೂರೈಸಿದ ಬಾಲ್ಯವಿವಾಹಿತೆ

ಆಕೆಗೆ 8 ವರ್ಷವಿದ್ದಾಗಲೇ ಮದುವೆಯಾಗಿತ್ತು, 10ನೇ ತರಗತಿ ಉತ್ತೀರ್ಣಗೊಳಿಸುವ ಮೊದಲೇ ಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಆಕೆಗೆ 21 ವರ್ಷವಾಗಿದ್ದು, ವೈದ್ಯಳಾಗುವ ಆಸೆಯನ್ನು ಪೂರೈಸಲು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಾಳೆ. ರಾಜಸ್ಥಾನದ ಜೈಪುರದ ಕರೇರಿ ಗ್ರಾಮದ ರೂಪ ಯಾದವ್ ನೀಟ್ ಎಕ್ಸಾಂನಲ್ಲಿ...

Read More

ನೆಲಕ್ಕುರುಳಲಿದ್ದ 5 ಸಾವಿರ ಮರಗಳಿಗೆ ಹೊಸ ಬದುಕು ಕೊಟ್ಟ ಹೈದರಾಬಾದ್ ವ್ಯಕ್ತಿ

ನಗರೀಕರಣ ಮತ್ತು ಅಭಿವೃದ್ಧಿ ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆ. ಜನಸಂಖ್ಯೆ ಏರುತ್ತಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳ ನಿರ್ವಹಣೆ ಮಾಡಲು ರಸ್ತೆಗಳನ್ನು ಅಗಲಗೊಳಿಸಬೇಕಾಗುತ್ತದೆ. ರಸ್ತೆಗಳ ಅಗಲೀಕರಣಕ್ಕೆ ಮರಗಳ ಮಾರಣಹೋಮ ಅನಿವಾರ್ಯ ಎಂಬಂತಾಗಿದೆ. ಆದರೆ ಬುದ್ಧಿಜೀವಿ ಮನುಷ್ಯ ಮರಗಳನ್ನು ಕಡಿದು ಕೊಲ್ಲುವ ಬದಲು ಅವುಗಳನ್ನು...

Read More

ಎಂಎನ್‌ಸಿ ಜಾಬ್ ತೊರೆದು ವಾಯುಸೇನೆ ಸೇರುತ್ತಿದ್ದಾಳೆ 23 ವರ್ಷದ ಟೆಕ್ಕಿ

ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು 23 ವರ್ಷದ ರುಚಾ ಸುರೇಂದ್ರ ಸಿಯಾಲ್‌ನ ಕನಸಾಗಿತ್ತು. ಅದರಂತೆ ಆಕೆ ಇದೀಗ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿದ್ದ ಆರಾಮದಾಯಕ, ಕೈ ತುಂಬ ಹಣ ನೀಡುವ ಉದ್ಯೋಗವನ್ನು ತೊರೆದು ವಾಯುಸೇನೆಗೆ ಸೇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಳೆ. ಕೇವಲ 12...

Read More

ಗೋಂಡ್ವಾನಿ ಸಿಂಹಿಣಿ ದುರ್ಗಾವತಿಯ ಸ್ಮೃತಿ ದಿನ

ಚಂದೆಲೋಂಕಿ ಬೇಟಿ ಥೀ ಗೌಡ್ವಾನೀ ಕೀ ರಾಣೀ ಥೀ ಚಂಡಿ ಥೀ ವಹ ರಣಚಂಡಿ ಥೀ ವಹ ದುರ್ಗಾವತಿ ಭವಾನಿ ಥೀ|| ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ...

Read More

ಕೇವಲ 11 ರೂ.ಗೆ ಬಡವರಿಗೆ ಐಎಎಸ್ ಕೋಚಿಂಗ್ ನೀಡುವ ಮೊತಿವುರ್

ಡಾ.ಮೊತಿವುರ್ ರೆಹಮಾನ್ ಜೀವನವನ್ನು ಉತ್ತಮ ಕಾರ್ಯಕ್ಕೆ ಮುಡಿಪಾಗಿಟ್ಟವರು. ತಾನೂ ಯಶಸ್ಸಿನ ಹಾದಿಯಲ್ಲಿ ನಡೆದು ಇತರರನ್ನೂ ಯಶಸ್ಸಿನತ್ತ ಕೊಂಡೊಯ್ಯುವ ದೊಡ್ಡತನ ಇವರಲ್ಲಿದೆ. ಐಎಎಸ್ ಆಗಬೇಕು ಎಂಬ ಕನಸು ಕಾಣುತ್ತಿರುವ ಬಡವರಿಗೆ ಆಶಾಕಿರಣವಾಗಿರುವ ಇವರು ಗುರು ರೆಹಮಾನ್ ಎಂದೇ ಖ್ಯಾತರಾಗಿದ್ದಾರೆ. ಬಿಹಾರದ ಪಾಟ್ನಾ ನಗರದಲ್ಲಿ...

Read More

ಕಾರ್ಗಿಲ್ ಯುದ್ಧದಲ್ಲಿ ಕಾಲು ಕಳೆದುಕೊಂಡರೂ ಹೋರಾಟ ಬಿಡದ ಮೇಜರ್ ಡಿ.ಪಿ.ಸಿಂಗ್

1996ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಹಲವಾರು ಸೈನಿಕರು ತಮ್ಮ ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಕೆಲವರು ಶತ್ರುಗಳ ಗುಂಡೇಟಿಗೆ ವಿಕಲಚೇತನರಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಮೇಜರ್ ಡಿ.ಪಿ.ಸಿಂಗ್. ಯುದ್ಧದಲ್ಲಿ ಹೋರಾಡುತ್ತಿದ್ದ ಇವರು ಇಂದು ಬದುಕಿಗಾಗಿ ಹೋರಾಡುತ್ತಿದ್ದಾರೆ. ಎಂದೂ ಸೋಲದ ಹೋರಾಟ ಅವರದ್ದು. ಕಾರ್ಗಿಲ್ ಯುದ್ಧದ...

Read More

ಸ್ಲಮ್‌ಗಳಲ್ಲಿ 800 ಟಾಯ್ಲೆಟ್ ನಿರ್ಮಿಸಿಕೊಟ್ಟ ಬಾಲಿವುಡ್‌ನ ಸ್ಟಾರ್ ನಿರ್ದೇಶಕ

ರಾಕೇಶ್ ಓಂಪ್ರಕಾಶ್ ಮೆಹ್ರಾ. ರಂಗ್ ದೇ ಬಸಂತಿಯಂತಹ ಅತ್ಯುತ್ತಮ ಚಿತ್ರವನ್ನು ನೀಡಿದ ಸ್ಟಾರ್ ನಿರ್ದೇಶಕ. ಕೇವಲ ಸಿನಿಮಾಗಳನ್ನು ಮಾಡಿ ಕೈಕಟ್ಟಿ ಕುಳಿತಿದ್ದರೆ ಇಂದು ಯುವರು ನಮ್ಮ ಕಥಾ ನಾಯಕನಾಗುತ್ತಿರಲಿಲ್ಲ. ಕೇವಲ ನಿರ್ದೇಶಕನಾಗಿ ಉಳಿದು ಬಿಡುತ್ತಿದ್ದರು. ಪ್ರಸ್ತುತ ಸ್ಲಮ್‌ಗಳ ಶೌಚಾಲಯದ ಸಮಸ್ಯೆಯನ್ನು ತೋರಿಸುವ...

Read More

ಸೆರೆಬ್ರಲ್ ಪಾಲ್ಸಿ ಕಾಯಿಲೆಯಿದ್ದರೂ ಸಾಧನೆಯಲ್ಲಿ ಹಿಂದೆ ಉಳಿಯದ ದೃಷ್ಟಿ

ದೃಷ್ಟಿ ಧ್ರುವ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ರೋಗದಿಂದ ಬಳಲುತ್ತಿದ್ದಾಳೆ. ಆದರೂ ಮಹಾರಾಷ್ಟ್ರದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.88ರಷ್ಟು ಅಂಕ ಪಡೆದು ಮಹತ್ವದ ಸಾಧನೆ ಮಾಡುತ್ತಿದ್ದಾಳೆ. ಕೈಗಳಿಂದ ಪೆನ್ ಅಥವಾ ಬುಕ್ ಹಿಡಿಯುವುದು ಈಕೆಗೆ ಸಾಧ್ಯವಾಗಲಾರದು, ಆದರೂ ಅವಳ ಈ ದೌರ್ಬಲ್ಯ ಆಕೆಯನ್ನು...

Read More

17 ಸಾವಿರ ಬುಡಕಟ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಎಂಜಿನಿಯರ್

ಒರಿಸ್ಸಾದ ಬಲಸೋರ್ ಜಿಲ್ಲೆಯ ವಿಕಾಸ್ ದಾಸ್ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಇಂದು ಆತ 17 ಸಾವಿರ ಬುಡಕಟ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಒರ್ವ ಸಾಧಕ. ಐಬಿಎಂನಲ್ಲಿ ಸೆಕ್ಯೂರಿಟಿ ಕನ್ಸಲ್ಟೆಂಟ್ ಆಗಿದ್ದ ಇವರು 2013ರ ಅಕ್ಟೋಬರ್‌ನಲ್ಲಿ ತನ್ನೂರು ಬಲ್ಸೋರ್‌ಗೆ ದುರ್ಗಾ ಪೂಜೆಗೆಂದು...

Read More

Recent News

Back To Top