News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 21st November 2024


×
Home About Us Advertise With s Contact Us

About News13.in

ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?

ಜನರನ್ನು ಮೊದಲು ನಾವು ತಲುಪಬೇಕು ಎಂಬ ಜಿದ್ದಾಜಿದ್ದಿಗೆ ಬಿದ್ದಿರುವ ಮಾಧ್ಯಮಗಳು ಹೆಚ್ಚಾಗಿ ಋಣಾತ್ಮಕ ಸುದ್ದಿಗಳನ್ನೇ ಬಿತ್ತರಿಸುತ್ತವೆ. ಕೊಲೆ, ದರೋಡೆ, ಅತ್ಯಾಚಾರ, ರಾಜಕೀಯ ಕೆಸರೆರೆಚಾಟವನ್ನೇ ಬೆಳಿಗ್ಗೆಯಿಂದ ಸಂಜೆಯವರೆಗೆ ತೋರಿಸಿ ವೀಕ್ಷಕರು, ಓದುಗರ ಮೈಮನಸ್ಸಲ್ಲಿ ಋಣಾತ್ಮಕ ಅಂಶಗಳೇ ತುಂಬುವಂತೆ ಮಾಡುತ್ತವೆ. ಜನ ಇಂತಹ ಸುದ್ದಿಗಳನ್ನೇ ಹೆಚ್ಚಾಗಿ ಅಪೇಕ್ಷಿಸುತ್ತಾರೆ ಎಂಬ ವಾದ ಈ ಮಾಧ್ಯಮಗಳದ್ದು. ಮಾಧ್ಯಮಗಳ ಈ ಧೋರಣೆಯಿಂದಾಗಿ ಇಂದು ಸಮಾಜದಲ್ಲಿ ಅತ್ಯಾಚಾರಿಗಳು, ಕೊಲೆಗಡುಕರು ಹೆಚ್ಚಾಗಿ ವಿಜೃಂಭಿಸಲ್ಪಡುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳು ಸುದ್ದಿಯಾಗುವುದಿಲ್ಲ, ಸಾಧಕರು, ಮೇಧಾವಿಗಳು ಗುರುತಿಸಲ್ಪಡುತ್ತಿಲ್ಲ ಎಂಬುದು ದುರಾದೃಷ್ಟ.

ಬೆಳಕಿಗೆ ಬಾರದೆಯೇ ಅದೆಷ್ಟೋ ಸಾಧಕರು ನಮ್ಮ ಸಮಾಜದ ಉನ್ನತಿಗಾಗಿ ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ನಾವು ಕಾಣಬೇಕು, ದೊಡ್ಡ ಸುದ್ದಿ ಮಾಡಬೇಕು ಎಂಬ ಯಾವ ಅಪೇಕ್ಷೆಯೂ ಇವರಿಗಿಲ್ಲ. ಆದರೆ ಇವರನ್ನು ಗುರುತಿಸಿ, ಪ್ರೋತ್ಸಾಹಿಸಬೇಕಾದುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮದ ಕರ್ತವ್ಯ. ನಮ್ಮ ದೇಶದಲ್ಲಿ ಋಣಾತ್ಮಕ ಸುದ್ದಿಗಳು ಮಾತ್ರವಲ್ಲ, ಧನಾತ್ಮಕ ಸುದ್ದಿಗಳೂ ಇವೆ ಎಂಬುದನ್ನು ತೋರಿಸುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು.

ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದು ಕಳೆದ 5 ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಈ ಪ್ರಯತ್ನದಿಂದ ಅನೇಕ ಸುದ್ದಿಗಳು ಸಮಾಜದ ಮೇಲೆ ಪರಿಣಾಮ ಬೀರಿದ ಉದಾಹರಣೆಗಳು ಇವೆ. ಸಮಾಜದಲ್ಲಿ ಸಹಾಯ ಬೇಕಿರುವ ಸಂದರ್ಭ, ಯಾರೂ ತಿಳಿಸಿದ ಉತ್ತಮ ಸುದ್ದಿಗಳು – ಈ ರೀತಿಯಾಗಿ ನಾವು ಕೊಟ್ಟ ಸುದ್ದಿಯ ಮುಖಾಂತರ ಪರಿಣಾಮವಾಗಿರುವ ಅನೇಕ ಉದಾಹರಣೆಗಳಿವೆ.

ಒಂದು ವಿಚಾರವನ್ನು ಅಥವಾ ಒಂದು ವಿಷಯವನ್ನು ವೀಡಿಯೋ ಮೂಲಕ ಜನರ ಮುಂದೆ ಇಡುವ ಪ್ರಯತ್ನವನ್ನೂ ಮಾಡಿ ಯಶಸ್ಸು ಕಂಡಿದ್ದೇವೆ. ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಸ್ರೇಲ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾಡಿದ ವೀಡಿಯೋ 10 ಲಕ್ಷಕ್ಕೂ ಹೆಚ್ಚು ಬಾರಿ, ಚಾಲಾಕಿ ಚೀನಾ ಕುರಿತ ವೀಡಿಯೋ 6.83 ಲಕ್ಷ ಬಾರಿ, ಕಾರ್ಗಿಲ್ ಯೋಧರ ವೀಡಿಯೋ 85 ಸಾವಿರ, ಆರ್‌ಎಸ್‌ಎಸ್ ಕುರಿತ ವೀಡಿಯೋ 2.34 ಲಕ್ಷ ಬಾರಿ, ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತ ವೀಡಿಯೋ 2.25 ಲಕ್ಷ, ಮೋದಿ ಸರ್ಕಾರದ 4 ವರ್ಷದ ಸಾಧನೆ ಕುರಿತ ವೀಡಿಯೋ 1.51 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ.

ಹೀಗೆ ಅನೇಕ ವೀಡಿಯೋ, ಸುದ್ದಿಗಳು ಹೆಚ್ಚು ಜನರನ್ನು ನಮ್ಮ ಜಾಲತಾಣಕ್ಕೆ ಆಕರ್ಷಿಸುತ್ತಿರುವುದು ಉತ್ತಮ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ಎಂಬುದು ಗಮನಕ್ಕೆ ಬರುತ್ತಿದೆ.

ಇಷ್ಟೆಲ್ಲವನ್ನೂ ಯಾವುದೇ ಜಾಹೀರಾತು ಹಾಗೂ ಪ್ರೊಮೋಶನ್‌ಗಳಿಲ್ಲದೆ ಮಾಡಿದ್ದು, ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾದಂತಹ ಸಹಕಾರ, ಸಲಹೆ ಮತ್ತು ಸಹಾಯದಿಂದ ಇನ್ನೂ ಸಮಾಜದ ಮೂಲೆ ಮೂಲೆಗೆ ಇದನ್ನು ತಲುಪಿಸಲು ಸಾಧ್ಯವೆಂದು ಮನಗಂಡು ಇದೇ ರೀತಿ ರಾಷ್ಟ್ರ ಹಿತದ ಚಿಂತನೆಯುಳ್ಳ ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?

YouTube : Right Angle Media – RAM – 1.3K+
Twitter : www.twitter.com/news1312 – 15.5k Tweets

Web : www.news13.in

FB :  www.facebook.com/urnews13

Twitter :   www.twitter.com/news1312

YouTube :   Right Angle Media – RAM

E Mail : mail2news13@gmail.com

Recent News

Back To Top