ದೃಷ್ಟಿ ಧ್ರುವ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ರೋಗದಿಂದ ಬಳಲುತ್ತಿದ್ದಾಳೆ. ಆದರೂ ಮಹಾರಾಷ್ಟ್ರದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.88ರಷ್ಟು ಅಂಕ ಪಡೆದು ಮಹತ್ವದ ಸಾಧನೆ ಮಾಡುತ್ತಿದ್ದಾಳೆ.
ಕೈಗಳಿಂದ ಪೆನ್ ಅಥವಾ ಬುಕ್ ಹಿಡಿಯುವುದು ಈಕೆಗೆ ಸಾಧ್ಯವಾಗಲಾರದು, ಆದರೂ ಅವಳ ಈ ದೌರ್ಬಲ್ಯ ಆಕೆಯನ್ನು ಸಾಧನೆಯಿಂದ ಹಿಮ್ಮುಖಗೊಳಿಸುವಂತೆ ಮಾಡಿಲ್ಲ.
ಕಂಡೇವ್ಲಿಯಲ್ಲಿನ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್ನ ವಿದ್ಯಾರ್ಥಿನಿಯಾಗಿರುವ ಈಕೆ, ಬರಹಗಾರರ ಸಹಾಯದಿಂದ ಪರೀಕ್ಷೆ ಬರೆದಿದ್ದಾಳೆ.
ಮೊಬೈಲ್ಗಳ ಮೂಲಕ ಪಾಠವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಮತ್ತೆ ಮತ್ತೆ ಕೇಳಿ ಅಭ್ಯಾಸಿಸಿ ಈಕೆ ಉತ್ತಮ ಅಂಕ ಪಡೆದುಕೊಂಡಿದ್ದಾಳೆ. ಗಣಿತದಲ್ಲಿ 98 ಮತ್ತು ಸಮಾಜ ವಿಜ್ಞಾನದಲ್ಲಿ 90 ಅಂಕಗಳನ್ನು ಪಡೆದಿದ್ದಾಳೆ.
ಮಾತ್ರವಲ್ಲದೇ ರಜೆಯ ವೇಳೆ ಈಕೆ ಜೈನ ಸಮುದಾಯ ಮಕ್ಕಳಿಗಾಗಿ ಆಯೋಜನೆ ಮಾಡಿದ ನುವನು ಯಾತ್ರಾಸ್(99 ಹೆಜ್ಜೆಗಳು)ನಲ್ಲಿ ಪಾಲ್ಗೊಂಡು ದಿನಕ್ಕೆ ಬೆಳಿಗ್ಗೆ 4.30 ಗಂಟೆಯಿಂದ ಯಾತ್ರೆ ನಡೆಸುತ್ತಿದ್ದಳು. 1.30ಕ್ಕೆ ಅಭ್ಯಾಸವನ್ನು ಪೂರ್ಣಗೊಳಿಸುತ್ತಿದ್ದಳು. ಒಂದು ಊಟ ಮಾಡುತ್ತಿದ್ದಳು.
ಇದು ಆಕೆಗೆ ಧರ್ಮಶಾಲಾದಲ್ಲಿದ್ದ ರೆಸ್ಟ್ ಹೌಸ್ನಿಂದ ದೇಗುಲದವರೆಗೆ ನಡೆಯುವಂತೆ ಮಾಡಿತು. ಮಾತ್ರವಲ್ಲದೇ 40 ದಿನಗಳಲ್ಲಿ ಈಕೆ ಶತ್ರುಂಜಯ ಹಿಲ್ಸ್ನ 3,500 ಮೆಟ್ಟಿಲುಗಳನ್ನು 99 ಬಾರಿ ಹತ್ತಿದ್ದಾಳೆ. ಅತ್ಯಂತ ಬಲಿಷ್ಠ ಹುಡುಗಿಯೆಂದು ಆಯೋಜಕರಿಂದಲೇ ಕರೆಸಿಕೊಂಡಿದ್ದಾಳೆ. ಇಲ್ಲಿ ಜೈನ ಸಮುದಾಯದ ಪವಿತ್ರ ದೇಗುಲಗಳಿವೆ.
ಇದೀಗ ಉತ್ತಮ ಅಂಕ ಪಡೆದಿರುವ ಈಕೆಗೆ ಕಂಪ್ಯೂಟರ್ನಲ್ಲಿ ಆಸಕ್ತಿ ಹೆಚ್ಚು, ಹೀಗಾಗೀ ಆಕೆ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.