
ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರು ರಾಜ್ಯ ವಿಧಾನಸಭೆಯಲ್ಲಿ ವಿಶೇಷ ಘೋಷಣೆ ಮಾಡಿದ್ದು, ರಾಜ್ಯದ ಮೂರು ಪ್ರಮುಖ ನಗರಗಳು/ಪಟ್ಟಣಗಳ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಸ್ಥಳೀಯ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪುನಃಸ್ಥಾಪಿಸುವ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರ ಎಂದು ಸರ್ಕಾರ ಹೇಳಿದೆ.
ಬದಲಾಯಿಸಲಾದ ಮೂರು ನಗರಗಳ ಹೆಸರುಗಳು:
ಮೌಂಟ್ ಅಬು– ರಾಜಸ್ಥಾನದ ಏಕೈಕ ಹಿಲ್ ಸ್ಟೇಷನ್ ಇದೀಗ ಅಬು ರಾಜ್ (Abu Raj) ಅಥವಾ ಆಬೂರಾಜ್ ಎಂದು ಕರೆಯಲ್ಪಡುತ್ತಿದೆ. ಇದು ಪ್ರವಾಸಿಗರಿಗೆ ಜನಪ್ರಿಯವಾದ ಸ್ಥಳವಾಗಿದ್ದು, ಹೊಸ ಹೆಸರು ಸ್ಥಳೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರ ವಾದಿಸಿದೆ.
ಜಹಾಜ್ಪುರ್- ಐತಿಹಾಸಿಕ ಕೋಟೆಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾದ ಪಟ್ಟಣ – ಇದೀಗ ಯಜ್ಞಪುರ ಅಥವಾ ಯಾಜ್ಞಪುರ ಎಂದು ಮರುನಾಮಕರಣಗೊಳ್ಳಲಿದೆ.
ಕಾಮಾ ಅಥವಾ ಕಮನ್ -ಎಂಬ ಬ್ರಜ್ ಪ್ರದೇಶದೊಂದಿಗೆ ಸಂಬಂಧ ಹೊಂದಿರುವ ಧಾರ್ಮಿಕ ಮಹತ್ವದ ಸ್ಥಳ ಇದೀಗ ಕಾಮವನ್ ಎಂದು ಮರು ನಾಮಕರಣಗೊಳ್ಳಲಿದೆ
ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರು ವಿಧಾನಸಭೆಯಲ್ಲಿ ಮಾತನಾಡಿ, “ಜನರ ಭಾವನೆಗಳನ್ನು ಗೌರವಿಸಿ, ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಬಲಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


