2014ರಲ್ಲಿ ಕೈಗೊಂಡ ವರದಿಯ ಪ್ರಕಾರ ಭಾರತ ಇಂಗಾಲದ ಡೈ ಆಕ್ಸೈಡ್(CO2)ನ್ನು ಹೊರಸೂಸುವ 4ನೇ ಅತೀದೊಡ್ಡ ರಾಷ್ಟ್ರ. ಆ ವರ್ಷ ಭಾರತ 2.6 ಬಿಲಿಯನ್ ಟನ್ ಇಂಗಾಲವನ್ನು ಹೊರಸೂಸಿದೆ. ಈ ಮೂಲಕ ಜಗತ್ತಿನ ಹೊರಸೂಸುವಿಕೆಗೆ ಶೇ.7.2ರಷ್ಟನ್ನು ನೀಡಿದೆ.
2016ರ ವರದಿಯೊಂದರ ಪ್ರಕಾರ ಭಾರತದ ಅತೀ ವೇಗದಲ್ಲಿ ಮಲಿನವನ್ನು ಹೊರಸೂಸುತ್ತಿರುವ ರಾಷ್ಟ್ರ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ 5.3ರಷ್ಟು ಏರಿಕೆಯನ್ನು ಕಂಡಿದೆ.
ಇಂತಹ ಹಲವಾರು ವರದಿಗಳು ಭಾರತ ಅತೀ ದೊಡ್ಡ ಮಟ್ಟದಲ್ಲಿ ಮಾಲಿನ್ಯವನ್ನು ಸೂಸುತ್ತಿರುವ ರಾಷ್ಟ್ರ ಎಂಬುದನ್ನು ಸ್ಪಷ್ಟಪಡಿಸುತ್ತಲೇ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ಬಾಂಬೆ ಐಐಟಿಯ ಪ್ರೋಫೆಸರ್ ಒಬ್ಬರು ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುವ ಆವಿಷ್ಕಾರವನ್ನು ಮಾಡಿದ್ದಾರೆ.
ಇಂಗಾಲದ ಡೈಆಕ್ಸೈಡ್ನ್ನು ಕೈಗಾರಿಕೆಗಳಲ್ಲಿ ಸೆರೆಹಿಡಿಯುವ ಮತ್ತು ಅವುಗಳನ್ನು ಭೂಮಿ ತಳದಲ್ಲಿ ಇಂಜೆಕ್ಟ್ ಮಾಡುವ ಯಾಂತ್ರಿಕ ರಚನೆಯನ್ನು ಆವಿಷ್ಕರಿಸಿದ್ದಾರೆ.
ಈ ಆವಿಷ್ಕಾರಕ್ಕಾಗಿ ಡಾ.ವಿಕ್ರಮ್ ವಿಶಾಲ್ 2017ರ ಯುವ ವಿಜ್ಞಾನಿ ಎಂಬ ಆವಾರ್ಡ್ನ್ನು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿಯಿಂದ ಪಡೆದುಕೊಂಡಿದ್ದಾರೆ.
ಕೋಲ್ ಬೆಡ್ಸ್ಗೆ ಅತೀ ಹೆಚ್ಚಿನ ಒತ್ತಡದಲ್ಲಿ ಇಂಗಾಲದ ಡೈಆಕ್ಸೈಡ್ನ್ನು ಇಂಜೆಕ್ಟ್ ಮಾಡಿದಾಗ ಮಿಥೆನ್ ರಿಲೀಸ್ ಆಗುತ್ತದೆ. ಇದನ್ನು ದೇಶದ ಇಂಧನ ಬೇಡಿಕೆಯ ಪೂರೈಕೆಗೆ ಬಳಸಿಕೊಳ್ಳಬಹುದು ಎಂದು ವಿಕ್ರಮ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.