ಕೇವಲ 17 ವರ್ಷದ ಪಶ್ಚಿಮಬಂಗಾಳದ ಮಿಡ್ನಾಪೋರ್ ಮೂಲದ ತುಹಿನ್ ದುಬೆ ಭವಿಷ್ಯ ನಿಜಕ್ಕೂ ಪ್ರಕಾಶಮಾನವಾಗಿ ಗೋಚರಿಸುತ್ತಿದೆ. ಇಷ್ಟು ಸಣ್ಣ ವಯಸ್ಸಲ್ಲೇ 2 ರಾಷ್ಟ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಈತ ಸ್ಟೀಫನ್ ಹೌಕಿಂಗ್ ಅವರನ್ನು ತನ್ನ ರೋಲ್ ಮಾಡೆಲ್ ಆಗಿರಿಸಿಕೊಂಡಿದ್ದಾನೆ.
ತನ್ನ ರೋಲ್ ಮಾಡೆಲ್ರಂತೆಯೇ ವ್ಹೀಲ್ ಚೇರ್ಗೆ ಅವಲಂಭಿತನಾಗಿರುವ ಈತ, ಅಂಗವೈಕಲ್ಯದ ಮೂಲಕ ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾನೆ. ಪ್ರಸ್ತುತ 10ನೇ ತರಗತಿ ಫಲಿತಾಂಶವನ್ನು ಎದುರು ನೋಡುತ್ತಿರುವ ಈತ ಐಐಟಿಗೆ ಸೇರಿ ಹೌಕಿಂಗ್ರಂತೆ ಕಾಸ್ಮೋಲಜಿಸ್ಟ್ ಆಗುವತ್ತ ಗುರಿಯಿಟ್ಟಿದ್ದಾನೆ.
ತುಹಿನ್ ಅರ್ತೊಗ್ರೈಪೊಸಿಸಿ ಮಲ್ಟಿಪ್ಲೆಕ್ಸ್ ಕಾಂಗ್ನಿಜೆಂಟ್(ಎಎಂಸಿ) ಸಮಸ್ಯೆಯನ್ನು ಹೊಂದಿದ್ದು, ಇದರಿಂದಾಗಿ ಆತನ ಕೀಲುಗಳು ಗಟ್ಟಿಯಾಗಿ ಬಾಗಿದ ಸ್ಥಿತಿಯಲ್ಲಿದೆ. ಕೀಲುಗಳಲ್ಲಿ ಯಾವುದೇ ಚಲನೆಗಳಿಲ್ಲ. ಆದರೆ ಹೌಕಿಂಗ್ರಂತೆಯೇ ತುಹಿನ್ನ ಈ ಸ್ಥಿತಿ ಆತನನ್ನು ವಿಶ್ವದ ಪ್ರಖ್ಯಾತ ವಿಜ್ಞಾನಿಯಾಗಬೇಕೆಂಬ ಕನಸನ್ನು ಕಾಣುವುದಕ್ಕೆ ಅಡ್ಡಿಯುಂಟು ಮಾಡಿಲ್ಲ.
ಖರಗ್ಪುರ ಐಐಟಿಯಲ್ಲಿ ಬಿಟೆಕ್ ಮಾಡಿ ಬಳಿಕ ಆಕ್ಸ್ಪರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ನನ್ನ ಕನಸು. ಒಂದಲ್ಲ ಒಂದು ದಿನ ನನ್ನ ಹೀರೋ ಸ್ಟೀಫನ್ ಹೌಕಿಂಗ್ ಅವರನ್ನು ಭೇಟಿಯಾಗುವುದು ನನ್ನ ಅತೀದೊಡ್ಡ ಆಶಯ ಎಂದು ತುಹಿನ್ ಹೇಳುತ್ತಾನೆ.
ದೀನಬಂಧು ಸಂಘಟನೆ ಈತನ ಸಹಾಯಕ್ಕೆ ನಿಂತಿದ್ದು, ಇತ್ತೀಚಿಗೆ ಲ್ಯಾಪ್ಟಾಪ್, ಟೆಲಿಸ್ಕೋಪ್ನ್ನು ಈತನಿಗೆ ಉಡುಗೊರೆಯಾಗಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.