ದೇಶದ ಅತೀದೊಡ್ಡ ವರ್ಸೋವಾ ಬೀಚ್ನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಿದ ಕೀರ್ತಿ ಹೊಂದಿದ ವಕೀಲ ಅಫ್ರೋಝ್ ಶಾ ಇದೀಗ ತನ್ನ ಕಾರ್ಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದಾರೆ. ತನ್ನ ಕಾರ್ಯಕ್ಕೆ ಸಿಕ್ಕ ಮನ್ನಣೆಯಿಂದ ಪುಳಕಿತಗೊಂಡಿರುವ ಅವರು ಇದೀಗ ಮುಂಬಯಿಯ 19 ಬೀಚ್ಗಳನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
2015ರ ಅಕ್ಟೋಬರ್ನಿಂದ ಅಫ್ರೋಜ್ ಅವರು ಮುಂಬಯಿಯ ವರ್ಸೊವಾ ಬೀಚ್ನ್ನು ತಮ್ಮ ತಂಡದೊಂದಿಗೆ ಸ್ವಚ್ಛಗೊಳಿಸುತ್ತಿದ್ದಾರೆ. ಅವರ ಶ್ರಮದ ಪ್ರತಿಫಲವಾಗಿ ಶೇ.70ರಷ್ಟು ಬೀಚ್ ಶುದ್ಧಗೊಂಡಿದೆ. ಒಂದು ಸಾವಿರ ಸ್ವಯಂಸೇವಕರೊಂದಿಗೆ ಭಾನುವಾರ ಕೂಡ ಅವರು ಬೀಚ್ನ್ನು ಸ್ವಚ್ಛಗೊಳಿಸಿದರು. ತಮ್ಮ ತಂಡದ ಈ ಕಾರ್ಯವನ್ನು ಅವರು ವಿಶ್ವ ಪರಿಸರ ದಿನ ಮತ್ತು ವರ್ಲ್ಡ್ ಓಶಿಯನ್ ಡೇ(ಜೂನ್೮)ಗೆ ಸಮರ್ಪಿಸಿದ್ದಾರೆ.
ಈಗಾಗಲೇ ಅವರು ವರ್ಸೋವಾ ಬೀಚ್ ಭಾಗದಲ್ಲಿ 500 ತೆಂಗಿನ ಮರಗಳನ್ನು ನೆಟ್ಟಿದ್ದಾರೆ. ಇದರಲ್ಲಿ 100 ಗಿಡಗಳು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ ವತಿಯಿಂದ ಕೊಡುಗೆಯಾಗಿ ಸಿಕ್ಕವುಗಳು. ಇವರೊಂದಿಗೆ ಸೇರಿ ಪ್ರತಿ ವರ್ಷ ಈ ಬೀಚ್ನಲ್ಲಿನ ತೆಂಗಿನ ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಸ್ಥಳಿಯರು ಕೂಡ ನಿರ್ಧರಿಸಿದ್ದಾರೆ. ಕನಿಷ್ಠ 3 ರಿಂದ 4 ಸಾವಿರ ಗಿಡ ನೆಡುವ ಯೋಜನೆ ಅವರದ್ದಾಗಿದೆ.
ವರ್ಸೊವಾ ಬೀಚ್ನಲ್ಲಿನ ಮೀನುಗಾರರು ಕೂಡ ಅಫ್ರೋಝ್ ಅವರ ಸ್ವಚ್ಛತೆಯಿಂದ ಪ್ರೇರಣೆ ಪಡೆದಿದ್ದಾರೆ. ಇದೀಗ ಬೀಚ್ ಸ್ವಚ್ಛತೆಯ ಅರಿವು ಅವರಿಗುಂಟಾಗಿದ್ದು, ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.
ಮೀನುಗಾರರು ಕೈಜೋಡಿಸಿದಾಗ ಮಾತ್ರ ಬೀಚ್ಗಳು ಸ್ವಚ್ಛವಾಗಿರಲು ಸಾಧ್ಯ ಎಂದು ಹೇಳುವ ಅಫ್ರೋಝ್, ಈಗ ಸ್ಥಳಿಯರು ಕೂಡ ಕಸಕಡ್ಡಿಗಳನ್ನು ಹಾಕದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇಲ್ಲಿ ನಿಧಾನಕ್ಕೆ ಮಹತ್ವದ ಬದಲಾವಣೆಗಳು ಆಗುತ್ತಿದೆ ಎಂದಿದ್ದಾರೆ.
10 ಮಿಲಿಯನ್ ಜನ ವರ್ಸೋವಾ ಬೀಚ್ಗೆ ಆಗಮಿಸುತ್ತಾರೆ. ಅವರ ಭಾರವನ್ನು ಈ ಬೀಚ್ ಹೊರಬೇಕು. 85 ವಾರಗಳಲ್ಲಿ ಒಂದು ವರ್ಷದ ಕೊಳಚೆಯನ್ನು ತೆಗೆದಿದ್ದೇವೆ. 5.3 ಟನ್ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ತೆಗೆದಿದ್ದೇವೆ. ಬೀಚ್ ಇದೀಗ ಶೇ.70ರಷ್ಟು ಸ್ವಚ್ಛವಾಗಿದೆ. ಆದರೂ ಇಲ್ಲಿ ಸ್ವಚ್ಛತಾ ಕಾರ್ಯವನ್ನು ನಿರಂತರ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅಫ್ರೋಝ್ ಹೇಳುತ್ತಾರೆ.
ಮುಂದೆ ಮುಂಬಯಿಯ 19 ಬೀಚ್ಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವ ಮಹತ್ವದ ಯೋಜನೆಯನ್ನು ಅವರು ರೂಪಿಸಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಸಾಕಾರಗೊಳಿಸಲು ತಮ್ಮಿಂದಾದ ಕೊಡುಗೆ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.