Date : Monday, 27-08-2018
ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರ ರಾಖಿ ಸಹೋದರಿ ಖಮರ್ ಮೊಹ್ಸೀನ್ ಶೇಖ್ ಅವರು, ನವದೆಹಲಿಯ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಅವರಿಗೆ ರಾಖಿಯನ್ನು ಕಟ್ಟಿದ್ದಾರೆ. ದೆಹಲಿ ನಿವಾಸಿಯಾಗಿರುವ ಪಾಕಿಸ್ಥಾನದ ಮೂಲದ ಶೇಖ್, ಕಳೆದ 24 ವರ್ಷಗಳಿಂದ ಮೋದಿಯವರಿಗೆ...
Date : Monday, 27-08-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನು ತನ್ನ ಸಹೋದರರು ಎಂದು ಪರಿಗಣಿಸಿರುವ ವಾರಣಾಸಿಯ ಮುಸ್ಲಿಂ ಮಹಿಳೆಯೊಬ್ಬರು ಅತ್ಯಂತ ವಿಭಿನ್ನವಾಗಿ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮೋದಿ ಮತ್ತು ಯೋಗಿ ಅವರಿಗೆ ತಾನು ರಾಖಿ ಕಟ್ಟುತ್ತಿರುವ ಮಾದರಿಯ...
Date : Monday, 27-08-2018
ಚೆನ್ನೈ: ದೇಶದ ಗಡಿಗಳನ್ನು ಕಾಯುತ್ತಿರುವ ವೀರ ಯೋಧರುಗಳಿಗೆ ತಮಿಳುನಾಡಿನ ವಿದ್ಯಾರ್ಥಿನಿಯರು 15 ಸಾವಿರ ರಾಖಿಗಳನ್ನು ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಕರೂರ್‌ನ ಭರಣಿ ಪಾರ್ಕ್ ಮತ್ತು ಭರಣಿ ವಿದ್ಯಾಲಯ ಸ್ಕೂಲ್‌ನ ವಿದ್ಯಾರ್ಥಿನಿಯರು ರಾಖಿಗಳನ್ನು ತಯಾರಿಸಿದ್ದಾರೆ. ಈ ವಿದ್ಯಾರ್ಥಿನಿಯರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ...
Date : Monday, 27-08-2018
ನವದೆಹಲಿ: ಮಹಿಳಾ ದೌರ್ಜನ್ಯಗಳ ವಿರುದ್ಧ ಖಡಕ್ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ಎಂದಿಗೂ ಸಹಿಸೋದಿಲ್ಲ ಎಂದಿದ್ದಾರೆ. ಅಲ್ಲದೇ ಇತ್ತೀಚಿಗೆ ಅನುಮೋದನೆಗೊಂಡಿರುವ ಅಪರಾಧ ಕಾಯ್ದೆ ತಿದ್ದುಪಡಿ ಮಸೂದೆ ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಪ್ರಬಲ ಪಾತ್ರ ನಿಭಾಯಿಸಲಿದೆ ಎಂಬ...
Date : Monday, 27-08-2018
ಶ್ರೀನಗರ: ಎರಡು ತಿಂಗಳುಗಳ ಕಾಲ ನಡೆದ ಅಮರನಾಥ ಯಾತ್ರೆ ಭಾನುವಾರ ಅಂತ್ಯಗೊಂಡಿದೆ. ಈ ಬಾರಿ ದಾಖಲೆ ಎಂಬಂತೆ 2.85 ಲಕ್ಷ ಭಕ್ತರು ಮಂಜಿನಿಂದ ಆವೃತನಾದ ಅಮರನಾಥನ ದರ್ಶನವನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ 2 ಲಕ್ಷದ 60 ಸಾವಿರ ಯಾತ್ರಿಕರು ಅಮರನಾಥ ದರ್ಶನ ಪಡೆದುಕೊಂಡಿದ್ದರು, ಈ...
Date : Monday, 27-08-2018
ನವದೆಹಲಿ: ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತವಾದ ರಕ್ಷಾಬಂಧನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ 55 ಮಂದಿ ಮಹಿಳೆಯರನ್ನು ಫಾಲೋ ಮಾಡಲಾರಂಭಿಸಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಸಾನಿಯಾ ಮಿರ್ಜಾ, ಕರ್ಮನ್ ಕೌರ್ ತಂಡಿ, ಪಿಟಿ ಉಷಾ, ಮಾಜಿ ಮಿಸ್ ಇಂಡಿಯಾ ಮತ್ತು...
Date : Saturday, 25-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಡ ಆ.25ರ ಶನಿವಾರ 7ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ 27 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಏಳನೇ ದಿನವಾದ ಇಂದು ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಕಲ್...
Date : Saturday, 25-08-2018
ವಾರಣಾಸಿ: ಪ್ರತಿ ಬಾರಿಯಂತೆ ಈ ಬಾರಿಯೂ ವಾರಣಾಸಿಯ ಮುಸ್ಲಿಂ ವುಮೆನ್ ಫೌಂಡೇಶನ್‌ನ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡಲು ರಾಖಿಯನ್ನು ತಯಾರಿಸುತ್ತಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಈ ಫೌಂಡೇಶನ್‌ನ ಮಹಿಳೆಯರು ಮೋದಿಯವರಿಗೆ ರಕ್ಷಬಂಧನದಂದು ರಾಖಿಯನ್ನು ಕಳುಹಿಸಿಕೊಟ್ಟಿದ್ದರು, ನಂತರ ಪ್ರತಿ ವರ್ಷ ಈ...
Date : Saturday, 25-08-2018
ನವದೆಹಲಿ: ಮಲಯಾಳಂ ಜನತೆ ಅತ್ಯಂತ ಸಂಭ್ರಮದಿಂದ ಆಚರಿಸುವ ಓಣಂ ಹಬ್ಬ ಆಗಮಿಸಿದೆ. ಆದರೆ ಈ ಹಿಂದೆ ಇರುತ್ತಿದ್ದ ಹಬ್ಬದ ಸಡಗರ ಇಂದು ಕೇರಳದಲ್ಲಿ ಕಾಣುತ್ತಿಲ್ಲ. ಅದಕ್ಕೆ ಕಾರಣ ನೆರೆ. ಪ್ರವಾಹಕ್ಕೆ ಭಾಗಶಃ ಕೊಚ್ಚಿ ಹೋಗಿರುವ ಕೇರಳಿಗರು ಸಾಂಕೇತಿಕವಾಗಿಯಷ್ಟೇ ಇಂದು ಓನಂ ಆಚರಿಸುತ್ತಿದ್ದಾರೆ. ಪ್ರಧಾನಿ...
Date : Saturday, 25-08-2018
ನವದೆಹಲಿ: ಶತಮಾನದ ಅತೀ ದೊಡ್ಡ ಪ್ರವಾಹಕ್ಕೆ ನಲುಗಿ ಹೋಗಿರುವ ಕೇರಳವನ್ನು ಮತ್ತೆ ಮರು ನಿರ್ಮಾಣ ಮಾಡುವ ಉದ್ದೇಶದೊಂದಿಗೆ ವಿಶ್ವದ ಅತೀ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರ ಫೌಂಡೇಶನ್ ರೂ.4.20 ಕೋಟಿಗಳ ನೆರವನ್ನು ಯುನೆಸೆಫ್‌ಗೆ ನೀಡಿದೆ. ದಿ ಬಿಲ್ ಆಂಡ್ ಮೆಲಿಂಡಾ...