ಲಕ್ನೋ: ಉತ್ತರಪ್ರದೇಶದ ಮೀರತ್ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಿಕ್ ಬೈಕ್ನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಟ್ಟಿದ್ದಾನೆ.
ವಕಾರ್ ಅಹ್ಮದ್ ಬೈಕ್ನ್ನು ಅಭಿವೃದ್ಧಿಪಡಿಸಿದ್ದು, ಈ ಬೈಕ್ ಗೆ ಇಂಜಿನ್ ಇಲ್ಲ, ಪೆಟ್ರೋಲ್ನ ಅಗತ್ಯವಿಲ್ಲ. ಮೊಬೈಲ್ ಅಥವಾ ಲ್ಯಾಪ್ಟಾಪ್ ಮಾದರಿಯಲ್ಲಿ ಚಾರ್ಜ್ ಮಾಡಬೇಕು ಅಷ್ಟೇ. ಈ ಬೈಕ್ಗೆ ‘ಮೋದಿ’ ಎಂದು ಈತ ನಾಮಕರಣ ಮಾಡಿದ್ದಾನೆ.
3 ಗಂಟೆಗಳ ಜಾರ್ಜ್ ಮಾಡಿದರೆ ಈ ಬೈಕ್ 150 ಕಿಮೀ ಸಂಚಾರ ಮಾಡಬಲ್ಲದು. ಇದಕ್ಕೆ ತಗಲುವ ವೆಚ್ಚ ಕೇವಲ ರೂ.20 ಮಾತ್ರ. ಬೈಕ್ ದರ ರೂ.70 ಸಾವಿರದಿಂದ ರೂ.75 ಸಾವಿರದವರೆಗೆ ಇರಲಿದೆ.
ಈ ಅದ್ಭುತ ಬೈಕ್ನ್ನು ಮಾರುಕಟ್ಟೆಗೆ ತರಲು ವಕಾರ್ ಅಹ್ಮದ್ ಪ್ರಯತ್ನಿಸುತ್ತಿದ್ದಾನೆ. ಇದಕ್ಕೆ ಅವರಿಗೆ ಕಂಪನಿಗಳ, ಸರ್ಕಾರ ಬೆಂಬಲ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.