
ನವದೆಹಲಿ: 61ನೇ ಯುಎನ್ಎಚ್ಆರ್ಸಿ ಸಭೆಯಲ್ಲಿ ಕಾಶ್ಮೀರ ವಿಚಾರ ಕೆದಕಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಒಮ್ಮೆಯೂ ಪೂರ್ಣಾವಧಿ ಅಧಿಕಾರ ಮಾಡಲು ಬಿಡದ ದೇಶವು ಭಾರತದ ಬಗ್ಗೆ ಪ್ರಜಾತಂತ್ರದ ಪಾಠ ಮಾಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಭಾರತ ಹರಿಹಾಯ್ದಿದೆ.
ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವ ದಾರ್ಷ್ಟ್ಯತನ ತೋರಿದೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಬಜೆಟ್ ಮೊತ್ತವು ಪಾಕಿಸ್ತಾನ ಐಎಂಎಫ್ನಲ್ಲಿ ಕೇಳುತ್ತಿರುವ ಸಾಲದ ಹಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಎನ್ನುವ ಮೂಲಕ ಪಾಕ್ ಆರ್ಥಿಕ ಸ್ಥಿತಿಯನ್ನು ಭಾರತದ ಪ್ರತಿನಿಧಿ ಅನುಪಮಾ ಸಿಂಗ್ ಅಣಕಿಸಿದ್ದಾರೆ.
ಫೆಬ್ರವರಿ 23 ರಿಂದ ಮಾರ್ಚ್ 31 ರವರೆಗೆ ನಡೆದ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನುಪಮಾ ಸಿಂಗ್, ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಮಾಡಿದ ಆರೋಪಗಳನ್ನು ತಿರಸ್ಕರಿಸಿದರು, ಗುಂಪು ಒಂದು ಸದಸ್ಯ ರಾಷ್ಟ್ರಕ್ಕೆ “ಪ್ರತಿಧ್ವನಿ ಕೊಠಡಿ” ಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಭಾರತದ ನಿಲುವನ್ನು ಪುನರುಚ್ಚರಿಸುತ್ತಾ, ಜಮ್ಮು ಮತ್ತು ಕಾಶ್ಮೀರವು “ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿತ್ತು, ಇದೆ ಮತ್ತು ಯಾವಾಗಲೂ ಉಳಿಯುತ್ತದೆ” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


