ನವದೆಹಲಿ: ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಂಜ್ಮೆಂಟ್ ದೇಶದ ನಂ.1 ಬ್ಯುಸಿನೆಸ್ ಸ್ಕೂಲ್ ಆಗಿ ಹೊರಹೊಮ್ಮಿದೆ. ಬಳಿಕ ಸ್ಥಾನವನ್ನು ಕ್ರಮವಾಗಿ ಐಐಎಂ ಕಲ್ಕತ್ತಾ ಮತ್ತು ಐಐಎಂ ಬೆಂಗಳೂರು ಪಡೆದುಕೊಂಡಿದೆ.
ಫಿನಾನ್ಶಿಯಲ್ ಟೈಮ್ಸ್ನ ಮಾಸ್ಟರ್ಸ್ ಇನ್ ಮ್ಯಾನೇಂಜ್ಮೆಂಟ್ ರ್ಯಾಂಕಿಂಗ್ ಪ್ರಕಾರ, ಏಷ್ಯಾದಲ್ಲೇ ಐಐಎಂ ಅಹ್ಮದಾಬಾದ್ ಎರಡನೇ ಸ್ಥಾನ, ಐಐಎಂ ಕಲ್ಕತ್ತಾ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಐಐಎಂ ಅಹ್ಮದಾಬಾದ್ 21ನೇ ಸ್ಥಾನ, ಐಐಎಂ ಕಲ್ಕತ್ತಾ 23ನೇ ಸ್ಥಾನವನ್ನು ಪಡೆದುಕೊಂಡಿದೆ.
ಈ ವರ್ಷದ ಸಮೀಕ್ಷೆಯಲ್ಲಿ ಜಗತ್ತಿನ104 ಬ್ಯುಸಿನೆಸ್ ಸ್ಕೂಲ್ಗಳು ಭಾಗವಹಿಸಿದ್ದವು.
ಚೀನಾದ ಶಾಂಘೈ ಜಿಯೋವು ಟಾಂಗ್ ಯೂನಿವರ್ಸಿಟಿ ಏಷ್ಯಾದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಹ್ಮದಾಬಾದ್ ಐಐಎಂ 2ನೇ ಸ್ಥಾನ ಪಡೆದುಕೊಂಡಿದೆ. ಕಲ್ಕತ್ತಾ ಐಐಎಂ 3ನೇ ಸ್ಥಾನ ಪಡೆದುಕೊಂಡಿದೆ. ಚೀನಾದ ಸ್ಕೇಮ ಬ್ಯುಸಿನೆಸ್ ಸ್ಕೂಲ್ 4ನೇ ಸ್ಥಾನ, ಬೆಂಗಳೂರು ಐಐಎಂ 5ನೇ ಸ್ಥಾನ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.