ನವದೆಹಲಿ: Saridon ಸೇರಿದಂತೆ ಸುಮಾರು 328 ವಿವಿಧ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್ ಮಾಡಿದೆ. ಇನ್ನು ಮುಂದೆ ಇವುಗಳ ಮಾರಾಟ, ಉತ್ಪಾದನೆ, ಖರೀದಿ ಸಂಪೂರ್ಣ ನಿಷಿದ್ಧವಾಗಿದೆ. ಫಿಕ್ಸ್ಡ್ ಡೋಸ್ ಕಾಂಬಿನೇಷನ್(ಎಫ್ಡಿಸಿ) ಔಷಧಿಗಳ ಮೇಲೆ ಕ್ರಮಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ಔಷಧಿಗಳನ್ನು ನಿಷೇಧ ಮಾಡಲಾಗಿದೆ.
ಒಂದೇ ಡೋಸೇಜ್ ರೂಪದಲ್ಲಿ ಎರಡು ಅಥವಾ ಹೆಚ್ಚಿನ ಔಷಧಿಗಳನ್ನು ಸ್ವೀಕರಿಸುವ ವಿಧಾನಕ್ಕೆ ಎಫ್ಡಿಸಿ ಎನ್ನುತ್ತಾರೆ. ಹೆಚ್ಚಿನ ರೋಗಗಳನ್ನು ನಿವಾರಿಸಲು ಕಡಿಮೆ ದರದಲ್ಲಿ ಸಿಗುವ ಔಷಧ ಇದಾಗಿವೆ. ಆದರೆ ಆರೋಗ್ಯದ ಮೇಲೆ ಇವುಗಳು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತವೆ. ಈ ಕಾರಣಕ್ಕಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಇವುಗಳನ್ನು ನಿಷೇಧ ಮಾಡಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.
ನಿಷೇಧದ ಪ್ರಯತ್ನಗಳು 2016ರಿಂದಲೇ ಜಾರಿಯಲ್ಲಿತ್ತು. ಈ ಔಷಧಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಡ್ರಗ್ಸ್ ಟೆಕ್ನಿಕಲ್ ಅಡ್ವೈ ಬೋರ್ಡ್ ವರದಿಯ ಅನುಸಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕ್ರಮದಿಂದಾಗಿ ಸುಮಾರು ರೂ.25,000 ಕೋಟಿ ಮೌಲ್ಯದ 6,000 ಮೆಡಿಸಿನ್ ಬ್ರ್ಯಾಂಡ್ಗಳ ಮೇಲೆ ಹೊಡೆತ ಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.