ನವದೆಹಲಿ: 2015ರಲ್ಲಿ ಹುತಾತ್ಮರಾದ 2 ಜಮ್ಮು ಕಾಶ್ಮೀರ ರೈಫಲ್ ಯುನಿಟ್ನ ರೈಫಲ್ಮ್ಯಾನ್ ರವೀಂದರ್ ಸಿಂಗ್ ಸಂಬ್ಯಾಲ್ ಅವರ ಪತ್ನಿ, ನೀರು ಸಂಬ್ಯಾಲ್ ಅವರು ಸೆ.8ರಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ.
ತನ್ನ ಪತಿಯ ತ್ಯಾಗ, ಮಗಳು ಸಾನಿಧ್ಯ ಮತ್ತು ಪತಿಯ ಯುನಿಟ್ನ ಅಭುತಪೂರ್ವ ಪ್ರೋತ್ಸಾಹ ನನ್ನನ್ನು ಭಾರತೀಯ ಸೇನೆ ಸೇರುವಂತೆ ಪ್ರೋತ್ಸಾಹಿಸಿತು ಎಂಬುದಾಗಿ ನೀರು ಹೇಳಿಕೊಂಡಿದ್ದಾರೆ.
ಚೆನ್ನೈನ ಆಫೀಸರ್ಸ್ ಅಕಾಡಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿರುವ ಇವರು, ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ.
2 ಜಮ್ಮು ಕಾಶ್ಮೀರ ರೈಫಲ್ ಯುನಿಟ್ ನನಗೆ ಕುಟುಂಬವಿದ್ದಂತೆ, ಅದರ ಪ್ರೋತ್ಸಾಹ ಉತ್ತೇಜನದಿಂದಾಗಿಯೇ ನಾನಿಂದು ಸೇನೆ ಸೇರಿದ್ದೇನೆ ಎಂದು ನೀರು ಹೇಳಿಕೊಂಡಿದ್ದಾರೆ.
ಇವರ ಮಾವ, ಪತಿ ರವೀಂದರ್ ಸಂಬ್ಯಾಲ್ ಅವರ ತಂದೆ ಕೂಡ ಸೈನಿಕರಾಗಿ ಸೇವೆ ಸಲ್ಲಿಸಿದವರು. ಇದು ಕೂಡ ನೀರು ಸಾಧನೆಗೆ ಪ್ರೇರಣೆಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.