ನವದೆಹಲಿ: ಗ್ರಾಹಕ ಉತ್ಪನ್ನಗಳಲ್ಲಿ ಭಾರೀ ಯಶಸ್ಸನ್ನು ಗಳಿಸಿರುವ ಯೋಗ ಗುರು ರಾಮ್ದೇವ್ ಬಾಬಾ ನೇತೃತ್ವದ ಪತಂಜಲಿ ಸಂಸ್ಥೆ, ಇದೀಗ ಮತ್ತಷ್ಟು ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹಾಲು, ಮೊಸರು, ಪನ್ನೀರ್, ಮಿನರಲ್ ವಾಟರ್ (ದಿವ್ಯ ಜಲ), ಘನೀಕೃತ ತರಕಾರಿಗಳು, ಸ್ಟೀಟ್ ಕಾರ್ನ್, ಪೊಟಾಟೋ ಫಿಂಗರ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಗೋವಿನ ಹಿಂಡಿ, ಇತರ ಆಹಾರ ಉತ್ಪನ್ನ, ಸೋಲಾರ್ ಪ್ಯಾನಲ್ನ್ನು ಬಿಡುಗಡೆ ಮಾಡಿದೆ.
ಪತಂಜಲಿಯ ಹಾಲಿನ ಬೆಲೆ ಇತರ ಬ್ರ್ಯಾಂಡೆಡ್ ಹಾಲಿಗಿಂತ ರೂ.2ರಷ್ಟು ಕಡಿಮೆಯಾಗಿರಲಿದೆ ಎಂದು ರಾಮ್ದೇವ್ ಹೇಳಿದ್ದಾರೆ. ಶೀಘ್ರದಲ್ಲೇ ಟೆಟ್ರಾ ಪ್ಯಾಕ್ಗಳಲ್ಲೂ ಹಾಲನ್ನು ಬಿಡುಗಡೆ ಮಾಡಲಿದೆ.
ಅಮೆಝಾನ್, ಫ್ಲಿಪ್ಕಾರ್ಟ್ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪತಂಜಲಿ, ಈಗಾಗಲೇ ಆನ್ಲೈನ್ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.