News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸೇನೆಗಳಿಗೆ ಸಂಪೂರ್ಣ ಸ್ವತಂತ್ರ ನೀಡಿದ ಮೋದಿ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಬುಧವಾರ ಮಹತ್ವದ ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಮೂರು ಸೇನಾ ಪಡೆಗಳಿಗೂ ಸಂಪೂರ್ಣ ಸ್ವತಂತ್ರವನ್ನು ನೀಡಿದ್ದಾರೆ. ಪ್ರಧಾನಿಯವರು ಶಸ್ತ್ರಾಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್...

Read More

ಮಸೂದ್ ಅಝರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಯುಎಸ್, ಫ್ರಾನ್ಸ್, ಬ್ರಿಟನ್ ಒತ್ತಾಯ

ವಿಶ್ವಸಂಸ್ಥೆ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಷೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಮೆರಿಕಾ, ಬ್ರಿಟನ್, ಫ್ರಾನ್ಸ್ ದೇಶಗಳು ಪ್ರಸ್ತಾಪ ಸಲ್ಲಿಸಲು ನಿರ್ಧರಿಸಿದೆ. ಇದು ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಭಾರತಕ್ಕೆ ಸಿಕ್ಕ ಮಹತ್ತರವಾದ...

Read More

ದೇಶದ ಮೊದಲ ವೇದ ಶಿಕ್ಷಣ ಮಂಡಳಿ ನೇತೃತ್ವ ಪತಂಜಲಿ ಟ್ರಸ್ಟ್‌ಗೆ ಸಿಗುವ ನಿರೀಕ್ಷೆ

ನವದೆಹಲಿ: ದೇಶದ ಮೊತ್ತ ಮೊದಲ ಸರ್ಕಾರಿ ಅನುಮೋದಿತ ವೇದ ಶಿಕ್ಷಣ ಮಂಡಳಿಗೆ ಯೋಗ ಗುರು ರಾಮದೇವ್ ಬಾಬಾ ಅವರು ಮುಖ್ಯಸ್ಥರಾಗುವ ನಿರೀಕ್ಷೆ ಇದೆ. ಪತಂಜಲಿ ಯೋಗಪೀಠ ಟ್ರಸ್ಟ್‌ಗೆ ಭಾರತೀಯ ಶಿಕ್ಷಣ ಮಂಡಳಿಯನ್ನು ರಚಿಸುವ ಜವಾಬ್ದಾರಿಯನ್ನು ನೀಡುವಂತೆ ಆಯ್ಕೆ ಸಮಿತಿ ಶಿಫಾರಸ್ಸು ಮಾಡಲಾಗುತ್ತಿದೆ....

Read More

15ಕ್ಕಿಂತ 16ನೇ ಲೋಕಸಭಾ ಶೇ.20ರಷ್ಟು ಹೆಚ್ಚು ಫಲಪ್ರದವಾಗಿತ್ತು: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ’ರಾಷ್ಟ್ರೀಯ ಯುವ ಸಂಸತ್ತು ಉತ್ಸವ 2019 ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ನಾಗಪುರ ಶ್ವೇತಾ ಉಮ್ರೆ ಅವರು ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಂಜನಾಕ್ಷಿ ದ್ವಿತೀಯ ಮತ್ತು ಪಾಟ್ನಾದ ಮಮತಾ ಕುಮಾರ್ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ....

Read More

ಅಮೆರಿಕಾ ಪಾಕ್‌ಗೆ ನುಗ್ಗಿ ಲಾಡೆನ್‌ನನ್ನು ಸಂಹರಿಸಿತ್ತು, ಅಂತಹ ಕಾರ್ಯ ನಮ್ಮಿಂದಾಗದೇ?: ಜೇಟ್ಲಿ

ನವದೆಹಲಿ: ಪಾಕಿಸ್ಥಾನದೊಳಗೆ ನುಗ್ಗಿ ಅಮೆರಿಕಾ ಒಸಾಮ ಬಿನ್ ಲಾಡೆನ್‌ನನ್ನು ಹೊಸಕಿ ಹಾಕಿತ್ತು, ಅಂತಹುದೇ ಕಾರ್ಯ ಭಾರತಕ್ಕೆ ಯಾಕೆ ಮಾಡಲಾಗುವುದಿಲ್ಲ, ಖಂಡಿತವಾಗಿಯೂ ಆಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸಾಧ್ಯವಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನೆರೆಯ ದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವ...

Read More

ಭಾರತವನ್ನು ಶಾಂತಿ ಮಾತುಕತೆಗೆ ಬರುವಂತೆ ಮನವಿ ಮಾಡಿದ ಪಾಕಿಸ್ಥಾನ

ನವದೆಹಲಿ: ಭಾರತ-ಪಾಕಿಸ್ಥಾನದ ಗಡಿಯಲ್ಲಿ ಉಭಯ ದೇಶಗಳ ನಡುವಣ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನಲೆಯಲ್ಲಿ ವಿಚಲಿತಗೊಂಡಿರುವ ಪಾಕಿಸ್ಥಾನ, ಭಾರತವನ್ನು ಮಾತುಕತೆಗೆ ಆಹ್ವಾನಿಸಿದೆ. ನಾವು ಯುದ್ಧವನ್ನು ಬಯಸುವುದಿಲ್ಲ, ಶಾಂತಿ ಬಯಸುತ್ತೇವೆ ಎಂದಿದೆ. ಪಾಕಿಸ್ಥಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ಅವರು ಭಾರತವನ್ನು...

Read More

ಇಸ್ರೇಲ್‌ನಿಂದ 50 ಹೆರೋನ್ ಡ್ರೋನ್ ಖರೀದಿಸಲಿದೆ ಭಾರತ

ನವದೆಹಲಿ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ)ಭಾರತಕ್ಕೆ 50 ಹೆರೋನ್ ಮಾನವರಹಿತ ವಾಯು ವಾಹಕ (Unmanned Aerial Vehicles) ಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿದೆ. 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದೆ. HERON ಎಂಬುದು ಮೀಡಿಯಂ ಅಲ್ಟಿಟ್ಯೂಡ್ ಲಾಂಗ್ ಎಂಡ್ಯುರನ್ಸ್ (MALE) ರಿಮೋಟ್ ಚಾಲಿತ...

Read More

ಅಜಿತ್ ದೋವಲ್- ಭಾರತದ ಮೌನ ರಕ್ಷಕ, ಪಾಕಿಸ್ಥಾನದ ದುಃಸ್ವಪ್ನ

ಭಾರತ ನಡೆಸಿದ ವೈಮಾನಿಕ ದಾಳಿ ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನು ರವಾನಿಸಿದೆ. ಸಂದೇಶ ಸ್ಪಷ್ಟ ಮತ್ತು ಗಟ್ಟಿಯಾಗಿದೆ- ನಮ್ಮೊಂದಿಗೆ ಕಾಲ್ಕೆರೆದು ಜಗಳಕ್ಕೆ ಬಂದರೆ ಪ್ರತ್ಯುತ್ತರ ನೀಡುತ್ತೇವೆ, ಕಠಿಣ ಪ್ರತ್ಯುತ್ತರ ನೀಡುತ್ತೇವೆ. ಈ ನೀತಿಯನ್ನು ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ಪಾಲಿಸಿಕೊಂಡು ಬರುತ್ತಿದೆ. ಭಾರತದ...

Read More

ಭಾರತದ ಎರಡು ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ ಎಂಬ ಪಾಕ್ ಹೇಳಿಕೆ ಅಪ್ಪಟ ಸುಳ್ಳು: ಭಾರತ

ಶ್ರೀನಗರ: ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನು ಭಾರತ ಅಲ್ಲಗೆಳೆದಿದೆ. ಪಾಕಿಸ್ಥಾನದ ದಾಳಿಯಿಂದ ಯಾವುದೇ ಯುದ್ಧ ವಿಮಾನ ಪತನಗೊಂಡಿಲ್ಲ ಎಂದು ಸ್ಪಷ್ಟಡಪಡಿಸಿದೆ. ಭಾರತದ ಎರಡು ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ, ಒಬ್ಬ ಪೈಲೆಟ್‌ನ್ನು ಬಂಧಿಸಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿತ್ತು....

Read More

ಗಡಿಯೊಳಗೆ ನುಸುಳಿದ್ದ ಪಾಕ್‌ನ ಎಫ್-16 ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ನವದೆಹಲಿ: ಭಾರತದ ಗಡಿಯೊಳಗೆ ನುಗ್ಗಿ ವಾಪಾಸ್ ತೆರಳುತ್ತಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಬುಧವಾರ ನೆಲಕ್ಕುರುಳಿಸಿದೆ. ಭಾರತದ ವಾಯು ವಲಯವನ್ನು ಉಲ್ಲಂಘಿಸಿ ಬಾಂಬ್ ಹಾಕುವ ಯತ್ನವನ್ನು ಪಾಕಿಸ್ಥಾನ ನಡೆಸಿದೆ, ಇದನ್ನು ದಿಟ್ಟ ಪ್ರತ್ಯುತ್ತರ ಮೂಲಕ ಹಿಮ್ಮೆಟ್ಟಿಸಿದ ಭಾರತೀಯ ವಾಯುಸೇನೆ...

Read More

Recent News

Back To Top