ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡಿಯನ್ಸ್ ಫ್ಯಾಕ್ಟರಿ ತಿರುಚಿರಪಳ್ಳಿ (OFT), 2020ರ ಹಣಕಾಸು ವರ್ಷದಿಂದ ಭಾರತೀಯ ನೌಕಾಸೇನೆಗಾಗಿ ಸ್ಟಬಿಲೈಝ್ಡ್ ಕಂಟ್ರೋಲ್ ಗನ್ ಸಿಸ್ಟಮ್ (SRCG)ಯನ್ನು ಉತ್ಪಾದನೆ ಮಾಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈಗಾಗಲೇ ಈ ಫ್ಯಾಕ್ಟರಿಯಲ್ಲಿ 13 ವಿಧದ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ SRCGಗಳನ್ನು ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಈ ಫ್ಯಾಕ್ಟರಿಯು ತೆಲಂಗಾಣದ ಗುಂಡೂರು ಹೊರವಲಯದ ನಗರದಲ್ಲಿದೆ.
SRCGಗಳು ರಿಮೋಟ್ ಆಪರೇಶನ್, ನಿಖರ ಫೈರಿಂಗ್ ಸಿಸ್ಟಮ್ ಮುಂತಾದ ಆಧುನಿಕ ಗುಣಗಳನ್ನು ಹೊಂದಲಿದೆ. SRCG ಭಾರತೀಯ ನೌಕೆಯ ಹಡಗುಗಳಲ್ಲಿನ ವೆಪನ್ ಸ್ಟೇಶನ್ಗಳಲ್ಲಿ ಇದರ ಬಳಕೆಯನ್ನು ಮಾಡಿಕೊಳ್ಳಲಾಗುತ್ತದೆ.
ಇದನ್ನು ಹೊರತುಪಡಿಸಿ, 12.7ಎಂಎಂ ಲಘುತೂಕದ ಎಎಂಆರ್ (Anti Material Rifle), 40 ಎಂಎಂ ಅಂಡರ್-ಬ್ಯಾರಲ್ ಗ್ರೆನೇಡ್ ಲಾಂಚರ್ (UBGL)ಗಳನ್ನು ಎಕೆ47/ತ್ರಿಚಿ ಅಸಾಲ್ಟ್ ರೈಫಲ್ (TAR) ಹಾಗೂ 30 ಎಂಎಂ ಅಟೊಮ್ಯಾಟಿಕ್ ಗ್ರೆನೇಡ್ ಲಾಂಚರ್ (AGS30) ಮೇಲೆ ಸಂಶೋಧನೆ ಮತ್ತು ಅಭಿವೃದ್ಧಿಯ ಯೋಜನೆಯನ್ನು ಆರ್ಡಿಯನ್ಸ್ ಫ್ಯಾಕ್ಟರಿ ತಿರುಚರಪಳ್ಳಿ ನಡೆಸುತ್ತಿದೆ.
ಈ ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಯು ವಿವಿಧ ಹಂತಗಳ ಅಭಿವೃದ್ಧಿಯಲ್ಲಿವೆ. ಇದಲ್ಲದೇ, ಫ್ಯಾಕ್ಟರಿಯು 12.7 ಎಂಎಂ SRCGಗಳನ್ನು ಇಸ್ರೇಲ್ನಿಂದ ಟ್ರಾನ್ಸ್ಫರ್ ಆಫ್ ಟೆಕ್ನಾಲಜಿ ಮೂಲಕ ಮಾಡುತ್ತಿದೆ.
ಸೇನೆಗೆ ಮತ್ತಷ್ಟು ಬಲ
ಇತ್ತೀಚಿಗೆ, ರಕ್ಷಣಾ ಸಚಿವಾಲಯವು 114 ಧನುಷ್ ಆರ್ಟಿಲರಿ ಗನ್ಗಳನ್ನು ಖರೀದಿ ಮಾಡಲು ಅನುಮೋದನೆಯನ್ನು ನೀಡಿದೆ, ಇದು ಸೇನೆಗೆ ಇನ್ನಷ್ಟು ಹೆಚ್ಚಿನ ಬಲವನ್ನು ನೀಡಲಿದೆ. ಈ ಗನ್ಗಳನ್ನು ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ ಉತ್ಪಾದನೆ ಮಾಡಲಿದೆ ಮತ್ತು ಇದು ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಮೊದಲ ಲಾಂಗ್ ರೇಂಜ್ ಗನ್ ಆಗಿದೆ. NATO 155mm ಶಸ್ತ್ರಾಸ್ತ್ರದ ಮೂಲಕ ಇದು ಫೈಯರ್ ಮಾಡಲಿದೆ. ಬೈ ಮಾಡ್ಯುಲರ್ ಚಾರ್ಜ್ ಸಿಸ್ಟಮ್(BMCS)ಗೆ ಇದು ಫಿಟ್ ಆಗಲಿದೆ. ಈ ಮೂಲಕ ಇದರ ರೇಂಜ್ ಹೆಚ್ಚಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.