ಮೋದಿ ಸರ್ಕಾರವನ್ನು ಟೀಕಿಸಲು ಪ್ರತಿಪಕ್ಷಗಳು ಸದಾ ತುದಿಗಾಲಲ್ಲಿ ನಿಂತಿರುತ್ತವೆ. ರಫೆಲ್ ಡೀಲ್, ರೈತರ ವಿಷಯದ ಬಗ್ಗೆ ಸರ್ಕಾರವನ್ನು ಸದಾ ಅವರು ಟೀಕಿಸುತ್ತಲೇ ಇರುತ್ತಾರೆ. ಆದರೆ ಎನ್ ಡಿಎ ಸರ್ಕಾರ ಒಂದೇ ಒಂದು ಹಗರಣವನ್ನೂ ನಡೆಸಿಲ್ಲ ಎಂಬುದು ಜನರಿಗೆ ತಿಳಿದಿರುವ ಕಾರಣ ಅವರ ಟೀಕೆಗಳೆಲ್ಲಾ ಠುಸ್ ಎನ್ನುತ್ತಿವೆ. ಹೀಗಾಗಿ ಅವರು, ಮತ್ತೊಂದು ಚಾಣಾಕ್ಷ್ಯ ತಂತ್ರಗಾರಿಕೆಯನ್ನು ಹೊರತಂದಿದ್ದಾರೆ. ಅದು ನಿರುದ್ಯೋಗದ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸುವುದು. ನಿರುದ್ಯೋಗ ಹೆಚ್ಚಾಗುತ್ತಿದ್ದರೂ ಇವರು ಅಂಕಿ-ಅಂಶಗಳನ್ನು ಬಚ್ಚಿಟ್ಟು ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು.
ಇತ್ತೀಚಿಗೆ ಮಾರ್ಚ್ 18ರಂದು ಬಿಡುಗಡೆಗೊಂಡ ಟೈಮ್ಸ್ ನೌ ಮತ್ತು ವಿಎಂಆರ್ ನ ಸಮೀಕ್ಷೆಯ ಪ್ರಕಾರ, ನಿರುದ್ಯೋಗ ಮುಂಬರುವ ಚುನಾವಣೆಯಲ್ಲಿ ಅತೀದೊಡ್ಡ ವಿಷಯವಾಗಲಿದೆ. ಶೇ.40.2ರಷ್ಟು ಮತದಾರರು ಈ ಬಗ್ಗೆ ಚಿಂತಿತರಾಗಿದ್ದಾರೆ. ಮೊದಲ ನೋಟದಲ್ಲಿ ಇದು ಮೋದಿ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡುವ ಹಾಗೆ ಕಾಣುತ್ತದೆ; ಆದರೆ, ಸಮೀಕ್ಷೆಯತ್ತ ಸೂಕ್ಷ್ಮವಾಗಿ ಸಮೀಕ್ಷೆಯನ್ನು ನೋಡಿದರೆ ನಮಗೆ ವಾಸ್ತವದ ಅರಿವಾಗುತ್ತದೆ.
ಸಮೀಕ್ಷೆಗೊಳಪಟ್ಟ ಶೇ.40ರಷ್ಟು ಮಂದಿ ನಿರುದ್ಯೋಗ ಸಮಸ್ಯೆ ಸುಧಾರಿಸಿದೆ ಎಂದು ಅಭಿಪ್ರಾಯಿಸಿದ್ದಾರೆ ಮತ್ತು ಯುಪಿಎ ಆಡಳಿತಕ್ಕಿಂತ ಎನ್ಡಿಎ ಆಡಳಿತದಲ್ಲಿ ಉದ್ಯೋಗ ಕಳೆದುಕೊಳ್ಳುವಿಕೆ ಕಡಿಮೆಯಾಗಿದೆ ಎಂದಿದ್ದಾರೆ. ಶೇ.30ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವಿಕೆ ನಿರಂತರ ಪ್ರಕ್ರಿಯೆ ಇದರಲ್ಲಿ ಸರ್ಕಾರದ ಹಸ್ತಕ್ಷೇಪಗಳಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಇಂದಿನ ಸರ್ಕಾರವನ್ನು ಇದಕ್ಕಾಗಿ ದೂರಲು ಸಾಧ್ಯವಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.
ಎಲ್ಲವನ್ನೂ ಗಮನಿಸಿದರೆ, ಹತ್ತಿರ ಹತ್ತಿರ ಶೇ.80ರಷ್ಟು ಜನರು ನಿರುದ್ಯೋಗ ಸಮಸ್ಯೆ ಇದ್ದರೂ ಅದನ್ನು ಸರ್ಕಾರಕ್ಕೆ ಸಂಬಂಧಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳ ತಂತ್ರಗಾರಿಕೆ ಇಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂಬುದು ಸ್ಪಷ್ಟವಾಗಿದೆ. ನಿರುದ್ಯೋಗವನ್ನು ಮತದಾರರ ನಡುವಣ ವಿಷಯವನ್ನಾಗಿಸಲು ಪ್ರತಿಪಕ್ಷಗಳು ಪ್ರಯತ್ನಿಸಿದವು, ಆದರೆ ಚಿಂತಾಜನಕ ರೀತಿಯಲ್ಲಿ ವಿಫಲಗೊಂಡವು. ಈ ಹಿಂದೆ, 108 ಆರ್ಥಿಕ ತಜ್ಞರು ಒಟ್ಟಿಗೆ ಬಂದು, ಭಾರತದ ಅಧಿಕೃತ ಡಾಟಾದ ನಿಖರತೆಯನ್ನು ಪ್ರಶ್ನಿಸಿದರು. ‘ನರೇಂದ್ರ ಮೋದಿ ಸರ್ಕಾರ ತಮಗೆ ಅನಾನುಕೂಲಕರವಾಗಿರುವ ಆರ್ಥಿಕ ವರದಿಯನ್ನು ಬಿಡುಗಡೆಗೊಳಿಸದೆ ತಡೆಹಿಡಿದಿದೆ’ ಎಂದಿದ್ದರು. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದ, 131 ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ಗಳು, ‘ವರದಿಯನ್ನು ಸ್ವತಂತ್ರ ಸಂಸ್ಥೆಗಳೂ ಪ್ರಕಟಗೊಳಿಸಿವೆ ಮತ್ತು ವರ್ಲ್ಡ್ ಬ್ಯಾಂಕ್, ಐಎಂಎಫ್ ನಂತಹ ಅಂತಾರಾಷ್ಟ್ರೀಯ ಏಜೆನ್ಸಿಗಳೂ ಪ್ರಕಟಗೊಳಿಸಿವೆ. ಇವುಗಳು ಭಾರತದ ಪ್ರಗತಿಯ ಕಥೆಯನ್ನು ದೃಢಪಡಿಸಿದೆ’ ಎಂದಿದ್ದಾರೆ.
‘ಉದ್ಯೋಗ ಇಲ್ಲದೇ ಇರುವಿಕೆಗಿಂತಲೂ ಉದ್ಯೋಗದ ಬಗೆಗಿನ ವರದಿ ಇಲ್ಲದೇ ಇರುವಿಕೆ ಇವರಿಗೆ ದೊಡ್ಡ ಸಂಗತಿಯಾಗಿದೆ. ‘ನಮ್ಮ ವಿರೋಧಿಗಳು ತಮ್ಮದೇ ಆಯ್ಕೆಯ ಚಿತ್ರವನ್ನು ಬಿಡಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ನಮ್ಮನ್ನು ತೆಗಳುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವರಾಜ್ಯ ಮ್ಯಾಗಜೀನ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಪ್ರತಿಪಕ್ಷಗಳಿಗೆ ದುರಾದೃಷ್ಟವಶಾತ್, ಸೂಡೋ ನಿರುದ್ಯೋಗ ಪ್ರಚಾರವನ್ನು ಜನರು ತಿರಸ್ಕರಿಸಿದ್ದಾರೆ. ಮೊದಲು ಅವರು, ನಿರುದ್ಯೋಗ ಡಾಟಾವನ್ನು ತಡೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದರು, ಬಳಿಕ ಅವರ ಆರೋಪ ಬ್ಯಾಕ್ ಪೈರ್ ಆಗುತ್ತಿದ್ದಂತೆ, ಜನರಿಗೆ ನಿರುದ್ಯೋಗ ಇರುವುದು ಭಾಸವಾಗುತ್ತಿದೆ ಎನ್ನಲು ಆರಂಭಿಸಿದರು. ಎಲ್ಲದಕ್ಕೂ ಮಿಗಿಲಾಗಿ, ಅವರಿಗೆ ಇನ್ನೂ ಕೆಟ್ಟದೆಂದರೆ, ರಫೆಲ್ ಡೀಲ್ ಬಗ್ಗೆ ಅವರು ಮಾಡಿದ ಹಗರಣದ ಆರೋಪ. ಇದು ದೊಡ್ಡ ಮಟ್ಟದಲ್ಲಿ ವರ್ಕ್ ಔಟ್ ಆಗುತ್ತದೆ ಎಂದು ಅವರು ಅಂದುಕೊಂಡಿದ್ದರು, ಆದರೆ ಸಮೀಕ್ಷೆಗೊಳಪಟ್ಟ ಶೇ.3ರಷ್ಟು ಮಂದಿ ಮಾತ್ರ ಈ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಇದರರ್ಥ ಜನರು ಸುಪ್ರೀಂಕೋರ್ಟ್ನ ತೀರ್ಪನ್ನು ನಂಬುತ್ತಾರೆಯೇ ಹೊರತು ರಾಹುಲ್ ಗಾಂಧಿಯವರ ಮಾತನ್ನಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ವಿಶ್ವದಲ್ಲಿ ಎರಡನೇ ಅತೀದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದು. ಅನುಮಾನವೇ ಇಲ್ಲ, ಸ್ಪರ್ಧೆ ಉನ್ನತ ಮಟ್ಟದಲ್ಲಿದೆ ಮತ್ತು ಉತ್ತಮ ವೇತನವನ್ನು ಹೊಂದುವ ಉದ್ಯೋಗವನ್ನು ಪಡೆಯುವುದು ದೊಡ್ಡ ಸವಾಲಿನ ಕೆಲಸ, ಇದು ನೈಸರ್ಗಿಕ ಪ್ರಕ್ರಿಯೆ, ಇದರಲ್ಲಿ ಮೋದಿಯನ್ನು ದೂಷಣೆ ಮಾಡುವಂತಹುದು ಏನೂ ಇಲ್ಲ. ಇದನ್ನು ಹೊರತುಪಡಿಸಿ, ಬಹುತೇಕ ಜನರು ಹಿಂದಿಗಿಂತ ಈಗ ನಿರುದ್ಯೋಗ ಸಮಸ್ಯೆ ಸುಧಾರಣೆಗೊಂಡಿದೆ ಎಂದು ಅಭಿಪ್ರಾಯಿಸಿದ್ದಾರೆ. ನಿರುದ್ಯೋಗದ ಬಗೆಗಿನ ಡಾಟಾವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ಹಳಿಯುವ ಪ್ರಯತ್ನ ಮಾಡಿತು, ಆದರೆ ಇದು ಮೋದಿಯ ಇಮೇಜ್ ಅನ್ನು ಡ್ಯಾಮೇಜ್ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.