
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆರೋಗ್ಯ ಮತ್ತು ಅವರ ಸ್ಥಳದ ಬಗ್ಗೆ ಆನ್ಲೈನ್ನಲ್ಲಿ ಹರಡುತ್ತಿರುವ ಊಹಾಪೋಹಗಳನ್ನು ಭಾರತದಲ್ಲಿನ ಇಸ್ರೇಲ್ ರಾಯಭಾರಿಯಾಗಿರುವ ರುವೆನ್ ಅಜರ್ ತಳ್ಳಿಹಾಕಿದ್ದಾರೆ. ನಾಯಕ ಬೆಂಜಮಿನ್ ನೆತನ್ಯಾಹು “ಜೀವಂತವಾಗಿದ್ದಾರೆ” ಮತ್ತು ಅವರ ವೈರಲ್ ಕೆಫೆ ವೀಡಿಯೊ ನಿಜವೇ ಹೊರತು ಎಐ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವದಂತಿಗಳ ನಡುವೆ ಮಾತನಾಡಿದ ಅಜರ್, ನೆತನ್ಯಾಹು ಕಾಫಿ ಕುಡಿಯುತ್ತಿರುವ ದೃಶ್ಯಗಳನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ನಾಯಕನ ಇತ್ತೀಚಿನ ಭಾಷಣವು AI-ರಚಿತವಾಗಿದೆ ಮತ್ತು ಅವರು ನಿಧನರಾಗಿದ್ದಾರೆ ಎಂಬ ಊಹಪೋಹಗಳು ಹಲವಾರು ಆನ್ಲೈನ್ ಪೋಸ್ಟ್ಗಳಲ್ಲಿ ಹಬ್ಬಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ. ಈ ವದಂತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿದ್ದು, ಪ್ರಧಾನಿ ಕಚೇರಿಯಿಂದ ಬಿಡುಗಡೆಯಾದ ವೀಡಿಯೊಗಳ ಸತ್ಯಾಸತ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಯಿತು.
ಈ ನಡುವೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವೈರಲ್ ಕೆಫೆ ವೀಡಿಯೊವನ್ನು AI-ರಚಿತ ಎಂದು ನೆಟಿಜನ್ಗಳು ಹೇಳಿಕೊಂಡ ಕೆಲವೇ ಗಂಟೆಗಳ ನಂತರ, ಜೆರುಸಲೆಮ್ ಕೆಫೆ ದಿ ಸತಾಫ್ಗೆ ನೆಹನ್ಯಾಹು ಭೇಟಿ ನೀಡಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇದು ನಾಯಕ ಜೀವಂತವಾಗಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ ಎಂಬ ಸೂಚನೆಗಳನ್ನು ನೀಡಿದೆ.
Israeli Ambassador to India Reuven Azar in a Press Conference has said that “Prime Minister Benjamin Netanyahu is very much alive and the video released from the cafe yesterday is not an AI”. @ReuvenAzar @IsraelinIndia
— Aditya Raj Kaul (@AdityaRajKaul) March 16, 2026
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


