ವಾಷಿಂಗ್ಟನ್: ಅಮೆರಿಕಾದಲ್ಲಿ ಅನಿವಾಸಿ ಭಾರತೀಯರು ಅತ್ಯಂತ ಪ್ರಭಾವಶಾಲಿ ಸಮುದಾಯವಾಗಿ ರೂಪುಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅಮೆರಿಕಾ ಪರಿಸರ ವ್ಯವಸ್ಥೆಯಲ್ಲಿ ಭಾರತೀಯರು ಮಿಂಚುತ್ತಿದ್ದಾರೆ, ಸಾಧನೆಯ ಉನ್ನತ ಶಿಖರವನ್ನು ಏರುತ್ತಿದ್ದಾರೆ. ಖ್ಯಾತ ಭಾರತೀಯ-ಅಮೆರಿಕನ್ ವಕೀಲೆ ನಿಯೋಮಿ ಜಹಂಗೀರ್ ರಾವ್ ಅವರು, ಪ್ರಭಾವಶಾಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ನ ಯುಎಸ್ ಸರ್ಕ್ಯುಟ್ ಜಡ್ಜ್ ಆಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ.
ಮಂಗಳವಾರ ವೈಟ್ ಹೌಸ್ನಲ್ಲಿನ ರೂಸ್ವೆಲ್ಟ್ ರೂಮ್ನಲ್ಲಿ ಯುಎಸ್ ಸುಪ್ರೀಂಕೋರ್ಟ್ ಜಡ್ಜ್ ಕ್ಲರೆನ್ಸ್ ಥೋಮಸ್ ಅವರು, ನಿಯೋಮಿ ಅವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಭಾಗಿಯಾಗಿದ್ದರು ಎನ್ನಲಾಗಿದೆ.
ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ ಅತ್ಯಂತ ಪ್ರಭಾವಶಾಲಿ ಕೋರ್ಟ್ ಆಗಿದ್ದು, ಯುಎಸ್ ಸುಪ್ರೀಂಕೋರ್ಟ್ಗಿಂತ ಕೆಳಗಿದೆ ಅಷ್ಟೇ. ಈ ಕೋರ್ಟ್ಗೆ ಜಡ್ಜ್ ಆಗುತ್ತಿರುವ ಎರಡನೇ ಭಾರತೀಯರು ಇವರಾಗಿದ್ದಾರೆ. ಇವರಿಗಿಂತ ಮೊದಲು ಶ್ರೀ ಶ್ರೀನಿವಾಸನ್ ಅವರು ಇಲ್ಲಿ ಜಡ್ಜ್ ಆಗಿದ್ದರು.
ಜೆರಿನ್ ರಾವ್ ಮತ್ತು ಜೆಹಂಗೀರ್ ರಾಬ್ ಎಂಬ ಭಾರತೀಯ ವೈದ್ಯ ದಂಪತಿಗಳ ಪುತ್ರಿ ಇವರಾಗಿದ್ದಾರೆ. ಕಳೆದ ನವೆಂಬರ್ನಲ್ಲಿ ಟ್ರಂಪ್ ನಿಯೋಮಿ ಹೆಸರನ್ನು ನಾಮನಿರ್ದೇಶನಗೊಳಿಸಿದ್ದರು. ಇವರ ನೇಮಕವನ್ನು 53-46 ಮತಗಳ ಮೂಲಕ ಸೆನೆಟ್ ದೃಢಪಡಿಸಿತ್ತು.
ನಿಯೋಮಿ ಅವರು ಆಂಟೊನಿನ್ ಸ್ಕಾಳಿಯ ಲಾ ಸ್ಕೂಲ್ ನಲ್ಲಿ, ಸ್ಟ್ರಕ್ಚರಲ್ ಕಾನ್ಸ್ಟಿಟ್ಯೂಷನ್ ಲಾ, ಅಡ್ಮಿನಿಸ್ಟ್ರೇಟಿವ್ ಲಾ, ಲೆಜಿಸ್ಲೇಶನ್, ಸ್ಟ್ಯಾಟುಟರಿ ಇಂಟರ್ಪ್ರಿಟೇಶನ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.