ನವದೆಹಲಿ: ಭಾರತೀಯ ಸೇನೆಗೆ 10 ಲಕ್ಷ ‘ಮೇಡ್ ಇನ್ ಇಂಡಿಯಾ’ ಹ್ಯಾಂಡ್ ಗ್ರೆನೇಡ್ಗಳನ್ನು ಖರೀದಿ ಮಾಡುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಈ ಗ್ರೆನೇಡ್ ಪ್ರಸ್ತುತ ಸೇನೆಯಲ್ಲಿ ಇರುವ ಗ್ರೆನೇಡ್ಗಳನ್ನು ರಿಪ್ಲೇಸ್ ಮಾಡಲಿದೆ. ಅಲ್ಲದೇ, ತೆಗ್, ತಲ್ವಾರ್ ಮತ್ತು ಸರ್ಯೂ ಯುದ್ಧನೌಕೆಗಳಿಗಾಗಿ ಮಲ್ಟಿಮೋಡ್ ಗ್ರೆನೇಡ್ ಮತ್ತು ಫೈಯರ್ ಕಂಟ್ರೋಲ್ ಸಿಸ್ಟಮ್ ಅನ್ನು ಖರೀದಿ ಮಾಡುವ ರೂ. 2355 ಕೋಟಿ ಮೊತ್ತದ ಪ್ರಾಜೆಕ್ಟ್ಗೂ ಅನುಮತಿ ನೀಡಲಾಗಿದೆ.
ದೇಶದೊಳಗೇ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪಾದನೆಪಡಿಸುವ ಕಾರ್ಯವನ್ನು ಉತ್ತೇಜಿಸುವ ಸಲುವಾಗಿ ಈ ಅನುಮೋದನೆಯನ್ನು ನೀಡಲಾಗಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮುಂಬರುವ ವರ್ಷಗಳ ರೂ. 25 ಸಾವಿರ ಕೋಟಿ ಮೊತ್ತದ ಪ್ರಾಜೆಕ್ಟ್ ಗಳಿಗೆ ಟೆಂಡರ್ ನೀಡುವ ವೇಳೆ ಅನುಸರಿಸಬೇಕಾದ ನೀತಿ ನಿರ್ದೇಶನಗಳ ಬಗ್ಗೆಯೂ ಅನುಮೋದನೆಯನ್ನು ನೀಡಲಾಗಿದೆ. ಅಲ್ಲದೇ, ಮಧ್ಯಮ ಮತ್ತು ಸಣ್ಣ ಶಿಪ್ಯಾರ್ಡ್ಗಳನ್ನು ಉತ್ತೇಜಿಸುವ ಅವುಗಳನ್ನು ಸಣ್ಣ ಪ್ರಾಜೆಕ್ಟ್ಗಳಿಗೆ ಅರ್ಹವನ್ನಾಗಿಸುವ ನಿಟ್ಟಿನಲ್ಲೂ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ,.
ಈಗಾಗಲೇ ಕೇಂದ್ರ ಸರ್ಕಾರವು ಭಾರತೀಯ ಸೇನೆಯ ವಿಶೇಷ ಘಟಕದ ಪ್ಯಾರಾಚೂಟ್ ರೆಜಿಮೆಂಟ್ಗೆ ಅಮೆರಿಕಾದಿಂದ ಅಸಾಲ್ಟ್ ರೈಫಲ್, ಶಸ್ತ್ರಾಸ್ತ್ರ, ಪ್ಯಾರಾಚೂಟನ್ನು ಮತ್ತಿತರ ವಿಶೇಷ ಪರಿಕರಗಳನ್ನು ಖರೀದಿಸುವ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿದೆ. ಮಾತ್ರವಲ್ಲದೇ, 72,400 7.6mm Sig Sauer ಅಸಾಲ್ಟ್ ರೈಫಲ್ ಅನ್ನು ಫಾಸ್ಟ್ ಟ್ರ್ಯಾಕ್ ಪ್ರಕ್ರಿಯೆ ಮೂಲಕ ಖರೀದಿ ಮಾಡಲು ನಿರ್ಧರಿಸಿದೆ. 700 ಕೋಟಿ ರೂಪಾಯಿಗಳ ಡೀಲ್ ಇದಾಗಿದ್ದು, ಇನ್ಫಾಂಟ್ರಿಯನ್ನು ಆಧುನೀಕರಿಸುವ ಉದ್ದೇಶವನ್ನು ಒಳಗೊಂಡಿದೆ. ಇಂತಹ ರೈಫಲ್ಗಳನ್ನು ಅಮೆರಿಕಾ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಬಳಕೆ ಮಾಡುತ್ತಿವೆ.
2014-18ರ ನಡುವೆ ಭಾರತ ವಿಶ್ವದ ಎರಡನೇ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಅದಕ್ಕೂ ಮೊದಲು ಭಾರತ ಮೊದಲ ಸ್ಥಾನದಲ್ಲಿತ್ತು. ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಭವಿಷ್ಯದಲ್ಲಿ ರಕ್ಷಣಾ ಪರಿಕರ ಆಮದನ್ನು ಮತ್ತಷ್ಟು ಕಡಿಮೆಗೊಳಿಸಲು ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.