
ಬೈಂದೂರು : ಈ ಭೌತಿಕ ಅಭಿವೃದ್ಧಿಯ ಆಚೆಗೂ ಒಂದು ಮಾನವೀಯ ಅಭಿವೃದ್ಧಿಯ ಹಾದಿಯಿದೆ ಎಂಬುದನ್ನು ಬಹಳ ಅಪರೂಪದ ನಾಯಕರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಅಪರೂಪದ ಮತ್ತು ಸಂವೇದನಾಶೀಲ ಜನನಾಯಕರ ಸಾಲಿನಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಬೈಂದೂರನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಅವರ ಕನಸಿನ ಕೂಸಾದ ಸಮೃದ್ಧ ಬೈಂದೂರು ಪರಿಕಲ್ಪನೆ. ಅದಕ್ಕೊಂದು ಜೀವಂತ ನಿದರ್ಶನ ಇಂದು ಕುಂದಾಪುರದ ಮೂಡಲಕಟ್ಟೆ ಎಂಐಟಿ MIT ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ.
ಆದಿದ್ವಾರ ಹಾಗೂ ಅಸಿಸ್ಟ್ ಟೆಕ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಿವ್ಯಾಂಗರಿಗಾಗಿ ಆದಿದ್ವಾರ ಜಾಬ್ ಹಬ್ಬ ಮತ್ತು ಕೈ ಕಳೆದುಕೊಂಡಿರುವ ವಿಕಲಚೇತನರಿಗೆ ಉಚಿತ ಕೃತಕ ರೋಬೋಟಿಕ್ ಕೈ ಜೋಡಣೆಯ ಅಳತೆ ಮಾಪನ ಶಿಬಿರವು, ಒಂದು ಕಾರ್ಯಕ್ರಮವಾಗಿರದೆ ನೂರಾರು ನೊಂದ ಜೀವಗಳಿಗೆ ಹೊಸ ಭರವಸೆಯ ಬೆಳಕಾಯಿತು. ಸಿಂಬಯೋನಿಕ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ ಪಾಲ್ಗೊಂಡ ದಿವ್ಯಾಂಗರ ಕಣ್ಣುಗಳಲ್ಲಿ ಕಂಡ ಆನಂದಭಾಷ್ಪ, ಶಾಸಕ ಗಂಟಿಹೊಳೆಯವರ ನಾಯಕತ್ವದ ನಿಜವಾದ ಯಶಸ್ಸು. ಈ ಒಂದು ಸುಂದರ ಕಾರ್ಯಕ್ರಮ ಹಾಗೂ ಅಲ್ಲಿ ಸೆರೆಹಿಡಿಯಲಾದ ಚಿತ್ರಗಳು ಬಹಳಷ್ಟು ಕಥೆಗಳನ್ನು ಹೇಳುತ್ತಿತ್ತು ಇದು ಕ್ಷೇತ್ರಕ್ಕೆ ಮಾಡುವ ಪ್ರಾಮಾಣಿಕ ಪ್ರಯತ್ನದ ದ್ಯೋತಕ ಚುನಾವಣಾ ದೃಷ್ಟಿಯಿಂದ ನೋಡಿದರೆ ದಿವ್ಯಾಂಗರು ದೊಡ್ಡ ವೋಟ್ ಬ್ಯಾಂಕ್ ಅಲ್ಲದಿರಬಹುದು. ಆದರೆ, ಶಾಸಕ ಗಂಟಿಹೊಳೆಯವರ ದೃಷ್ಟಿಯಲ್ಲಿ ಅವರು ಕರುಣೆಗೆ ಅರ್ಹರಾದವರಲ್ಲ, ಬದಲಾಗಿ ಅವಕಾಶ ವಂಚಿತ ಪ್ರತಿಭಾವಂತರು. ಅವರಿಗೆ ಉದ್ಯೋಗ ಮೇಳ ಆಯೋಜಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಈ ಪ್ರಯತ್ನ ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ.
ಇದು ಜನನಾಯಕನಿಗೆ ಇರುವ ಅಗಾಧ ಇಚ್ಛಾಶಕ್ತಿಯ ಸಂಕೇತ
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶವಾಗಿರುವ ಕುಂದಾಪುರ ಬೈಂದೂರು ಭಾಗಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ ಕೈ ಗಳನ್ನು ತರುವುದು, ಕಾರ್ಪೊರೇಟ್ ಕಂಪನಿಗಳನ್ನು ಮತ್ತು ಫೌಂಡೇಶನ್ ಗಳನ್ನು ಒಗ್ಗೂಡಿಸಿ ಉಚಿತವಾಗಿ ವಿತರಿಸಲು ಮುಂದಾಗುವುದು ಸಾಮಾನ್ಯದ ಮಾತಲ್ಲ. ಇದು ಗುರುರಾಜ್ ಗಂಟಿಹೊಳೆಯವರ ಬಲವಾದ ಇಚ್ಛಾಶಕ್ತಿ ಆಡಳಿತಾತ್ಮಕ ಎತ್ತಿಹಿಡಿದು ತೋರಿಸುತ್ತದೆ. ಇದು ಸಮಾಜದ ಮೇಲಿರುವ ನೈಜ ಕಳಕಳಿಯ ಪ್ರತಿರೂಪ.
ಕೈಕಾಲು ಕಳೆದುಕೊಂಡವರಿಗೆ ಕೇವಲ ಗಾಲಿ ಕುರ್ಚಿ ಅಥವಾ ಊರುಗೋಲು ಕೊಟ್ಟು ಕೈತೊಳೆದು ಕೊಳ್ಳುವವರೇ ಹೆಚ್ಚು. ಆದರೆ, ಕೃತಕ ರೋಬೋಟಿಕ್ ಕೈಗಳನ್ನು ಅಳವಡಿಸಿ, ಅವರು ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಡುತ್ತಿರುವ ಯೋಚನೆ ಶಾಸಕರ ಹೃದಯದಲ್ಲಿರುವ ನೈಜ ಸಾಮಾಜಿಕ ಕಳಕಳಿಯನ್ನು ಅನಾವರಣಗೊಳಿಸಿದೆ.
ಕ್ಷೇತ್ರಕ್ಕಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲ
ಸಮೃದ್ಧ ಬೈಂದೂರು ಆ ಭಾಗದ ಪ್ರತಿಯೊಬ್ಬ ಮನುಷ್ಯನ ಬದುಕು ಸಮೃದ್ಧವಾಗಬೇಕು ಎಂಬುದು ಶಾಸಕರ ಹಂಬಲ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ.ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ, ಇಚ್ಛಾಶಕ್ತಿ ತೋರಿದರೆ ಆಡಳಿತ ಯಂತ್ರವನ್ನು ಬಡವರ, ಶೋಷಿತರ, ಹಾಗೂ ದಿವ್ಯಾಂಗರ ಮನೆ ಬಾಗಿಲಿಗೆ ಹೇಗೆ ಕೊಂಡೊಯ್ಯಬಹುದು ಎಂಬುದಕ್ಕೆ ಗುರುರಾಜ್ ಗಂಟಿಹೊಳೆ ಅವರು ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಅಧಿಕಾರ ಇರುವುದು ದರ್ಪ ತೋರಲಲ್ಲ, ದೀನ ದಲಿತರ ಕಣ್ಣೊರೆಸಲು ಎಂಬ ಪದ ಅನ್ವರ್ಥವಾಗಿರುವ ಈ ಕಾರ್ಯಕ್ರಮ, ಸಮೃದ್ಧ ಬೈಂದೂರು ಭವಿಷ್ಯದಲ್ಲಿ ಇನ್ನಷ್ಟು ಸಾರ್ಥಕ ಹೆಜ್ಜೆಗಳನ್ನಿಡಲಿದೆ ಎಂಬುದರ ಶುಭ ಮುನ್ನುಡಿ ಆ ರೋಬೋಟಿಕ್ ಕೈಗಳು ಕೇವಲ ದಿವ್ಯಾಂಗರ ಕೈಗಳಾಗುವುದಿಲ್ಲ, ಅವು ಬೈಂದೂರಿನ ಅಭಿವೃದ್ಧಿಯ ರಥವನ್ನು ಎಳೆಯುವ ಶಕ್ತಿಶಾಲಿ ಕರಗಳಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


