ನವದೆಹಲಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2019 ಗುರುವಾರ ಸಮಾಪನಗೊಳ್ಳುತ್ತಿದೆ. ಭಾರತೀಯ ಕ್ರೀಡಾಳುಗಳು ಈ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದು, ಒಟ್ಟು 368 ಪದಕಗಳನ್ನು ಜಯಿಸಿದ್ದಾರೆ. ಇದರಲ್ಲಿ 85 ಬಂಗಾರ, 154 ಬೆಳ್ಳಿ, 129 ಕಂಚು ಸೇರಿದೆ. ಇಂದು ಸಂಜೆ ಅತ್ಯದ್ಭುತವಾದ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.
ವಿಶ್ವವಿಖ್ಯಾತ ಗಾಯಕರಾದ ನಿಕೋಲ್ ಶೆರ್ಜಿಂಜರ್ ಮತ್ತು ಕೀಲಾ ಸೆಟ್ಲ್ ಅವರು ಸಮಾಪನ ಸಮಾರಂಭದ ವೇದಿಕೆಯಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ.
ಸಮಾರಂಭದಲ್ಲಿ 2019 ರ ವಿಶೇಷ ಒಲಿಂಪಿಕ್ಸ್ನ ಅಧಿಕೃತ ‘ರೈಟ್ ವೇರ್ ಐ ಆಮ್ ಸಪೋಸ್ಡ್ ಟು ಬಿ’ ಮ್ಯೂಸಿಕ್ ವೀಡಿಯೊದ ಪ್ರಥಮ ಪ್ರದರ್ಶನವೂ ಕೂಡಾ ನೆರವೇರಲಿದೆ.
ಕ್ರೀಡಾಕೂಟದ ಯಶಸ್ವಿಗೆ ಅವಿರತವಾಗಿ ದುಡಿದ ಸುಮಾರು 20,000 ಸ್ವಯಂಸೇವಕರನ್ನು ಕಾರ್ಯಕ್ರಮದಲ್ಲಿ ಮುನ್ನಲೆಗೆ ತಂದು ಗೌರವವನ್ನು ಅರ್ಪಣೆ ಮಾಡಲಾಗುತ್ತಿದೆ.
ಅಧಿಕೃತವಾಗಿ ಅಂತ್ಯಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕ್ರೀಡಾಳುಗಳು ಮತ್ತು ಅವರ ತರಬೇತುದಾರರು ಪೆರೇಡ್ ಅನ್ನೂ ನಡೆಸಲಿದ್ದಾರೆ.
ಇದೇ ಮೊದಲ ಬಾರಿಗೆ ಈ ಕ್ರೀಡಾಕೂಡದಲ್ಲಿ ಭಾರತೀಯ ಫುಟ್ಸಲ್ ಆಟಗಾರರು ಮತ್ತು ಜುಡೋ ಆಟಗಾರರು ಭಾಗವಹಿಸಿದ್ದರು. ಭಾರತದ ವಿಶೇಷ ಅಥ್ಲೀಟ್ಗಳು ಜೂಡೋದಲ್ಲಿ 3 ಬಂಗಾರ ಮತ್ತು 1 ಬೆಳ್ಳಿ ಜಯಿಸಿದರು. ಫುಟ್ಸಲ್ ಆಟದಲ್ಲಿ 1 ಬೆಳ್ಳಿ ಜಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.