News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೌರಿ ಲಂಕೇಶ್‌ಗೆ ಯಾಕೆ ಭದ್ರತೆ ಕೊಟ್ಟಿಲ್ಲ ಎಂಬುದಕ್ಕೆ ಸಿದ್ದರಾಮಯ್ಯ ಉತ್ತರಿಸಲಿ: ರವಿಶಂಕರ್ ಪ್ರಸಾದ್

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಾಕೆ ಕರ್ನಾಟಕ ಸರ್ಕಾರ ಕೊಲೆಯಾದ ವಿಚಾರವಾದಿಗಳಿಗೆ ಭದ್ರತೆಯನ್ನು ಒದಗಿಸಿಲ್ಲ ಎಂಬುದನ್ನು ತಿಳಿದುಕೊಳ್ಳಿ...

Read More

2019ರ ಮಾರ್ಚ್‌ನೊಳಗೆ 5.5 ಲಕ್ಷ ಗ್ರಾಮಪಂಚಾಯತಿಗಳಿಗೆ ವೈಫೈ ಒದಗಿಸುವ ಗುರಿ

ನವದೆಹಲಿ: 2019ರ ಮಾರ್ಚ್‌ನೊಳಗೆ ದೇಶದ 5.5 ಲಕ್ಷ ಗ್ರಾಮಗಳಿಗೆ ವೈಫೈ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 3,700ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸುತ್ತಿದೆ. ‘2019ರ ಮಾರ್ಚ್‌ನೊಳಗೆ ವೈಫೈ ಸಂಪರ್ಕ ಕಲ್ಪಿಸಲು 2.5 ಲಕ್ಷ ಗ್ರಾಮ ಪಂಚಾಯತಿಗಳಿಗೆ ಟೆಂಡರ್ ಕೊಡುತ್ತೇವೆ. ಇದು ದೊಡ್ಡ ಗುರಿ, ಈ...

Read More

ಸಿಂಗಲ್ ಎಂಜಿನ್ ಪ್ಲೇನ್ ಹಾರಿಸಿದ ಅತೀ ಕಿರಿಯ ಯುಎಇ ಭಾರತೀಯ

ದುಬೈ: ಯುಎಇಯಲ್ಲಿನ ಭಾರತೀಯ ಮೂಲದ 14 ವರ್ಷದ ಬಾಲಕ ಸಿಂಗಲ್ ಎಂಜಿನ್ ಏರ್‌ಕ್ರಾಫ್ಟ್‌ನ್ನು ಹಾರಿಸುವ ಅತೀ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮನ್ಸೋರ್ ಅನಿಸ್ ಶಾರ್ಜಾದಲ್ಲಿನ ದೆಲ್ಲಿ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಇದೀಗ ಈತ ತನ್ನ ಮೊದಲ...

Read More

ಸಾವಿನಲ್ಲೂ ಇಬ್ಬರ ಜೀವ ಉಳಿಸಿದ 14 ತಿಂಗಳ ಪುಟಾಣಿ

ಅಂಗಾಂಗ ದಾನದ ಮಹತ್ವದ ಬಗ್ಗೆ ಹೆಚ್ಚಿನ ಭಾರತೀಯರಿಗೆ ಇನ್ನೂ ತಿಳಿದಿಲ್ಲ. ಆದರೂ ಅಲ್ಲಲ್ಲಿ ಜನರು ತಮ್ಮನ್ನಗಲಿದವರ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಜೀವ ಉಳಿಸುತ್ತಾರೆ. ಮಾತ್ರವಲ್ಲ ತಮ್ಮ ಪ್ರೀತಿ ಪಾತ್ರರ ಅಂಗ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿರುವುದನ್ನು ಕಂಡು ತುಸು ನೆಮ್ಮದಿ ಕಾಣುತ್ತಾರೆ....

Read More

ಪರ್ಯಾಯ ಇಂಧನದತ್ತ ಮುಖ ಮಾಡಲು ವಾಹನ ಉತ್ಪಾದಕರಿಗೆ ಗಡ್ಕರಿ ಸಲಹೆ

ನವದೆಹಲಿ: ಪರಿಸರವನ್ನು ಕಲುಷಿತಗೊಳಿಸುವ ಸಾಂಪ್ರದಾಯಿಕ ಇಂಧನದ ವಾಹನಗಳ ಉತ್ಪಾದಕರಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಕಟು ಸಂದೇಶವನ್ನು ನೀಡಿದ್ದಾರೆ. ಪರ್ಯಾಯ ಇಂಧನದತ್ತ ಮುಖ ಮಾಡಿ ಇಲ್ಲವೇ ಸವಾಲು ಎದುರಿಸಿ ಎಂಬ ಸಂದೇಶ ನೀಡಿದ್ದಾರೆ. ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಪರಿಚಯಿಸಲು...

Read More

ಮಾಜಿ ಸೈನಿಕರಿಗೆ, ಹುತಾತ್ಮರ ಅವಲಂಬಿತರಿಗೆ 13 ಕೋಟಿ.ರೂ ಬಿಡುಗಡೆಗೊಳಿಸಿದ ನಿರ್ಮಲಾ

ನವದೆಹಲಿ: ನೂತನ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿರುವ ನಿರ್ಮಲಾ ಸೀತಾರಾಮನ್ ಅವರು ಯೋಧರ ಹಿತಾಸಕ್ತಿಯನ್ನು ಕಾಪಾಡುವ ಭರವಸೆಯನ್ನು ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರು ರೂ.13 ಕೋಟಿಯನ್ನು ಬಿಡುಗಡೆಗೊಳಿಸಿದ್ದು, ಇದು 8685 ಹುತಾತ್ಮರ ವಿಧವೆಯರಿಗೆ, ಅವರ ಮೇಲೆ ಅವಲಂಬಿತರಾಗಿರುವ ಇತರ ಕುಟುಂಬ ಸದಸ್ಯರಿಗೆ,...

Read More

ರೂ.1ಕ್ಕೆ ಕಾರ್ಪೋರೇಟ್ ಇ-ಮೇಲ್ ಸೇವೆ ಆರಂಭಿಸಿದ BSNL

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇಂದು ಜೈಪುರ ಮೂಲದ ಸಂಸ್ಥೆ ಡಾಟಾ ಇನ್ಫೋಸಿಸ್‌ನ ಪಾಲುದಾರಿಕೆಯಲ್ಲಿ 1 ರೂಪಾಯಿಗೆ ಕಾರ್ಪೋರೇಟ್ ಇ-ಮೇಲ್ ಸೇವೆಯನ್ನು ಆರಂಭಿಸಿದೆ. ಗ್ರಾಹಕರ ಡಾಟಾದ ಖಾಸಗಿತನ ಮತ್ತು ಭದ್ರತೆಯನ್ನು ಕಾಪಾಡುವ ಸಲುವಾಗಿ ಇ-ಮೇಲ್ ಸರ್ವಿಸ್ ಆರಂಭಿಸಿರುವುದಾಗಿ ಬಿಎಸ್‌ಎನ್‌ಎಲ್ ಹೇಳಿದೆ. ಬಿಎಸ್‌ಎನ್‌ಎಲ್ ಗ್ರಾಹಕರು...

Read More

ವಾರಣಾಸಿಯಲ್ಲಿ ಪಾನ್ ತಿಂದು ರಸ್ತೆಯಲ್ಲಿ ಉಗುಳಿದರೆ 500.ರೂ ದಂಡ

ವಾರಣಾಸಿ: ಬನರಾಸಿ ಪಾನ್ ದೇಶದಲ್ಲೇ ಅತೀ ಪ್ರಸಿದ್ಧಿಯನ್ನು ಪಡೆದಿದೆ. ಬಾಲಿವುಡ್ ಗೀತೆಯಲ್ಲೂ ಈ ಪಾನ್ ರಾರಾಜಿಸಿದೆ. ಇದರೆಡಿಗಿನ ಜನರ ಪ್ರೀತಿಯಿಂದಾಗಿ ಪವಿತ್ರ ವಾರಣಾಸಿ ಕೊಳಕಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಅಲ್ಲಿನ ಮಹಾನಗರ ಪಾಲಿಕೆ ಪಾನ್ ತಿಂದು ರಸ್ತೆಯಲ್ಲಿ ಉಗುಳುವವರ ವಿರುದ್ಧ 500 ರೂಪಾಯಿ ದಂಡ...

Read More

ಕನ್ನಡದಲ್ಲಿ ಬ್ಯಾಂಕಿಂಗ್ ಸೇವೆ: ಜೇಟ್ಲಿ ಭೇಟಿಯಾಗಲಿದೆ ಕನ್ನಡ ಪ್ರಾಧಿಕಾರದ ನಿಯೋಗ

ಬೆಂಗಳೂರು: ಬ್ಯಾಂಕಿಂಗ್ ಸೇವೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೇ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಪ್ರಾಧಿಕಾರದ ಮುಖ್ಯಸ್ಥ ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ ನಿಯೋಗ ಮನವಿಯನ್ನು ಸಲ್ಲಿಸುವುದಕ್ಕಾಗಿ...

Read More

ವಿಶ್ವದ ಟಾಪ್ 1000 ವಿಶ್ವವಿದ್ಯಾಲಯಗಳ ಪೈಕಿ ಆಂಧ್ರದ ಎರಡು ವಿಶ್ವವಿದ್ಯಾಲಯಗಳು

ಹೈದರಾಬಾದ್: ಟೈಮ್ಸ್‌ನ ‘ಹೈಯರ್ ಎಜುಕೇಶನ್ ವರ್ಲ್ಡ್ ಯೂನಿರ್ವಸಿಟಿ ರ್ಯಾಕಿಂಗ್ 2018’ ಪಟ್ಟಿಯಲ್ಲಿನ ಟಾಪ್ 1000 ವಿಶ್ವವಿದ್ಯಾಲಯಗಳ ಪೈಕಿ ಭಾರತದ 30 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿದೆ. ಆಂಧ್ರಪ್ರದೇಶದ ಎರಡು ವಿಶ್ವವಿದ್ಯಾನಿಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಒಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಶ್ರೀ ವೆಂಕಟೇಶ್ವ ವಿಶ್ವವಿದ್ಯಾಲಯ...

Read More

Recent News

Back To Top