ನವದೆಹಲಿ: ಸ್ವಾತಂತ್ರ್ಯದ ಬಳಿಕ ನಡೆದ ವಿವಿಧ ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗಿರುವ 22,600 ಭಾರತೀಯ ಯೋಧರ ಗೌರವಾರ್ಥ ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಸಮೀಪ ನಿರ್ಮಾಣಗೊಂಡಿರುವ ‘ರಾಷ್ಟ್ರೀಯ ಯುದ್ಧ ಸ್ಮಾರಕ ‘ ಜ.26ರ ಗಣರಾಜ್ಯೋತ್ಸವದಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಜ.25ರೊಳಗೆ ಸ್ಮಾರಕದ ಕಾಮಗಾರಿ ಅಂತ್ಯಗೊಳಿಸಲು ರಕ್ಷಣಾ ಸಚಿವಾಲಯ ತ್ವರಿತ ಕಾರ್ಯವನ್ನು ಮಾಡುತ್ತಿದೆ.
ಗಣರಾಜ್ಯೋತ್ಸವದಂದು ಈ ಸ್ಮಾರಕದಲ್ಲಿ ಹಾರ ಸಮರ್ಪಣೆ ಕಾರ್ಯಕ್ರಮ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಸೇನೆಗೆ ಅಭಿಪ್ರಾಯ ತಿಳಿಸಲು ಸೂಚಿಸಲಾಗಿದೆ ಎನ್ನಲಾಗಿದೆ. ಹಾರ ಸಮರ್ಪಣೆ ಸಮಾರಂಭವನ್ನು ಸಾಂಪ್ರದಾಯಿಕವಾಗಿ ಅಮರ ಜ್ಯೋತಿಯಲ್ಲಿ ನಡೆಸಲಾಗುತ್ತದೆ.
ಈ ಸ್ಮಾರಕ ಸೇನಾಪಡೆಗಳ ಬಹಳ ವರ್ಷಗಳ ಬೇಡಿಕೆಯಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ 2015ರ ಅಕ್ಟೋಬರ್ನಲ್ಲಿ ಇದರ ಸ್ಥಾಪನೆಗೆ ಅನುಮೋದನೆಯನ್ನು ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.