ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2016ರ ಆಗಸ್ಟ್ 9 ರಂದು ಅನುಷ್ಠಾನಕ್ಕೆ ತಂದಿರುವ ಪ್ರಧಾನ ಮಂತ್ರಿ ರೋಜ್ಗಾರ್ ಪ್ರೋತ್ಸಾಹನ್ ಯೋಜನಾದಡಿ 98.38 ಲಕ್ಷ ಜನರಿಗೆ ಪ್ರಯೋಜನವಾಗಿದೆ.
ಈ ಯೋಜನೆಯಡಿ ಭಾರತ ಸರ್ಕಾರ, ನೂತನ ಉದ್ಯೋಗಿಗಳಿಗೆ 3 ವರ್ಷಗಳ ಕಾಲ ಉದ್ಯೋಗಿಯ ಕೊಡುಗೆಯ ಇಪಿಎಫ್ ಮತ್ತು ಇಪಿಎಸ್ ಶೇ.12ರಷ್ಟನ್ನು ನೀಡುತ್ತದೆ.
ರೂ.15 ಸಾವಿರ ಆದಾಯ ಗಳಿಸುವ ಉದ್ಯೋಗಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ. 2018ರ ಡಿಸೆಂಬರ್ 31ರ ವೇಳೆಗೆ 1.21 ಲಕ್ಷ ಸಂಸ್ಥೆಗಳ 98.38 ಉದ್ಯೋಗಿಗಳಿಗೆ ಇದರ ಪ್ರಯೋಜನವಾಗಿದೆ.
ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗಾವರ್ ಅವರು ಲೋಕಸಭೆಯಲ್ಲಿ ನೀಡಿರುವ ಲಿಖಿತ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಸುಮಾರು 17,46,468 ಉದ್ಯೋಗಿಗಳು ರೂ. 5,47,06,12,241 ಸಬ್ಸಿಡಿ ಹಣದ ಪ್ರಯೋಜನ ಪಡೆದಿದ್ದಾರೆ. ತಮಿಳುನಾಡಿನಲ್ಲಿ 11,77,433 ಉದ್ಯೋಗಿಗಳು ರೂ. 3,81,60,56,107 ಸಬ್ಸಿಡಿ ಹಣದ ಪ್ರಯೋಜನ ಪಡೆದಿದ್ದಾರೆ. ಯೋಜನೆಯಿಂದ ಪ್ರಯೋಜನ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.