
ನವದೆಹಲಿ: ಮೇಜರ್ ಅಭಿಲಾಷಾ ಬಾರಕ್ ಅವರಿಗೆ ಯುನೈಟೆಡ್ ನೇಷನ್ಸ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಮೇಜರ್ ಅಭಿಲಾಷಾ ಬಾರಕ್ ಅವರಿಗೆ ಈ ಗೌರವ ಸಿಗುವುದು ಅವರ ಉತ್ತಮ ಕೆಲಸಕ್ಕೆ ದೊರೆತ ಮನ್ನಣೆ. ಇದು ಶಾಂತಿ ಕಾಪಾಡುವ ಕಾರ್ಯದಲ್ಲಿ ಭಾರತದ ಭಾಗವಹಿಸುವಿಕೆಯನ್ನು ತೋರಿಸುತ್ತದೆ” ಎಂದಿದ್ದಾಋಎ
“ಮೇಜರ್ ಅಭಿಲಾಷಾ ಬಾರಕ್ ಸಾಧನೆ ನಮ್ಮ ದೇಶಕ್ಕೆ ಮತ್ತು ಮಾನವೀಯತೆಗೆ ಸೇವೆ ಮಾಡುವ ಲಕ್ಷಾಂತರ ಯುವಕರಿಗೆ ಸ್ಫೂರ್ತಿ” ಎಂದು ಮೋದಿ ಬಣ್ಣಿಸಿದ್ದಾರೆ.
ಮೇಜರ್ ಅಭಿಲಾಷಾ ಬಾರಕ್ ಅವರು ಈಗ ಲೆಬನಾನ್ನಲ್ಲಿರುವ ಯುನೈಟೆಡ್ ನೇಷನ್ಸ್ ಇಂಟರಿಮ್ ಫೋರ್ಸ್ (UNIFIL) ನಲ್ಲಿ ತಂಡದ ನಾಯಕಿ ಮತ್ತು ಲಿಂಗ ಸಮಸ್ಯೆಗಳ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



