ನವದೆಹಲಿ: ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಇರಾನಿನ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇರುವ ಚಬಹಾರ್ ಬಂದರಿನಲ್ಲಿ ಭಾರತದ ಕಾರ್ಯಾಚರಣೆ ಆರಂಭಗೊಂಡಿದೆ.
ಭಾರತ ತನ್ನ ಗಡಿಯ ಹೊರಗಡೆ ನಡೆಸುತ್ತಿರುವ ಮೊತ್ತ ಮೊದಲ ಕಾರ್ಯಾಚರಣೆ ಇದಾಗಿದೆ.
ಶಿಪ್ಪಿಂಗ್ ಸಚಿವಾಲಯದ ಪ್ರಕಟನೆಯ ಪ್ರಕಾರ, ಇರಾನಿನ ಚಬಹಾರ್ನಲ್ಲಿನ ಶಹೀದ್ ಬೆಹೆಶಿತ್ ಬಂದರಿನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದೆ. 2018ರ ಡಿ.24ರಂದು ತ್ರಿಪಕ್ಷೀಯ ಸಭೆಯಲ್ಲಿ ಭಾರತ, ಇರಾನ್, ಅಫ್ಘಾನಿಸ್ತಾನ್ ಇಲ್ಲಿ ಜಂಟಿಯಾಗಿ ಕಛೇರಿಯನ್ನು ಉದ್ಘಾಟನೆಗೊಳಿಸಿವೆ. ಇಂಡಿಯನ್ ಎಸ್ಪಿವಿ-ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಚಬಹಾರ್ ಫ್ರೀ ಝೋನ್ ಕಛೇರಿ ಚಬಹಾರ್ನಲ್ಲಿ ಕಾರ್ಯಾರಂಭಿಸಿದೆ.
2003ರಲ್ಲಿ ಚಬಹಾರ್ ಬಂದರಿನ ಬಗ್ಗೆ ಭಾರತ ಮಾತುಕತೆಯನ್ನು ಆರಂಭಿಸಿತ್ತು, ಉಭಯ ದೇಶಗಳ ನಡುವೆ ಒಪ್ಪಂದಕ್ಕೆ 2015ರ ಮೇನಲ್ಲಿ ಸಹಿ ಬಿದ್ದಿತ್ತು. ಈ ಒಪ್ಪಂದದಿಂದಾಗಿ ಚಬಹಾರ್ ಬಂದರಿನಲ್ಲಿ ಕಾರ್ಯಾಚರಿಸುವ ಬಗ್ಗೆ ಕಾಂಟ್ರ್ಯಾಕ್ಟ್ ಏರ್ಪಟ್ಟಿದೆ. 2016ರ ಮೇ 23ರಂದು ಪ್ರಧಾನಿ ನರೇಂದ್ರ ಮೋದಿ ತೆಹ್ರಾನ್ಗೆ ಭೇಟಿ ನೀಡಿದ ವೇಳೆ ಈ ಕಾಂಟ್ರ್ಯಾಕ್ಟ್ ಕಾರ್ಯರೂಪಕ್ಕೆ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.