News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಲಾಡಖ್‌ಗೆ ಭೇಟಿ ನೀಡಿದ ರಾಜನಾಥ್:‌ ಸೇನಾ ಕಮಾಂಡರ್‌ಗಳೊಂದಿಗೆ ಸಂವಾದ

  ನವದೆಹಲಿ: ಭಾರತದ ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಲು ಮತ್ತು ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ  ಲಡಾಖ್‌ಗೆ‌  ಬಂದಿಳಿದರು. ಅವರು ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಎರಡರಲ್ಲೂ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ....

Read More

ರಾಜತಾಂತ್ರಿಕವಾಗಿ ಕುಲಭೂಷಣ್‌ ಜಾಧವ್ ಭೇಟಿಯಾದ ಭಾರತೀಯ ಅಧಿಕಾರಿಗಳು

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧಿತರಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಅವರನ್ನು ರಾಜತಾಂತ್ರಿಕವಾಗಿ ಭೇಟಿ ಮಾಡುವ ಎರಡನೇ ಅವಕಾಶವನ್ನು ಭಾರತವು ಗುರುವಾರ ಪಡೆದುಕೊಂಡಿದೆ. ಇದು ವರ್ಷದಲ್ಲಿ ಎರಡನೇಯ ರಾಜತಾಂತ್ರಿಕ ಭೇಟಿಯಾಗಿದೆ. ಪಾಕಿಸ್ಥಾನವು ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇರೆಗೆ ಬಂಧಿಸಿ ಜೈಲಿನಲ್ಲಿ ಇಟ್ಟಿದೆ....

Read More

10 ವರ್ಷಗಳಿಗಿಂತ ಕಡಿಮೆ ಸೇವಾವಧಿ ಹೊಂದಿದ ಯೋಧರಿಗೂ ಅಮಾನ್ಯ ಪಿಂಚಣಿ

ಮೇ ನವದೆಹಲಿ: 10 ವರ್ಷಗಳಿಗಿಂತ ಕಡಿಮೆ ಅರ್ಹತಾ ಸೇವೆಯನ್ನು ಹೊಂದಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಇನ್‌ವ್ಯಾಲಿಡ್ ಪಿಂಚಣಿ ನೀಡಲು ಸರ್ಕಾರ ಬುಧವಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ, “10 ವರ್ಷಗಳಿಗಿಂತ ಕಡಿಮೆ ಅರ್ಹತಾ ಸೇವೆಯನ್ನು ಹೊಂದಿರುವ...

Read More

ಯುಪಿ: ರಸ್ತೆ ಅಭಿವೃದ್ಧಿಯ 2,250 ಕೋಟಿ ರೂ. ಯೋಜನೆಗಳಿಗೆ ಯೋಗಿ ಚಾಲನೆ

ಲಕ್ನೋ: ರಾಜ್ಯದಲ್ಲಿನ ರಸ್ತೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ 2,250 ಕೋಟಿ ರೂ. ಗಳ ಯೋಜನೆಗಳಿಗೆ ಚಾಲನೆ ನೀಡಿದೆ. ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಈ ಯೋಜನೆಗಳಿಗೆ ಹಣಕಾಸು ನೆರವು ನೀಡಿರುವುದಾಗಿಯೂ ಯೋಗಿ ಮಾಹಿತಿ ನೀಡಿದ್ದಾರೆ....

Read More

ಭಾರತದ ಪ್ರಗತಿ ಪಥದ ಅವಕಾಶಗಳನ್ನು ಬಳಸಿಕೊಳ್ಳಿ: ಯುಎಸ್ ಹೂಡಿಕೆದಾರರಿಗೆ ಕರೆ

ನವದೆಹಲಿ: ಭಾರತದ ಹೊಸ ಅವಕಾಶಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಹೂಡಿಕೆ ಮಾಡುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅಮೆರಿಕ ಕಂಪನಿಗಳಿಗೆ ಆಹ್ವಾನವನ್ನು ನೀಡಿದ್ದಾರೆ. ಭಾರತ ಮತ್ತು ಅಮೆರಿಕ ಕಂಪನಿಗಳು ಈ ವಲಯದಲ್ಲಿ ಕೆಲವು ಸಹಭಾಗಿತ್ವದ ಪ್ರಯತ್ನಗಳನ್ನು...

Read More

ಜ.ಕಾಶ್ಮೀರ: ಸರೋವರ ಸುಂದರೀಕರಣ ಅಭಿಯಾನ ಆರಂಭ

ಶ್ರೀನಗರ: ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದೆ. ಮಾತ್ರವಲ್ಲದೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿ ಸರೋವರಗಳ ಸುಂದರೀಕರಣ ಪ್ರಕ್ರಿಯೆಯನ್ನು ಕೂಡ ಆರಂಭ ಮಾಡಲಾಗಿದೆ. ಪ್ರಸ್ತುತ ಬರಿ ನಂಬಲ್ ಸರೋವರ ತಟವನ್ನು ಸುಂದರೀಕರಣಗೊಳಿಸುವ ಅಭಿಯಾನವನ್ನು ಆರಂಭಿಸಲಾಗಿದೆ....

Read More

ಮುಂದಿನ 3.5 ವರ್ಷಗಳಲ್ಲಿ ರೈಲ್ವೆ 100% ವಿದ್ಯುದೀಕರಣಗೊಳ್ಳಲಿದೆ: ಗೋಯಲ್

ನವದೆಹಲಿ: ಭಾರತೀಯ ರೈಲ್ವೆಯು ಮುಂದಿನ 3.5 ವರ್ಷಗಳಲ್ಲಿ ಶೇಕಡ 100ರಷ್ಟು ವಿದ್ಯುದೀಕರಣಗೊಳ್ಳಲಿದೆ ಮತ್ತು ಮುಂದಿನ 9ರಿಂದ 10 ವರ್ಷಗಳ ಒಳಗೆ ಶೇಕಡ 100ರಷ್ಟು ನೆಟ್ ಝೀರೋ ಆಪರೇಟರ್ ಆಗಿ ಹೊರಹೊಮ್ಮಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಹೇಳಿದ್ದಾರೆ. ಮಾತ್ರವಲ್ಲದೆ, 2030ರ...

Read More

ವಿಶ್ವಕ್ಕೆ ಔಷಧ ತಯಾರಿಸಿ ವಿತರಿಸುವ ಶಕ್ತಿ ಭಾರತದ ಔಷಧ ಕಂಪೆನಿಗಳಿಗಿದೆ: ಬಿಲ್ ಗೇಟ್ಸ್

ನವದೆಹಲಿ: ಇಡೀ ಜಗತ್ತಿಗೆ ಅಗತ್ಯವಿರುವಷ್ಟು ಕೊರೋನಾ ಔಷಧಗಳನ್ನು ತಯಾರಿಸಿ, ವಿತರಣೆ ಮಾಡುವ ಶಕ್ತಿ ಭಾರತದ ಔಷಧ ಕಂಪೆನಿಗಳಿಗಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ತಿಳಿಸಿದ್ದಾರೆ. ಡಿಸ್ಕವರಿ ಪ್ಲಸ್ ಚಾನೆಲ್ ನ ‘ಕೋವಿಡ್-19 ಇಂಡಿಯನ್ ವಾರ್ ಎಗೆನೆಸ್ಟ್ ದ ವೈರಸ್’...

Read More

ಚಬಹಾರ್-ಜಹೇಡನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಟ್ಟ ವರದಿ ಸುಳ್ಳು: ಇರಾನ್

ನವದೆಹಲಿ: ಚಬಹಾರ್-ಜಹೇಡನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂದು ಹೇಳಿರುವ ಭಾರತೀಯ ಪತ್ರಿಕೆ ವರದಿಯನ್ನು ಇರಾನ್ ಬುಧವಾರ ತಳ್ಳಿಹಾಕಿದೆ. ಇರಾನ್‌ನ ಬಂದರುಗಳು ಮತ್ತು ಕಡಲ ಸಂಘಟನೆಯ ಉಪನಾಯಕರಾದ ಫರ್ಹಾದ್ ಮೊಂಟಾಸರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ” ಈ ವರದಿಯು...

Read More

ಮಿಲಿಟರಿ ಸರಕುಗಳ ಪ್ಯಾರಾ ಡ್ರಾಪ್‌ಗೆ ದೇಶೀಯ ವ್ಯವಸ್ಥೆ ನಿರ್ಮಿಸಿದ ಡಿಆರ್‌ಡಿಓ

  ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)  ಪಿ 7 ಹೆವಿ ಡ್ರಾಪ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಐಎಲ್ 76 ವಿಮಾನದಿಂದ 7-ಟನ್ ತೂಕದ ವರ್ಗದವರೆಗೆ ಮಿಲಿಟರಿ ಸರಕುಗಳನ್ನು ಪ್ಯಾರಾ ಡ್ರಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು...

Read More

Recent News

Back To Top