ನವದೆಹಲಿ: ಭಾರತದ ಹೊಸ ಅವಕಾಶಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಹೂಡಿಕೆ ಮಾಡುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅಮೆರಿಕ ಕಂಪನಿಗಳಿಗೆ ಆಹ್ವಾನವನ್ನು ನೀಡಿದ್ದಾರೆ.
ಭಾರತ ಮತ್ತು ಅಮೆರಿಕ ಕಂಪನಿಗಳು ಈ ವಲಯದಲ್ಲಿ ಕೆಲವು ಸಹಭಾಗಿತ್ವದ ಪ್ರಯತ್ನಗಳನ್ನು ನಡೆಸುತ್ತಿವೆ, ಆದರೆ ಇದು ಅವುಗಳ ಸಂಭವನೀಯತೆಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಭಾರತ-ಅಮೆರಿಕ ಇಂಧನ ಪಾಲುದಾರಿಕೆ ಅತ್ಯಂತ ಬಾಳಿಕೆಯ ಸ್ತಂಭಗಳು ಆಗಿದ್ದು, ಭಾರತ-ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯು ಇದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಸವಾಲಿನ ಸಂದರ್ಭಗಳಲ್ಲೂ ಕೂಡ ಭಾರತ ಮತ್ತು ಅಮೆರಿಕ ಅತ್ಯಂತ ನಿಕಟವಾಗಿ ಸಹಭಾಗಿತ್ವವನ್ನು ಕಾರ್ಯನಿರ್ವಹಿಸುತ್ತಿದೆ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದಿರಲಿ ಅಥವಾ ಕರೋನವೈರಸ್ ಸವಾಲನ್ನು ಸಹಕಾರದ ಪ್ರಯತ್ನದ ಮೂಲಕ ಎದುರಿಸುವುದಿರಲಿ ಭಾರತ-ಅಮೆರಿಕ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಇಂದಿನ ಜಗತ್ತಿನಲ್ಲಿ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯು ಅತ್ಯಂತ ಸ್ಥಿರ ಮತ್ತು ನಿರಂತರವಾಗಿ ಸಾಗುತ್ತಿದೆ. ಕಾರ್ಯತಂತ್ರದ ಇಂಧನ ಪಾಲುದಾರಿಕೆಯ ಬಗ್ಗೆ ಹೇಳುವುದಾದರೆ, ನೈಸರ್ಗಿಕ ಅನಿಲ ವಲಯದಲ್ಲಿನ ಸಹಕಾರವನ್ನು ಅತ್ಯಂತ ಆದ್ಯತೆಯ ಕ್ಷೇತ್ರವಾಗಿ ನೋಡಲಾಗಿದೆ ಎಂದಿದ್ದಾರೆ.
ಜೈವಿಕ ಇಂಧನ, ಕಂಪ್ರೆಸೆಡ್ ಬಯೋಗ್ಯಾಸ್, ಪೆಟ್ರೋ ಕೆಮಿಕಲ್, ಎಲ್ಎನ್ಜಿ ಜ ಬಂಕರಿಂಗ್, ಎಲ್ಎನ್ಜಿ ಐಎಸ್ಒ ಮುಂತಾದುವುಗಳಲ್ಲಿ ಭಾರತದ ಇಂಧನ ವಲಯಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.