ನವದೆಹಲಿ: ಭಾರತೀಯ ರೈಲ್ವೆಯು ಮುಂದಿನ 3.5 ವರ್ಷಗಳಲ್ಲಿ ಶೇಕಡ 100ರಷ್ಟು ವಿದ್ಯುದೀಕರಣಗೊಳ್ಳಲಿದೆ ಮತ್ತು ಮುಂದಿನ 9ರಿಂದ 10 ವರ್ಷಗಳ ಒಳಗೆ ಶೇಕಡ 100ರಷ್ಟು ನೆಟ್ ಝೀರೋ ಆಪರೇಟರ್ ಆಗಿ ಹೊರಹೊಮ್ಮಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಹೇಳಿದ್ದಾರೆ.
ಮಾತ್ರವಲ್ಲದೆ, 2030ರ ವೇಳೆಗೆ ನಾವು ಭಾರತದ ಅತ್ಯಂತ ಹೆಮ್ಮೆಯ ಪ್ರಜೆಗಳು ಆಗಲಿದ್ದೇವೆ, ಯಾಕೆಂದರೆ ಆ ವೇಳೆಗೆ ಭಾರತವು ವಿಶ್ವದ ಅತಿ ದೊಡ್ಡ ಸ್ವಚ್ಛ ರೈಲ್ವೆಯನ್ನು ಹೊಂದಲಿದೆ ಎಂದು ಪಿಯೂಶ್ ಗೋಯಲ್ ಅವರು ಆತ್ಮ ವಿಶ್ವಾಸದಿಂದ ನುಡಿದಿದ್ದಾರೆ.
ಮುಂದಿನ ಮೂರೂವರೆ ವರ್ಷಗಳಲ್ಲಿ ಭಾರತವು ಶೇಕಡ ನೂರರಷ್ಟು ವಿದ್ಯುದೀಕರಣಗೊಳ್ಳುವತ್ತ ಈಗಾಗಲೇ ಕಾರ್ಯೋನ್ಮುಖಗೊಂಡಿದೆ, ಭಾರತ ವಿಶ್ವದ ಮೊದಲ ಸ್ವಚ್ಛ ರೈಲ್ವೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರು ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಮಂತ್ರಕ್ಕೆ ಉತ್ತೇಜನ ನೀಡಿದ್ದಾರೆ. ಭಾರತವು ಅಂತರಾಷ್ಟ್ರೀಯ ನವೀಕರಿಸಬಹುದಾದ ಸಮುದಾಯದ ನೇತೃತ್ವವನ್ನು ವಹಿಸುತ್ತಿದೆ. ಅಂತರಾಷ್ಟ್ರೀಯ ಸೋಲಾರ್ ಗ್ರಿಡ್ಗೆ ಬದಲಾಗುವತ್ತ ಭಾರತ ಕಾರ್ಯೋನ್ಮುಖಗೊಂಡಿದೆ. ಪಿಎಂ-ಕುಸುಮ್ ಯೋಜನೆಯ ಮೂಲಕ ನಾವು ರೈತರನ್ನು ನವೀಕರಿಸಬಹುದಾದ ಇಂಧನದತ್ತ ತರುತ್ತಿದ್ದೇವೆ” ಎಂದಿದ್ದಾರೆ.
ರೈಲ್ವೆ ಸಚಿವಾಲಯವು 2020ರ ಅಕ್ಟೋಬರ್ ವೇಳೆಗೆ ದೇಶದ ಆರು ರಾಜ್ಯಗಳಲ್ಲಿ ಸುಮಾರು ಎಂಟು ಲಕ್ಷ ಮಾನವ ದಿನಗಳ ಉದ್ಯೋಗವನ್ನು ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.