Date : Wednesday, 19-08-2015
ನಾಗನಿಗೆ ದೇವತೆಯ ಸ್ಥಾನವನ್ನು ನೀಡಿ ಪೂಜಿಸುವ ಹಿಂದೂ ಧರ್ಮದಲ್ಲಿ ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಂದು ಬೆಳಿಗ್ಗೆ ಎದ್ದು ಶುದ್ಧವಾಗಿ ಮಡಿತೊಟ್ಟು ನಾಗನ ಹುತ್ತಕ್ಕೆ ಅಥವಾ ಕಲ್ಲಿಗೆ ಹಾಲೆರೆಯುವ, ಹೂವು, ಅರಶಿನದಿಂದ ಅಲಂಕರಿಸುವ ಸಂಪ್ರದಾಯವಿದೆ....
Date : Friday, 14-08-2015
ಭಾರತ 69ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಬ್ರಿಟಿಷರ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ಈ ಶುಭದಿನವನ್ನು ಇಡೀ ಭಾರತೀಯ ಸಮುದಾಯ ಅತೀವ ಸಡಗರದಿಂದ ಆಚರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಸಮವಸ್ತ್ರ ತೊಟ್ಟು, ಕೈಯಲ್ಲೊಂದು ಬಾವುಟ ಹಿಡಿದು ಶಾಲೆಯ ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಿಹಿ ತಿಂದ ನೆನಪಿನಿಂದ ಹಿಡಿದು...
Date : Friday, 31-07-2015
“ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||” ಯಾವ ಮಹಾತ್ಮನು, ಅಜ್ಞಾನದ ಕತ್ತಲೆಯಿಂದ ಕುರುಡಾದ ವ್ಯಕ್ತಿಗೆ ಜ್ಞಾನವೆಂಬ ಅಂಜನದ ಮೂಲಕ ಕಣ್ಣು ತೆರೆಸಿ ಹೊಸಬೆಳಕನ್ನು ಕರುಣಿಸುವನೋ, ಅಂತಹ ಗುರುಗಳಿಗೆ ನಮಸ್ಕಾರಗಳು. ಗುರುಗಳ ಬಗೆಗಿನ ಗೌರವವನ್ನು ಸೂಚಿಸುವ ಇಂಥಹ ಹಲವಾರು ಶ್ಲೋಕಗಳು...
Date : Monday, 27-07-2015
ಆಷಾಢದಂದು ಬರುವ ಏಕಾದಶಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇಂದು ಆಷಾಢ ಏಕಾದಶಿಯಾಗಿದ್ದು, ದೇವಸ್ಥಾನಗಳಲ್ಲಿ ಉಪವಾಸ ವ್ರತ, ಪೂಜೆ, ಏಕಾಹ ಭಜನೆಗಳನ್ನು ಮಾಡುವುದರ ಮೂಲಕ ಮಾಡಲಾಗುತ್ತದೆ. ಅಂದು ಪಂಢರಾಪುರದ ವಿಠೋಭ ರುಕುಮಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆ ಅಭಂಗ ಮತ್ತು ವಿವಿಧ ಆರತಿಗಳೊಂದಿಗೆ...
Date : Saturday, 25-07-2015
ಜೂನ್ 26 ಕಾರ್ಗಿಲ್ ವಿಜಯ ದಿವಸ್, ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಗಳನ್ನು ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ. ಎದೆತಟ್ಟಿ ನಮ್ಮ ಸಾಮರ್ಥ್ಯದ ಅರಿವನ್ನು ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ವೀರ ಯೋಧರ ತ್ಯಾಗವನ್ನು...
Date : Thursday, 23-07-2015
“ಮೇ ಆಜಾದ್ ಹು ಔರ್ ಆಜಾದ್ ಹಿ ರಹೂಂಗಾ” ಎಂಬ ಉದ್ಘೋಷದಿಂದ ಆಜಾದ್ ಎಂದು ನಾಮಾಂಕಿತರಾದವರು ಚಂದ್ರಶೇಖರ್ ಆಜಾದ್. 23 ಜುಲೈ 1906 ರಲ್ಲಿ ಜನಿಸಿದ ಚಂದ್ರಶೇಖರ ಆಜಾದ್‌ರವರು ಬಾದರ್ಕಾ ಉತ್ತರಪ್ರದೇಶ ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಪಂಡಿತ್ ಸೀತಾರಾಮ್...
Date : Thursday, 09-07-2015
ಇಂದು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ 1949 ಜುಲೈ 9 ರಂದು ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಒಳಗೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಸ್ಥಾಪಿಸಲಾಯಿತು. ಈ ದಿನವನ್ನು ಎ.ಬಿ.ವಿ.ಪಿ.ಯು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಗಿ ಆಚರಿಸುತ್ತಿದೆ. ಎಬಿವಿಪಿ ಭಾರತದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ...
Date : Wednesday, 01-07-2015
ಇಂದು ಜುಲೈ 1 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲು ಒಂದು ವಿಷೇಶ ಕಾರಣವಿದೆ. ಕನ್ನಡ ಮೊದಲ ಪ್ರತಿಕೆ ಮಂಗಳೂರು ಸಮಾಚಾರ ಪ್ರಾರಂಭವಾದದ್ದು ಜುಲೈ1 1843 ರಂದು. ರೆ. ಹರ್ಮನ್ ಮೊಗ್ಲಿಂಗ್ ಅವರನ್ನು ಕರ್ನಾಟಕದ ಕನ್ನಡ ಪ್ರತಿಕಾರಂಗದ ಜನಕ ಎಂದರೂ ತಪ್ಪಾಗದು. ಅವರೇ ಮಂಗಳೂರು...
Date : Saturday, 20-06-2015
ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪಸರಿಸಿದ ಯೋಗಕ್ಕೀಗ ಯೋಗ ಯೋಗ. ಸ್ವತಃ ವಿಶ್ವಸಂಸ್ಥೆಯೇ ಯೋಗಕ್ಕೆಂದು ಒಂದು ದಿನವನ್ನು ಮೀಸಲಿಟ್ಟಿದೆ. ಈ ಮೂಲಕ ಭಾರತದ ಪುರಾತನ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಿದೆ. ಇದಕ್ಕೆ ಭಾರತೀಯರಾದ ನಾವೆಲ್ಲರು ಹೆಮ್ಮೆ ಪಡಲೇ ಬೇಕು. ನಮ್ಮ ಋಷಿಮುನಿಗಳ ತಪಸ್ಸು,...
Date : Saturday, 20-06-2015
ಜೂನ್ 21 ವಿಶ್ವ ಅಪ್ಪಂದಿರ ದಿನ. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕೈಬೆರಳು ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನ. ಅತ್ತಾಗ ಎದೆಗಪ್ಪುವ, ಸೋತಾಗ ಕೈಹಿಡಿದು ಮೇಲೆತ್ತುವ, ಪ್ರೀತಿ, ಸ್ನೇಹ, ಅಕ್ಕರೆಯ ಪ್ರತಿ ರೂಪದಂತಿರುವ ಅಪ್ಪನಿಗೆ ಪ್ರತಿಯೊಬ್ಬರ...