ವಸುದೇವ ಸುತಂ ದೇವ ಕಂಸ ಚಾಣೂರ ಮರ್ಧನಂ |
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||
ಈ ಶ್ಲೋಕ ಭಾಗಶಃ ಕೃಷ್ಣನ ಬಗ್ಗೆ ಪರಿಚಯ ಮಾಡುತ್ತದೆ. ವಸುದೇವನ ಮಗ ಶ್ರೀ ಕೃಷ್ಣನಾಗಿ ಅವತರಿಸಿದ ಭಗವಂತ, ಅತೀ ಪ್ರಭಾವಿ ಮತ್ತು ಶಕ್ತಿಶಾಲಿ ಅಸುರರಾದ ಕಂಸ ಮತ್ತು ಚಾಣೂರ ಮುಷ್ಟಿಕರನ್ನು ಕೊಂದ, ಈ ಮೂಲಕ ತನ್ನ ತಾಯಿಯಾದ ದೇವಕಿಯ ದುಖಃವನ್ನು ದೂರಗೊಳಿಸಿ ಆಕೆಗೆ ಅಪಾರ ಆನಂದವನ್ನು ಕೊಟ್ಟ, ಜಗದ್ಗುರು ಶ್ರೀ ಕೃಷ್ಣ ನಿನಗೆ ವಂದಿಸುವೆ ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.
ಶ್ರೀ ಕೃಷ್ಣಾವತಾರವನ್ನು ಲೀಲೆಗಳ ಅವತಾರ ಎಂದು ಹೇಳಬಹುದು. ಕೃಷ್ಣ ತನ್ನ ಲೀಲೆಯ ಮೂಲಕ ಜನರ ಮನಸ್ಸನ್ನು ಸೆಳೆದಿದ್ದಾನೆ. ಕಂಸನಿಗೆ ತನ್ನ ತಂಗಿ ದೇವಕಿಯ ಮೇಲೆ ಅಪಾರ ಪ್ರೀತಿ, ಆಕೆಗೆ ವಸುದೇವನೊಂದಿಗೆ ಮದುವೆ ಮಾಡಲಾಯಿತು. ತಂಗಿಯ ಮೇಲಿನ ಪ್ರೀತಿಯಿಂದ ಸ್ವತಃ ಕಂಸನೇ ನವ ದಂಪತಿಗಳನ್ನು ಮನೆ ಬಿಡಲು ರಥವೇರಿ ತೆರಳಿದ. ಈ ಸಮಯದಲ್ಲಿ ದಾರಿಯಲ್ಲಿಯೊಂದು ಅಶರೀರವಾಣಿಯಾಯಿತು ‘ನಿನ್ನ ತಂಗಿಯ ಎಂಟನೇ ಮಗುವಿನಿಂದ ನಿನ್ನ ಮೃತ್ಯು ಎಂದು ಹೇಳಲಾಯಿತು’. ಆಗ ಕುಪಿತನಾದ ಕಂಸ ತನ್ನ ತಂಗಿ ಮತ್ತು ಭಾವನನ್ನು ಸೆರೆಮನೆಗಟ್ಟಿದ. ಅಲ್ಲದೆ ಅವರಿಗೆ ಹುಟ್ಟುವ ಮಕ್ಕಳನ್ನು ತನಗೆ ಒಪ್ಪಿಸಬೇಕು ಅಂದ. ಹಾಗೆ ದೇವಕಿಗೆ ಜನಸಿದ ಮಕ್ಕಳನ್ನು ಕಂಸ ಕೊಲ್ಲತ್ತಾನೆ ಆದರೆ ದೇವಕಿಯ 8ನೇ ಮಗ ಜನಿಸಿ ಆದಿಮಾಯೆಯ ಪವಾಡದ ಸಹಾಯದಿಂದ ಮಥುರಾದಲ್ಲಿ ಸುರಕ್ಷಿತನಾಗಿರುತ್ತಾನೆ. ಶ್ರೀಕೃಷ್ಣ ಆತನ ಬಾಲಲೀಲೆ, ಪ್ರೌಢ ಲೀಲೆ ಮತ್ತು ಇತರ ಲೀಲೆಗಳ ಮಾತನಾಡಲು ಹೋದರೆ ಮುಗಿಯದಷ್ಟಿದೆ.
ಶ್ರೀ ಕೃಷ್ಣ ಜನ್ಮಾಷಮಿಯ ಆಚರಣೆ : ಶ್ರೀಕೃಷ್ಣ ಜನಸಿದ್ದು ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯ ರೋಹಿಣಿ ನಕ್ಷತ್ರದಲ್ಲಿ. ಆದುದರಿಂದ ಅವನಿಗೆ ಈ ದಿನ ಪೂಜೆ. ಕೃಷ್ಣ ಹುಟ್ಟುವ ಸಮಯದಲ್ಲಿ ಕೃಷ್ಣನಿಗೆ ಅರ್ಘ್ಯ ನೀಡಿ ಆಚರಿಸುತ್ತಾರೆ. ಈ ದಿನದಂದು ವಿಶೇಷ ಜನರು ಉಪವಾಸ ವ್ರತ ಕೈಗೊಂಡು ಕೃಷ್ಣನಿಗೆ ಪೂಜೆ ಸಲ್ಲಿಸುವಂತಹದು ವಾಡಿಕೆ.
ಮುಂಗಳೂರಿನಲ್ಲಿ ಮೊಸರು ಕುಡಿಕೆ, ಉಡುಪಿಯಲ್ಲಿ ವಿಟ್ಲ ಪಿಂಡಿ ಉತ್ಸವ ಮತ್ತು ಇತರ ಭಾಗಗಳಲ್ಲಿ ದಹಿಹಂಡಾ ಹೀಗೆ ವಿವಿಧ ರೀತಿಯಲ್ಲಿ ಮೊಸರು ಕುಡಿಕೆ ಆಚರಣೆ ಇದೆ. ಮೊಸರಿನ ಮಡಿಕೆಯನ್ನು ಒಡೆಯುವ ಪದ್ಧತಿ ಏಕಾಗಿ ಬಂತು ಎಂದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅದು ಬರಿಯ ಮೋಜಿಗಲ್ಲ. ಶ್ರೀಕೃಷ್ಣ ತನ್ನ ಬಾಲಲೀಲೆಯಲ್ಲಿ ಮಡಿಕೆ ಒಡೆದು ಮೊಸರು ಕುಡಿಯುವುದು, ಬೆಣ್ಣೆ ಕದ್ದು ತಿನ್ನುವುದನ್ನು ಮಾಡುತ್ತಿದ್ದ. ಇದರ ಅಂಗವಾಗಿ ಮೊಸರು ಕುಡಿಕೆ ಎಲ್ಲೆಡೆ ನಡೆಯುತ್ತದೆ.
ಗೋಕುಲ, ಮಥುರಾ, ಬೃಂದಾವನಾ, ದ್ವಾರಕಾ, ಪುರಿ ಈ ಕ್ಷೇತ್ರಗಳು ಶ್ರೀಕೃಷ್ಣನ ಉಪಾಸನೆಗೆ ಪ್ರಮುಖ ಸ್ಥಳ. ಈ ಕ್ಷೇತ್ರಗಳಲ್ಲಿಂದು ಅತಿ ವಿಜೃಂಭಣೆಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದನ್ನು ನೋಡಲೆಂದೇ ಅಸಂಖ್ಯಾತ ಭಕ್ತರು ನೆರೆದಿರುತ್ತಾರೆ. ಇನ್ನು ಕೆಲವರು ತಮ್ಮ ತಮ್ಮ ಮನೆಗಳಲ್ಲೇ ಬೃಂದಾವನವನ್ನು ರಚಿಸಿ, ತೊಟ್ಟಿಲಿಟ್ಟು ಶ್ರೀಕೃಷ್ಣನ ಪೂಜೆಯನ್ನು ವಿಜೃಂಭಣೆ ಹಾಗೂ ಸಂತಸದಿಂದ ಮಾಡುತ್ತಾರೆ.
ಮಾನಿನಿಯರ ಮನಸ್ಸನ್ನು ಕೃಷ್ಣ ಗೆದ್ದಿದ್ದಾನೆಂಬುದುದಕ್ಕೆ ಉತ್ತಮ ಉದಾಹರಣೆ ಎಂದರೆ ಎಲ್ಲಾ ತಾಯಂದಿರು ಬಯಸುವುದು ತಮ್ಮ ಮಕ್ಕಳು ಕೃಷ್ಣನಂತಾಗಲಿ ಎಂದು … ಅಲ್ಲಿಯವರೆಗೆ ಕೃಷ್ಣ ತಾಯಂದಿರ ಮನಗೆದ್ದಿದ್ದಾನೆ.
ಜಯ ಜನಾರ್ದನಾ ಕೃಷ್ಣ ರಾಧಿಕಾಪತೇ… ಈ ಹಾಡು ಹಲವರ ಮೊಬೈಲ್ನಲ್ಲಿ ದೇವಸ್ಥಾನಗಳಲ್ಲಿ ಮತ್ತು ಬಹುತೇಕ ಕಡೆಗಳಲ್ಲಿ ಕೆಳಲ್ಪಡುವಂತದ್ದು. ಈ ಹಾಡು ಕಾರ್ಯಕ್ರಮಕ್ಕೆ ಮೆರಗು ನೀಡಿದರೆ, ಹುಲಿವೇಷ, ಅನಾರ್ಕಲಿ, ಕೀಲುಕುದುರೆ, ನಾಸಿಕ್ ಬ್ಯಾಂಡ್, ಕರಡಿಕುಣಿತ, ಸಿಂಹದ ಕುಣಿತ, ಕಾರ್ಯಕ್ರಮಕ್ಕೆ ವೈಭವವನ್ನು ತುಂಬುತ್ತದೆ. ಅಲ್ಲದೇ ಕಲ್ಲರ್ ಪುಲ್ ಪ್ರಪಂಚದ ಅನಾವರಣ ಮಡಿಕೆಯೊಳಗಣದಿಂದ ಹೊರ ಹೊಮ್ಮುವ ರಂಗು ಹಬ್ಬದ ಗುಂಗು ಜನರನ್ನು ಹುಚ್ಚೆದ್ದು ಕುಣಿಯವಂತೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.