News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತರುಣರಿಗೆ ಸ್ಪೂರ್ತಿಯಾಗಲಿ ಧಿಂಗ್ರಾನ ಸಾಹಸ

ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ  ಹೋಗಿ ಇಂಗ್ಲೆಂಡಿನಲ್ಲೇ  ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ  ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್­ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನವಿಲಾಸೀ ಸಂಸ್ಕೃತಿಗೆ ಮಾರು ಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು  ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ  ಮಾತ್ರ ಮೊದಲ ಸ್ಥಾನವನ್ನೇಗಳಿಸುತ್ತಿದ್ದ  ಪ್ರತಿಭಾವಂತ ಆತ....

Read More

ಅವಿರತ ಸಂಗ್ರಾಮದ ಹೆಮ್ಮೆಯ ಸ್ವಾತಂತ್ರ್ಯ

ಆಗಸ್ಟ್‌ 15 ಭಾರತೀಯರೆಲ್ಲರೂ ಜಾತಿ, ಮತ, ಪಂಥ, ಸಿರಿತನ, ಬಡತನಗಳ ಭೇದವಿಲ್ಲದೆ ಉತ್ಸಾಹದಿಂದ, ಸಂತೋಷದಿಂದ ಆಚರಿಸುವ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನೋತ್ಸವ. ಯಾವುದೇ ಹಬ್ಬ-ಉತ್ಸವಗಳಾದರೂ ಅದನ್ನು ಆಚರಿಸಲು ಒಂದು ಕಾರಣ ಮತ್ತು ಹಿನ್ನೆಲೆ ಇದ್ದೇ ಇರುತ್ತದೆ. ಹಾಗೆ ಸ್ವಾತಂತ್ರ್ಯ ದಿನೋತ್ಸವದ ಕಾರಣ...

Read More

ಆಧ್ಯಾತ್ಮ ಭಾರತ – ನವ ಭಾರತದ ಉದಯ

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಬಾರಿಯ ಸ್ವಾತಂತ್ರೋತ್ಸವ ಅತ್ಯಂತ ವಿಭಿನ್ನ ಹಾಗು ವಿಶೇಷ.‌ ಶ್ರೀ ಕೃಷ್ಣನ ಜನ್ಮದಿನ‌ ಹಾಗು ಸ್ವಾತಂತ್ರ್ಯ ದಿನ ಒಂದೇ ಸತಿ ಬಂದಿದೆ.‌ ಅದರಲ್ಲಿ ವಿಶೇಷವೇನು‌ ಎಂದು ಬಹಳಷ್ಟು ಮಂದಿ ಪ್ರಶ್ನಿಸಬಹುದು‌ ಹಾ ಇಂತಹ ಪ್ರಶ್ನೆ ಮೂಡುವುದೂ...

Read More

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಕ್ಷಣ; ರೋಮಾಂಚನಗೊಂಡ ಮನ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇದೀಗ ಎಪ್ಪತ್ತು ವರ್ಷಗಳು ತುಂಬಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರತಿಯೊಬ್ಬ ಭಾರತೀಯನ ಮನೆ-ಮನದಲ್ಲೂ ಮನೆಮಾಡಿರುತ್ತದೆ. ಇದನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಬೇರೆ-ಬೇರೆ ಕಂಪನಿಗಳಲ್ಲಿ, ಬಸ್­ಸ್ಟ್ಯಾಂಡ್- ಆಟೋ ಸ್ಟ್ಯಾಂಡ್‌ಗಳಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಷ್ಟ್ರೀಯ...

Read More

ಗಣೇಶ ವಿಘ್ನವಿನಾಶಕ; ನಮ್ಮಂತೆ ವಿಘ್ನ ಸಂತೋಷಿಯಲ್ಲ..!

ಮನಸ್ಸುಗಳನ್ನು ಬೆಸೆಯಬೇಕಾದ ಹಬ್ಬ; ಗೋಡೆ ಕಟ್ಟಿಕೊಳ್ಳುವ ಹಂತಕ್ಕೆ ಬಂದು ನಿಂತು! ಧಾರವಾಡ : ಕಾನೂನನ್ನು ಸರ್ಕಾರಗಳು ಶಾಸನಿಸಿದರೆ.. ನಡಾವಳಿ ಮಾತ್ರ ಪ್ರಜ್ಞಾವಂತ ಸಮಾಜವೇ ರೂಪಿಸಬೇಕು. ಆದರೆ, ಈಗ ಪ್ರತಿ ಹಂತದಲ್ಲೂ ಸಂಘರ್ಷಕ್ಕೆ ಅವಕಾಶವೀಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ, ಲೋಪ ಎರಡೂ ಬದಿಗಿದೆ....

Read More

ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವ ಶಿಕ್ಷಣ ವಂಚಿತ ಆಟೋ ಚಾಲಕ

ಬಾಲ್ಯದಲ್ಲಿನ ಕಿತ್ತು ತಿನ್ನುವ ಬಡತನದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕೊಯಂಬತ್ತೂರಿನ ಆಟೋಡ್ರೈವರ್ ಇಂದು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ತನ್ನಂತೆ ಬಡತನದ ಕಾರಣದಿಂದ ಯಾರೂ ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ಅವರು ಉದ್ದೇಶ. ರಾಜ ಸೇತಿ ಮುರಳಿ ಕೊಯಂಬತ್ತೂರಿನಲ್ಲಿ ಆಟೋ ಓಡಿಸುತ್ತಾ ಜೀವನ...

Read More

ಜನಸೇವೆಯಿಂದ ಜನಾರ್ದನನಾದ ಜನ್ನಣ್ಣ

ಸಮಾಜ ಸೇವೆ ಮಾಡಿ ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ, ಪಾತ್ರರಾದ ಜನಾರ್ದನ ಪ್ರತಾಪನಗರ (ಜನ್ನಣ್ಣ ಎಂದೇ ಜನಜನಿತರು) ಇವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 30 ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು. “ಶರಣರ ಸಾವನ್ನು ಮರಣದಲ್ಲಿ ಕಾಣು” ಎಂಬ ಮಾತಿನಂತೆ, ಇವರು ಮೃತರಾದರೆಂಬ...

Read More

ಒಂದೇ ಮರದಲ್ಲಿ 51 ಬಗೆಯ ಮಾವು ಬೆಳೆಸುವ ರೈತನಾಗಿರುವ ಎಂಜಿನಿಯರ್

ವೃತ್ತಿಯಲ್ಲಿ ಎಂಜಿನಿಯರಿಂಗ್ ಆಗಿದ್ದರೂ ರೈತನಾಗಿ ಬದುಕು ಕಂಡಿಕೊಂಡಿರುವ ಆಂಧ್ರಪ್ರದೇಶದ ರವಿ ಮರ್ಶೆತ್ವರ್ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿ ಇಂದು ತಮ್ಮ ಕೃಷಿಭೂಮಿಯಲ್ಲಿ ಬರೋಬ್ಬರಿ 51 ಬಗೆಯ ಮಾವನ್ನು ಒಂದೇ ಮರದಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಮಸ್ಕತ್‌ನಲ್ಲಿ 10 ವರ್ಷ ದುಡಿದು ತಯ್ನಾಡಿಗೆ ವಾಪಾಸ್...

Read More

18 ವರ್ಷದ ತರುಣ‌ ಬಲಿದಾನಿ ಖುದಿರಾಮ್ ಬೋಸ್ ಸ್ಮೃತಿ ದಿನವಿಂದು

‌ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬ ವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ಕಿಂಗ್ಸ್ ಫೊರ್ಡ್ ಎಂಬ ಬ್ರಿಟೀಷ್ ನ್ಯಾಯಾಧೀಶ ಕಲ್ಕತ್ತಾದಲ್ಲಿ  ಸ್ವಾತಂತ್ರ್ಯಹೋರಾಟಗಾರರಿಗೆ  ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ  ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ  ಮೇಲೆ  ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು  ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ  ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ.  ಆದರೂ ಆಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು...

Read More

ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಟಾಯ್ಲೆಟ್ ನಿರ್ಮಿಸುತ್ತಿರುವ ಶೋಭನ್ ಮುಖರ್ಜಿ

21 ವರ್ಷದ ಶೋಭನ್ ಮುಖರ್ಜಿ ಸಾಮಾಜಿಕ ಕಾರ್ಯಕರ್ತೆನಲ್ಲ, ದಿನನಿತ್ಯ ಹೋರಾಟಕ್ಕೆ ಧುಮುಕುವವನೂ ಅಲ್ಲ. ಆದರೂ ಅವರು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಮಾಡಬೇಕೆಂದು ಪ್ರಸ್ತಾಪಿಸಿದಾಗ ಎಲ್ಲರೂ ಪ್ರೇರಿತರಾದರು ಅವರ ಬೆಂಬಲಕ್ಕೆ ನಿಂತರು. ಅಷ್ಟೇ ಅಲ್ಲದೇ ಈ ಸಮುದಾಯವನ್ನು ಉಲ್ಲೇಖಿಸಲು ಒಳ್ಳೆಯ ಹೆಸರನ್ನೂ...

Read More

Recent News

Back To Top