ಮೆಕ್ಸಿಕೋ: ಕನಸುಗಳನ್ನು ನನಸಾಗಿಸಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮೆಕ್ಸಿಕೋದ 96 ವರ್ಷದ ಗ್ವಾಡಾಲುಪೆ ಪಲಾಕೋಯೊಸ್ ತೋರಿಸಿಕೊಟ್ಟಿದ್ದಾರೆ.
100 ವರ್ಷ ತುಂಬುದರೊಳಗೆ ಹೈಸ್ಕೂಲ್ ಶಿಕ್ಷಣ ಪೂರೈಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಇವರು ಈ ಇಳಿ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ತರಗತಿಯಲ್ಲಿ ಅತ್ಯಂತ ಉತ್ಸಾಹದ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಇತರ ಮಕ್ಕಳು ಅವರನ್ನು ಆದರರಿಂದ ಕಾಣುತ್ತಾರೆ.
ಶಾಲಾ ಸಮವಸ್ತ್ರ ತೊಟ್ಟು, ಪಿಂಕ್ ಸ್ವೆಟರ್ ಹಾಕಿ ಶಾಲೆಗೆ ಹೊರಡುವಾಗ ನನಗೆ ಅತೀವ ಹೆಮ್ಮೆ ಅನಿಸುತ್ತದೆ. ಇದು ಅದ್ಭುತ ಕ್ಷಣ ಎಂದು ಅವರು ಹೇಳುತ್ತಾರೆ.
ಅವಿದ್ಯಾವಂತೆಯಾಗಿದ್ದ ಗ್ವಾಡಾಲುಪೆ ಚಿಕನ್ ಮಾರುತ್ತಿದ್ದರು, ಅವರಿಗೆ ಎರಡು ಮದುವೆಯಾಗಿದ್ದು, ಆರು ಮಕ್ಕಳಿದ್ದಾರೆ. 92ನೇ ವಯಸ್ಸಿಗೆ ಓದುವ ಆಸೆಯಾಗಿ ಅವರು ಶಿಕ್ಷಣ ಪಡೆಯುವ ಮನಸ್ಸು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.