‘ಮೋದಿ ಕೇರ್’ ಎಂದೇ ಹೆಸರಾದ ದೇಶದ 50 ಪ್ರತಿಶತ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ಸುರಕ್ಷತಾ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಗೆ ನ್ಯಾನೋ ತಂತ್ರಜ್ಞಾನ ದೊಡ್ಡ ಕೊಡುಗೆಯಾಗಿ ಪರಿಣಮಿಸಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವದ ಘೋಷಣೆಯಾದ ಈ ಆರೋಗ್ಯ ಸುರಕ್ಷತಾ ಯೋಜನೆಗೆ, ಜನರನ್ನು ವಾಯು ಮಾಲಿನ್ಯದ ದುಷ್ಪರಿಣಾಮಗಳಿಂದ ರಕ್ಷಿಸಿ ಟಿಬಿ ಖಾಯಿಲೆಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನ ಪೂರಕವಾಗಿ ಕೆಲಸ ಮಾಡಲಿದೆ.
ದೇಶದ ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರನ್ನು ನೇರವಾಗಿ ಆರೋಗ್ಯ ಸೇವೆ ಒದಗಿಸುವ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 110 ಬಿಲಿಯನ್(1.72 ಬಿಲಿಯನ್ ಡಾಲರ್) ವೆಚ್ಚವಾಗಲಿದೆ. 2018-19 ರ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಲಾದ ಮೋದಿ ಕೇರ್ ಯೋಜನೆಯು ನೂರು ಮಿಲಿಯನ್ ಕುಟುಂಬಗಳಿಗೆ, ಅಂದರೆ ದೇಶದ ಸುಮಾರು 50 ಕೋಟಿ ಬಡ ಜನರಿಗೆ ಪ್ರತೀ ವರ್ಷಕ್ಕೆ 5 ಲಕ್ಷ ಆರೋಗ್ಯ ವಿಮೆಯ ಸೌಲಭ್ಯ ಒದಗಿಸಲಿದೆ. ಸರ್ಕಾರೀ ಅಧಿಕಾರಿಯೊಬ್ಬರು ನೀಡುವ ಮಾಹಿತಿಯ ಪ್ರಕಾರ ಈ ಹೊಸಾ ಯೋಜನೆಯನ್ವಯ ಪ್ರತೀ ಕುಟುಂಬಕ್ಕೂ 1,100 ರೂಪಾಯಿಗಳ ವಿಮಾ ಕಂತನ್ನು ಸರ್ಕಾರ ಭರಿಸಬೇಕಾಗುತ್ತದೆ.
ಖಾಯಿಲೆಗಳಲ್ಲಿ ಪ್ರಮುಖವಾಗಿ ಸಾಂಕ್ರಾಮಿಕ ರೋಗವಾದ ಟಿ ಬಿ ಅಥವಾ ಕ್ಷಯ ರೋಗವು ಭಾರತೀಯರಲ್ಲಿ ಅತ್ಯಂತ ತೊಂದರೆದಾಯಕ ಖಾಯಿಲೆಯಾಗಿ ಪರಿಣಮಿಸಿದೆ. 2016ರ ಒಂದು ವರ್ಷದಲ್ಲೇ ಟಿ ಬಿ ಯಿಂದಾಗಿ 423,000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರ ನಿರ್ಮೂಲನೆಯ ಪ್ರಯತ್ನದ ಭಾಗವಾಗಿ ವಿತ್ತ ಸಚಿವ ಅರುಣ್ ಜೈಟ್ಲಿ ಅವರು ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಒದಗಿಸಲು 600 ಕೋಟಿ ಹಣ ಬಿಡುಗಡೆ ಮಾಡಿದ್ದರು. ಟಿಬಿ ಒಂದು ಅಪಾಯಕಾರೀ ಖಾಯಿಲೆಯಾದರೂ ಅದೊಂದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ. ಹಾಗೆ ಗಾಳಿಯ ಮೂಲಕ ಹರಡುವ ರೋಗಾಣುಗಳು ಇನ್ನೊಬ್ಬರ ದೇಹದೊಳಗೆ ಸೇರದಂತೆ ತಡೆಗಟ್ಟಿದರೆ ಟಿಬಿ ಖಾಯಿಲೆಯು ಹರಡದಂತೆ ತಡೆಯಬಹುದಾಗಿದೆ.
ಭಾರತದ ರಾಷ್ಟ್ರಪತಿಗಳಿಂದ ಉತ್ತಮ ಸ್ಟಾರ್ಟ್ ಅಪ್ಗಾಗಿ ಪ್ರಶಸ್ತಿ ಗಳಿಸಿರುವ ನಾಸೋಫಿಲ್ಟರ್ಸ್(Nasofilters) ಎನ್ನುವ ಸ್ಟಾರ್ಟ್ ಅಪ್, ಈ ಕ್ಷಯ ರೋಗ ನಿರ್ಮೂಲನೆಗೆ ಮತ್ತು ವಾಯು ಮಾಲಿನ್ಯದಿಂದಾಗುವ ತೊಂದರೆಗಳ ವಿರುದ್ಧ ಹೋರಾಡಲು ಗಣನೀಯ ಕೊಡುಗೆ ನೀಡಬಹುದಾಗಿದೆ. ದೆಹಲಿಯ ಐಐಟಿ ಅಭಿವೃದ್ಧಿಪಡಿಸಿದ ನಾಸೋಫಿಲ್ಟರ್ಸ್ ಭಾರತದಲ್ಲೇ ಅತ್ಯಂತ ಕೈಗೆಟುಕುವ ದರದ ಹಾಗೂ ಅತ್ಯಂತ ಸಮರ್ಥ ಪೊಲ್ಲ್ಯೂಷನ್ ಫಿಲ್ಟರ್ ಎಂದು ಗುರುತಿಸಿಕೊಂಡಿದೆ. ರಿಪಬ್ಲಿಕ್ ಆಫ್ ಕೊರಿಯಾ ಸ್ಟಾರ್ಟಪ್ ಸ್ಪರ್ಧೆಯಲ್ಲಿ ನಾಸೋಫಿಲ್ಟರ್ 118 ಸ್ಟಾರ್ಟ್ ಅಪ್ಗಳ ಪೈಕಿ ಜಗತ್ತಿನ 25 ಶ್ರೇಷ್ಠ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ.
ತಮ್ಮ ಉತ್ಪನ್ನ ಹಾಗೂ ಅದರ ತಂತ್ರಜ್ಞಾನದ ಬಗ್ಗೆ ನಾಸೋಫಿಲ್ಟರ್ಸ್ನ ಮೆಂಟರ್ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಆಗಿರುವ ಪ್ರಸೂನ್ ಶರ್ಮಾ ಅವರು ಹೀಗೆ ಬರೆಯುತ್ತಾರೆ;
ವಾಯುಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ಮತ್ತು ಗಾಳಿಯಲ್ಲಿನ ಅತ್ಯಂತ ಸಣ್ಣ (ವಿಶೇಷವಾಗಿ 2.5particulate matter ಗಾತ್ರಗಳ) ಕಣಗಳನ್ನು ಗಮನದಲ್ಲಿಟ್ಟುಕೊಂಡು ನಾವು ಈ ಫಿಲ್ಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದು ನಮ್ಮ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲಿದೆ. ಈ ಫಿಲ್ಟರ್ಗಳು ಮೂಗಿನ ಹೊಳ್ಳೆಗಳಲ್ಲಿ ಅಂಟಿಸಿಕೊಳ್ಳಬಹುದಾಗಿದ್ದು ಅವು ಅತ್ಯಂತ ಸೂಕ್ಷ ಮಾಲಿನ್ಯಕಾರಕ ಕಣಗಳನ್ನೂ ಕೂಡಾ ದೇಹದೊಳಕ್ಕೆ ಸೇರದಂತೆ ತಡೆಯುತ್ತವೆ. ಈ ಫಿಲ್ಟರ್ಗಳು ಯೂಸ್ ಅಂಡ್ ಥ್ರೋ ಮಾದರಿಯವಾಗಿದ್ದು ಅತ್ಯಂತ ಕಡಿಮೆ ಬೆಲೆಗೆ ದೊರೆಯಬಲ್ಲವಾಗಿವೆ. ಜೈವಿಕವಾಗಿಯೇ ನಾಶಪಡಿಸಬಹುದಾದ ವಿಶೇಷತೆಯ ಈ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವುದರಿಂದ ಬಡವರ್ಗದ ಜನಸಾಮಾನ್ಯರಿಗೂ ಉಪಯೋಗಿಸಲು ಅನುಕೂಲಕರವಾಗಿದೆ.
ನಾಸೋಫಿಲ್ಟರ್ಸ್ಗಳನ್ನು ರಾತ್ರಿ ನಿದ್ರಿಸುವಾಗಲೂ ಸೇರಿದಂತೆ ಇಪ್ಪತ್ನಾಲ್ಕು ಗಂಟೆಗಳೂ ಧರಿಸಬಹುದಾಗಿದೆ. ಸ್ಮಾಲ್,ಮೀಡಿಯಂ ಮತ್ತು ಲಾರ್ಜ್ ಅಳತೆಗಳಲ್ಲಿ ದೊರೆಯುವ ನಾಸೋಫಿಲ್ಟರ್ಸ್ಗಳು ನಮ್ಮ ದೇಹಕ್ಕೆ ಅಸಹಜವೆನ್ನಿಸದೆ ಸ್ವಾಭಾವಿಕವೆನ್ನಿಸುವಂತಿವೆ. ಸಾಮಾನ್ಯವಾಗಿ ಉಪಯೋಗಿಸುವ ಕಾರ್ಬನ್ ಫಿಲ್ಟರ್ಗಳು ಆಕ್ಟಿವಾಟೆಡ್ ಕಾರ್ಬನ್ ತಂತ್ರಜ್ಞಾನದಿಂದ ಅಥವಾ ಮಾಲೆಕ್ಯುಲರ್ ತಂತ್ರಜ್ಞಾನದಿಂದ ತಯಾರಾದವುಗಳಾಗಿದ್ದು, ಒಂದು ವೇಳೆ ಅದರ ಕಾರ್ಬನ್ ಕಣಗಳು ದೇಹವನ್ನು ಸೇರಿದರೆ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದಾಗಿದೆ.ಆದರೆ ನಾಸೋಫಿಲ್ಟರ್ಸ್ ಗಳಲ್ಲಿ ಬಳಸಲಾದ ಪಾಲೀಮರ್ಗಳು ಜೈವಿಕವಾಗಿದ್ದು ಒಂದು ವೇಳೆ ಫೈಬರ್ ಕಣಗಳು ದೇಹವನ್ನು ಸೇರಿದರೂ ಅವು ಯಾವುದೇ ಹಾನಿಯನ್ನೂ ಉಂಟುಮಾಡುವುದಿಲ್ಲ.
ಭಾರತವಷ್ಟೇ ಅಲ್ಲದೆ ಈಗಾಗಲೇ ಇರಾನ್, ದುಬೈ ಮತ್ತು ವಿಯೆಟ್ನಾಮ್ ದೇಶಗಳಿಂದ ದೊಡ್ಡ ಪ್ರಮಾಣದ ಆರ್ಡರ್ಗಳು ಬಂದಿವೆ. ಪ್ರಸ್ತುತ 200 ನ್ಯಾನೋ ಮೀಟರ್ಗಳಷ್ಟಿರುವ ಪಾಲಿಮರ್ನ ದಪ್ಪವನ್ನು ಇನ್ನಷ್ಟು ಕಡಿಮೆ ಮಾಡುವ ಬಗ್ಗೆಯೂ ಸಂಶೋಧನೆಗಳು ಪ್ರಗತಿಯಲ್ಲಿದ್ದು, ಅದರಿಂದಾಗಿ ಮುಂದೆ ವೈರಸ್ಗಳೂ ಕೂಡಾ ದೇಹವನ್ನು ಸೇರದಂತೆ ತಡೆಯಬಹುದಾಗಿದೆ ಎನ್ನುವ ಆಶಾಭಾವನೆಯಿದೆ. ಆಗ ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗವಾದ ಕ್ಷಯ ರೋಗವನ್ನು ತಡೆಯುವಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಲಿದೆ.
ನಾವು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವು ನೀರು, ಗಾಳಿ ಮತ್ತು ಇಂಧನ ಶೋಧಿಸುವ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ನಮ್ಮ ತಂತ್ರಜ್ಞಾನದ ಬಳಕೆಯಿಂದ ಈ ಕ್ಷೇತ್ರಗಳಲ್ಲಿ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ. ನಿಧಿ ಸಂಗ್ರಹಣೆಗಾಗಿ ಭಾರತ, ಅಮೇರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ಬಂಡವಾಳ ಹೂಡಿಕೆದಾರರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗುತ್ತಿದ್ದು, ಪ್ರಪಂಚದಾದ್ಯಂತ ಬಳಕೆಗೆ ತರುವ ನಿಟ್ಟಿನಲ್ಲಿ ಸೂಕ್ತ ಭಾಗೀದಾರರನ್ನು ಎದುರು ನೋಡುತ್ತಿದ್ದೇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.