28 ಏಪ್ರಿಲ್ 1740 – ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ವೀರಯೋಧ, ಸೋಲನರಿಯದ ಹಿಂದು ಹುಲಿ, ಪೇಶ್ವಾ ಬಾಜಿರಾವ್ ಬಲ್ಲಾಳ್ ತನ್ನ 39 ನೆಯ ವಯಸ್ಸಿನಲ್ಲಿ ಪ್ರಾಣತ್ಯಾಗ ಮಾಡಿದ ದಿನ. ಇಂದಿಗೆ 278 ವರ್ಷಗಳಾದವು.
ಸಾಟಿಯಿಲ್ಲದ ಹಿಂದೂ ಖಡ್ಗ – ಬಾಜೀರಾಯಸಧೃಢವಾದ ಬಲಶಾಲಿ ದೇಹ, ನೀಳ ಕಾಯ, ಹೊಳೆಯುವ ಮೈಬಣ್ಣ . ಕಾಂತಿತುಂಬಿತ ಕಂಗಳಿಂದ ಕಂಗೊಳಿಸುವ ಸುಂದರ ಯುವಕ. ಸದಾ ವ್ಯಾಯಾಮ ಕಸರತ್ತುಗಳಿಂದ ಪಳಗಿದ್ದ ಬಾಜೀರಾಯ. ಒಳ್ಳೆಯ ಕುದುರೆ ಸವಾರ. ದೂರ ದೂರದ ತನಕ ಕೊಂಚವೂ ಸುಸ್ತಾಗಾದೇ ಕುದುರೆ ಚಲಾಯಿಸಬಲ್ಲ. ಖಡ್ಗ, ಈಟಿ, ಭರ್ಜಿ, ಬಿಲ್ಲು ಬಾಣಗಳನ್ನು ಚಲಾಯಿಸುವುದರಲ್ಲಿ ನಿಪುಣ. ಸಾಯುವ ಮುನ್ನ ಒಮ್ಮೆಯೂ ಖಾಯಿಲೆ ಬಿದ್ದಿರದ ಆರೂಗ್ಯಕರ ದೇಹ. ಭಯ ಎಂಬುದು ಲವಲೇಶವೂ ಇಲ್ಲದಂಥಹ ಧೈರ್ಯಶಾಲಿ ವ್ಯಕ್ತಿ. ಬಾಹುಬಲವಷ್ಟಲ್ಲದೆ ಅಸಾಧಾರಣ ಬುದ್ಧಿವಂತನೂ ಕೂಡ. ಬ್ರಾಹ್ಮಣ ಕುಟುಂಬದಲ್ಲೇ ಬೆಳೆದ ಬಾಜಿರಾಯ ರಾಮಾಯಣ ಮಹಾಭಾರತ ವೆಲ್ಲವನ್ನು ಕಲಿತಿದ್ದ. ತನ್ನ ಬಾಲ್ಯದ ಶಿಕ್ಷಣ ಮಾತೃಛಾಯೆಯಲ್ಲಿಯೇ ಕಟ್ಟೂನಿಟ್ಟಾಗಿ ನಡೆದಿತ್ತು. ಹೇಗೆ ಶಿವಾಜಿಯನ್ನು ಜೀಜಾಮಾತೆ, ಹೇಗೆ ಪ್ರತಾಪನನ್ನು ಜಯವಂತಾ ಭಾಯಿಯೋ ಹಾಗೆ ಮತ್ತೊಬ್ಬ ಮಾತೃಭೂಮಿಯ ವೀರಪುತ್ರನೂ ಮಾತೆಯ ಪದತಲದಲ್ಲೇ ಬೆಳೆದಿದ್ದ. ತಾಯಿ ರಾಧಾಭಾಯೀಯೊ ಸಹಿತ ಒಳ್ಳೆಯ ಕಲಿತ ಮಹಿಳೆಯೇ ಆಗಿದ್ದರು. ಎಷ್ಟರ ಮಟ್ಟಿಗೆಯೆಂದರೆ ಕೆಲವು ಬಾರಿ ಮಗನಿಗೆ ರಾಜ್ಯಾಡಳಿತದ ವಿಚಾರದಲ್ಲಿಯೂ ಸಲಹೆ ನೀಡುತ್ತಿದ್ದರು. ಮಾನಸಿಕವಾಗಿ ಬಾಜಿರಾಯ ಶಿವಾಜಿಯ ಪುತ್ರನೇ. ತನ್ನ ಪೂರ್ವಕಾಲೀನ ಇತಿಹಾಸವನ್ನು ಚನ್ನಾಗಿ ಅರಿತಿದ್ದ. ಶಿವಾಜಿಯೂ ಸ್ವರಾಜ್ಯಸ್ಥಾಪನೆಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟ ಶ್ರಮ.
ತದನಂತರ ನಡೆದ ಸಾಂಭಾಜಿಯ ಸಂಗ್ರಾಮ ಮತ್ತವನ ಬರ್ಬರ ಹತ್ಯೆ ಮತ್ತು ರಾಜಾರಾಮನ ಸಂಘರ್ಷ. ತದನಂತರ ತನ್ನ ಸಮಕಾಲೀನ ವಿದ್ಯಾಮನಗಳಲ್ಲಿ ನಡೆದ ಷಾಹುವಿನ ಮೋಘಲರ ಬಂಧ ಮೋಚನೆ ಮತ್ತು ಆ ಸಮಯದಲ್ಲಿ ತಂದೆ ವಿಶ್ವನಾಥ ಭಟ್ಟರ ಜೊತೆಯಲ್ಲೇ ಅಹ್ಮದನಗರ ದೌಲತಾಬಾದ ಕಡೆಗಳಲ್ಲಿ ಏಳನೆಯ ವಯಸ್ಸಿನಲ್ಲೇ ಓಡಾಡಿದ ರಾಜಕೀಯ ಅನುಭವಗಳು. ತನ್ನ ಬಾಲ್ಯಾವಸ್ಥೆಯಲ್ಲಿಯೇ ಗೌರವಾನ್ವಿತ ತಂದೆ ಪೇಶ್ವೆಯಾಗಿ ಏರಿದ್ದನ್ನು ಕಾಣುತ್ತಾ ಅಭಿಮಾನದಿಂದ ಬೆಳೆದಿದ್ದ. ಇವೆಲ್ಲ ವಿಶಿಷ್ಟ ಸಂಸ್ಕಾರ ಮತ್ತು ಅನುಭವಗಳು ಬಾಜಿರಾಯನಲ್ಲಿನ ಮಹಾಪುರುಷ ಅತಿ ಬೇಗ ಬೆಳೆಯಲು ಸಾಧ್ಯವಾಯಿತು. ತಂದೆ ವಿಶ್ವನಾಥ ಭಟ್ಟರಂತೂ ಭಾರತ ಕಂಡ ಅನರ್ಘ್ಯ ರತ್ನಗಳಲ್ಲೊಬ್ಬರು. ಮರಾಠಾ ಸಂಸ್ಥಾನಕ್ಕೆ ಶಾಸನ ಅರ್ಥವ್ಯವಸ್ಥೆ ರೀತಿ ರಿವಾಜುಗಳ ಅಡಿಪಾಯ ಹಾಕಿಕೊಟ್ಟವರೇ ಇವರು. ಹಣಕಾಸಿನ ವಿಷಯದಲ್ಲಿ ತನಗೆ ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತ. ತನ್ನ ಮಗಳ ಮದುವೆಗೆ ಹಣ ಸಾಲದೆ ಸಾಲ ಪಡೆದ ಸಂಧರ್ಭವೂ ಇತ್ತು. ತನ್ನ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಪಡೆಯುತ್ತಿದ್ದರು. ಅದುವೇ ಸಾಕಾಗುತ್ತಿರಲ್ಲಿಲ್ಲ.
ಪ್ರಧಾನಮಂತ್ರಿಯಾಗಿದ್ದರೂ ಒಂದು ಸಾಧಾರಣ ಮನೆಯಲ್ಲೇ ವಾಸಿಸುತ್ತಿದ್ದರು. ಇಂಥಹ ಸಾತ್ವಿಕ ಪರಿಸರದಲ್ಲಿ ಬೆಳೆದ ಬಾಜಿರಾಯ ಮತ್ತೊಬ್ಬ ಶಿವಾಜಿಯಾಗದೆ ಇರುತ್ತಾನೆಯೇ ? ಅವನ ಸಾಮರ್ಥ್ಯದ ಬಗ್ಗೆ ಛತ್ರಪತಿ ಷಾಹು ಮಹಾರಾಜರಿಗೆ ಆಗಲೇ ಒಂದು ಕಣ್ಣಿತ್ತು. ತಂದೆ ವಿಶ್ವನಾಥ ಭಟ್ಟರ ಮರಣಾನಂತರ ಷಾಹು ಮಹಾರಾಜರು ಇಪ್ಪತ್ತು ವರ್ಷದ ಹರೆಯಬಾಲಕ ಬಾಜಿರಾಯನನ್ನೇ ತನ್ನೆ ಪ್ರಧಾನ ಮಂತ್ರಿ (ಪೇಶ್ವೆ) ಯೆಂದು ಆಯ್ಕೆ ಮಾಡಿದರು. ಅನೇಕರ ವಿರೋಧಗಳ ಹೊರತಾಗಿಯೂ. ಷಾಹು ಮಹಾರಾಜರಿಗೆ ಬಾಜಿರಾಯನ ಮೇಲೆ ಅದೆಷ್ಟು ನಂಬಿಕೆಯೆಂದರೆ ಎಲ್ಲಾದರೂ ಒಂದು ಲಕ್ಷ ಸೇನೆ ಮತ್ತು ಬಾಜಿರಾಯನ ನಡುವೆ ಆಯ್ಕೆಯಿಟ್ಟರೆ ತಾನು ಬಾಜಿರಾಯನನ್ನೇ ಆಯ್ಕೆ ಮಾಡುತ್ತೇನೆ ಎಂದಿದ್ದರಂತೆ. ನಂತರ ಭಾರತ ಕಂಡ ಆ ಇಪ್ಪತ್ತು ವರ್ಷಗಳು ಬಾಜಿರಾಯನ ವಿಜಯಭೇರಿ ಸಾವಿರ ವರ್ಷಗಳ ಕಗ್ಗೊಲೆ ದಬ್ಬಾಳಿಕೆಗಳಿಗೆ ಖಡ್ಗ ಪ್ರಹಾರ ನೀಡಿ ಮತ್ತೊಂದು ಸುವರ್ಣ ಯುಗಕ್ಕೆ ನಾಂದಿ ಹಾಡಿತ್ತು. प्रस्थापित स्वराज्य महाराष्ट्रे शिवाजिनास्वराज्यं बाजीरावेण साम्राज्ये परिवर्तितमः
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.