
ಬೆಂಗಳೂರು: ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್ಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಸಿಲಿಂಡರ್ ಪೂರೈಕೆ ವಿಷಯದಲ್ಲಿ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಾ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಾ ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಸಹ ಆಗುತ್ತದೆ ಎಂದು ರಾಹುಲ್ ಗಾಂಧಿ ಅವರು ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ. ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಅಡುಗೆ ಮತ್ತು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಹಲವು ಮೂಲಗಳಿಂದ ಪ್ರಯತ್ನ ಮಾಡಲಾಗಿದೆ. ಈ ಮೊದಲು 20 ರಿಂದ 22 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ತಿತ್ತು. ಈಗ ಇದು 40 ದೇಶಗಳಿಗೆ ಹೆಚ್ಚಿದೆ ಎಂದು ನುಡಿದರು.
ಅಡುವೆ ಅನಿಲ ಸಿಲಿಂಡರ್ ಕೊರತೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ಪ್ರೌಢತೆ ಇಲ್ಲದ ನಾಯಕ. ಅಡುಗೆ ಸಿಲಿಂಡರ್ ಕೊರತೆಗೆ ಮುಷ್ಕರ ಮಾಡಿ ಎಂದು ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಗಳು ಕರೆ ನೀಡುವುದು ದುರ್ದೈವ. ಅದು ಅವರ ಬೇಜವಬ್ದಾರಿತನದ ಪರಮಾವಧಿ ತೋರಿಸುತ್ತದೆ ಎಂದು ದೂರಿದರು.
ಅಡುಗೆ ಮತ್ತು ವಾಣಿಜ್ಯ ಸಿಲಿಂಡರ್ಗೆ ಬುಕಿಂಗ್ ರಶ್ ಇದೇ. ಹಾಗಾಗಿ ಕೆಲವು ನಿಬರ್ಂಧ ಇದೆ. ಬುಕ್ ಮಾಡಿದ ನಂತರ ಈ ಮೊದಲಿನಂತೆ ಪೂರೈಕೆ ಆಗ್ತಾ ಇದೆ. ಆದು ಬಿಟ್ಟರೆ ದೇಶದಲ್ಲಿ ಸಿಲಿಂಡರ್ ಕೊರತೆ ಇಲ್ಲ. ಜಾಗತಿಕ ಸರಕು ಸಾಗಣೆಯ ಪ್ರಮುಖ ಜಲಮಾರ್ಗ ಹರ್ಮುಜ್ ಜಲಸಂಧಿ ಮೂಲಕ ಈಗಾಗಲೇ ಒಂದು ಹಡಗು ಬಂದಿದೆ. ಇನ್ನೂ ಹಲವು ಹಡಗು ಬರಲಿವೆ. ಇದು ಎಲ್ಲ ದೇಶಗಳ ಜೊತೆಗೆ ಭಾರತದ ಸಂಬಂಧ ಚೆನ್ನಾಗಿದೆ ಎಂಬುದನ್ನು ತೋರಿಸಿದೆ ಎಂದರು.
ಎಲ್ಪಿಜಿ ಪೂರೈಕೆ ಕೊರತೆ ಆಗಲಿದೆ ಎಂಬ ಭಯದಿಂದ ಅಗತ್ಯವಿಲ್ಲದಿದ್ದರೂ ಹೆಚ್ಚು ಹೆಚ್ಚು ಬುಕಿಂಗ್ ಮಾಡಬೇಡಿ ಎಂದು ಈಗಾಗಲೇ ಕೇಂದ್ರ ಸಚಿವರಾದ ಹರ್ದಿಪ್ ಪುರಿ ಅವರು ಹೇಳಿದ್ದಾರೆ. ದೇಶದಲ್ಲಿ 5 ದಿನದಲ್ಲಿ ಶೇ 28̇ ರಷ್ಟು ಎಲ್ಪಿಜಿ ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚು ಮಾಡ್ತೇವೆ. ಆ ಸಾಮಥ್ರ್ಯ ಭಾರತಕ್ಕೆ ಇದೆ ಎಂದು ವಿವರಿಸಿದರು.
ಶೇ.80 ರಷ್ಟು ಕಚ್ಚಾತೈಲ ಬರುವುದೇ ಹರ್ಮುಜ್ನಿಂದ. ಯುದ್ಧದಿಂದ ಸಮಸ್ಯೆ ಆಗಿರುವುದರಿಂದ ನೇರವಾಗಿ ಎಲ್ ಪಿಜಿ ಆಮದು ಮಾಡ್ತಾ ಇದ್ದೇವೆ. ಅದರ ಮೂಲ ಕಡಿಮೆ ಇದೆ. ರಷ್ಯಾ ಹಾಗೂ ಆಫ್ರಿಕಾ ದೇಶಗಳಿಂದ ತರಿಸಲು ಪ್ರಯತ್ನ ಮಾಡಿದ್ದೇವೆ ಎಂದರು.
ಈಗ ಈ ರೀತಿ ಕೊರತೆ ಆಗುವುದಕ್ಕಿಂತ ಮೊದಲೇ ದೇಶದಲ್ಲಿ 25 ಲಕ್ಷ ಡೀಸೆಲ್ ಪಂಪ್ಗಳನ್ನು ಸೋಲಾರ್ ಪಂಪ್ಗಳಾಗಿ ಪರಿವರ್ತಿಸಿದ್ದೇವೆ. ಕಲ್ಲಿದ್ದಲು ಉತ್ಪಾದನೆ ಆಗ್ತ ಇದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಮಾಡಿದ್ದೇವೆ. ಇದೆಲ್ಲ ಬಿಜೆಪಿ ಕಾಲದಲ್ಲಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಆಗಿರೋದು ಎಂದರು.
ಸಿಲಿಂಡರ್ ಕೊರತೆಯ ಆತಂಕ ಸೃಷ್ಟಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾವನೆಯನ್ನು ಕೆರಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡ್ತಾ ಇದೆ. ನಮಗೆ ಮುಖ್ಯವಾಗಿ ಮಧ್ಯಪ್ರಾಚ್ಯದಿಂದ ಪೆಟ್ರೋಲಿಯಂ ಉತ್ಪನ್ನಗಳು ಬರ್ತಾ ಇದ್ವು. ಬಹುತೇಕ ಕಡೆ ತೈಲ ತೆಗೆಯುವ ಸಮಸ್ಯೆ ಆಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೊದಲು ಎಲ್ಪಿಜಿ ನಂತರ ಫರ್ಟಿಲೈಜರ್ಗೆ ಆದ್ಯತೆ ನೀಡುತ್ತಿದೆ ಎಂದು ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


