ಮೋದಿ ಸರಕಾರದ ಕಠಿಣ ಕಾರ್ಯಾಚರಣೆಯಿಂದ 4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಸಾಲ (NPA-Non Performing Assets ಅನುತ್ಪಾದಕ ಆಸ್ತಿ/ಸಾಲ) ದ ಮರುಪಾವತಿ
ಮೋದಿ ಸರಕಾರವು ಜಾರಿಗೆ ತಂದ ಕಠಿಣವಾದ Insolvency and Bankrupt Code (ದಿವಾಳಿ ಘೋಷಣಾ ಕಾನೂನು) ನಿಂದಾಗಿ ಬ್ಯಾಂಕ್ಗಳಿಂದ ಲೋನ್ ಪಡೆದು ಮರು ಪಾವತಿಸಲ್ಪಡದ ಕೆಟ್ಟ ಸಾಲ (NPA) 9 ಲಕ್ಷ ಕೋಟಿ ರುಪಾಯಿಗಳಲ್ಲಿ ಈಗಾಗಲೇ 4 ಲಕ್ಷ ಕೋಟಿ ರೂಪಾಯಿಗಳು ಮರುಪಾವತಿಸಲ್ಪಟ್ಟಿವೆ.
ಈ ಮೊದಲು ಉದ್ಯಮಿಗಳು ಬ್ಯಾಂಕ್ಗಳಿಂದ ದೊಡ್ಡ ಮೊತ್ತದ ಸಾಲವನ್ನು ಪಡೆದು ನಂತರ ಕಂಪೆನಿಯನ್ನು ದಿವಾಳಿಯೆಂದು ಘೋಷಿಸಿ ಬ್ಯಾಂಕ್ಗಳಿಗೆ ನೂರುಗಟ್ಟಲೆ ಅಥವಾ ಸಾವಿರಗಟ್ಟಲೆ ಕೋಟಿ ರೂಪಾಯಿಗಳ ಪಂಗನಾಮ ಹಾಕುತ್ತಿದ್ದರು. ಕಂಪೆನಿಯು ದಿವಾಳಿಯೆಂದು ಘೋಷಿಸಲ್ಪಟ್ಟರೆ ಸಾಲವನ್ನು ಮರುವಸೂಲಿ ಮಾಡುವ ಕಾನೂನು ಭಾರತದಲ್ಲಿ ಅಸ್ಥಿತ್ವದಲ್ಲಿರಲಿಲ್ಲ. ಭೂಷಣ್ ಸ್ಟೀಲ್ ಸಂಸ್ಥೆಯು 43 ಸಾವಿರ ಕೋಟಿ ರೂಪಾಯಿಗಳ ಸಾಲಮಾಡಿ ದಿವಾಳಿಯೆಂದು ಘೋಷಿಸಿಕೊಂಡು ಸಾಲವನ್ನು ಮರುಪಾವತಿಸದೆ ಕುಳಿತಿತ್ತು.
ಲ್ಯಾಂಕೋ ಸಂಸ್ಥೆಯು ಕೂಡಾ 30 ಸಾವಿರ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಸಾಲಮಾಡಿ ದಿವಾಳಿಯೆಂದು ಘೋಷಿಸಿಕೊಂಡು ಸಾಲ ಮರುಪಾವತಿಸದೆ ಕುಳಿತಿತ್ತು. ಆದರೆ ಮೋದಿ ಸರಕಾರವು ಈ Insolvency and Bankrupt Code (ದಿವಾಳಿ ಘೋಷಣಾ ಕಾನೂನು) ಕಾಯ್ದೆಯನ್ನು ಜಾರಿಗೆ ತಂದು ದಿವಾಳಿಯೆಂದು ಘೋಷಿಸಲ್ಪಟ್ಟ ಉದ್ಯಮದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮವನ್ನು ಕೈಗೊಂಡ ಕಾರಣ ಕಾನೂನು ಜಾರಿಗೊಂಡ ಕೆಲವೇ ತಿಂಗಳುಗಳಲ್ಲಿ ರುಪಾಯಿ 4 ಲಕ್ಷ ಕೋಟಿಗಳ ಸಾಲ ಮರುಪಾವತಿಗೊಂಡಿದೆ. ಸಾಲ ಮರುಪಾವತಿಸಲಾಗದ ಭೂಷಣ್ ಸ್ಟೀಲ್ ಟಾ ಟಾ ಸ್ಟೀಲ್ಗೆ ಮಾರಾಟಗೊಂಡಿದೆ. ಮಾರಾಟದ ಹಣವು ಬ್ಯಾಂಕ್ ಸಾಲಕ್ಕೆ ಜಮೆಯಾಗಿದೆ.
ಭಾರತದ ಸ್ವಾತಂತ್ರ್ಯಾ ನಂತರ 4 ಲಕ್ಷ ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಅನುತ್ಪಾದಿತ ಸಾಲವು (NPA) ಮರುಪಾವತಿಯಾಗುತ್ತಿರುವುದು ಇದೇ ಮೊದಲು. ಇದನ್ನೇ ಮೋದಿ ಹೇಳಿದ್ದು “ಮೈ ನಹೀ ಖಾವೂಂಗಾ, ಖಾನೇಕೋ ನಹೀ ದೂಂಗಾ” ಅಂತ. ಅಚ್ಛೇ ದಿನ್ ಅಂದರೆ ಇದಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.