ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ದಶಕದ ನಂತರ ಇದೇ ಮೊದಲ ಬಾರಿ ಈ ರೀತಿಯ ಭಾರೀ ಕಾರ್ಯಾಚರಣೆ ನಡೆದಿದೆ.
ಒಂದೇ ದಿನದಲ್ಲಿ ಕಾಶ್ಮೀರದ ಶೋಪಿಯಾನ್ ಹಾಗು ಅನಂತನಾಗ್ ಎಂಬ ಪ್ರದೇಶಗಳಲ್ಲಿ ಮೂರು ಜಾಗದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಉಗ್ರ ಸಂಘಟನೆಯ ಇಬ್ಬರು ಕಮಾಂಡರ್ ಸೇರಿ 12 ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಮತ್ತೊಮ್ಮೆ ತಾಯಿ ಭಾರತೀಯ ರಕ್ಷಣೆಯ ಕೆಲಸವನ್ನು ಅತ್ಯಂತ ಸಾಮರ್ಥ್ಯದಿಂದ ಮಾಡಿದೆ.
ಶನಿವಾರ ರಾತ್ರಿ ಆರಂಭಗೊಂಡ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ ಪಡಿಸಿಕೊಂಡರು. ಭಾನುವಾರ ರಾತ್ರಿಯವರೆಗೂ ಶೋಧಕಾರ್ಯ ಮುಂದುವರೆದಿತ್ತು. ಈ ಕಾರ್ಯಾಚರಣೆಯಲ್ಲಿ ನಾಲ್ವರು ನಾಗರೀಕರು ಸಾವನ್ನಪ್ಪಿದರು. ಐವತ್ತಕ್ಕೂ ಹೆಚ್ಚು ನಾಗರೀಕರು ಗಾಯಗೊಂಡಿದ್ದಾರೆ.
ಹಿಂದೆ ಲೆಫ್ಟೆನೆಂಟ್ ಉಮರ್ ಫಯಾಜ್ನನ್ನು ಅಪಹರಿಸಿ ಅವರನ್ನು ಮೋಸದಿಂದ ಕೊಂದಿದ್ದಕ್ಕೆ ಪ್ರತ್ಯುತ್ತರದಂತೆ ಭಾರೀ ದಾಳಿ ನಡೆದಿತ್ತು. ಶೋಪಿಯಾನ್ನ ದ್ರಾಗ್ಗದ್ನಲ್ಲಿ ಅವಿತಿದ್ದ ಮನೆಗಳ ಮೇಲೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಏಳು ಭಯೋತ್ಪಾದಕರನ್ನು ಹೊಡೆದುರುಳಿಸಿದರು. ಹತ್ಯೆಯಾದ ಭಯೋತ್ಪಾದಕರಲ್ಲಿ ಅಶ್ಪಾಕ್ ಮಲಿಕ್ ಹಾಗು ರಯೀಸ್ ಥೋಕರ್ ಇವರಿಬ್ಬರೂ ಹುತಾತ್ಮ ಲೆಫ್ಟನೆಂಟ್ ಉಮರ್ ಫಯಾಜ್ ಅಪಹರಣ ಹಾಗು ಹತ್ಯೆಯಲ್ಲಿ ಪ್ರಮುಖ ಆರೋಪಿಗಳಾಗಿದ್ದರು. ಇವರ ಜೊತೆ ಲಷ್ಕರ್-ಏ-ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ನಜೀಂ ದಾರ್, ಉಬೈದ್ ಶಫಿ ಮಲ್ಲಾ, ಯಾವರ್ ಇಟೋ, ಮತ್ತು ಜುಬೈರ್ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಶೋಪಿಯಾನ್ ಜಿಲ್ಲೆಯ ಕಚ್ದೂರಾದಲ್ಲಿ ನಡೆದ ಎಂಕೌಂಟರ್ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಅನಂತನಾಗ್ ಜಿಲ್ಲೆಯ ದಿಯಾಲ್ಗಾಂವ್ನ ಮನೆಯೊಂದರಲ್ಲಿ ಅಡಗಿದ್ದ ಇಬ್ಬರು ಉಗ್ರರ ಪೈಕಿ ಓರ್ವ ಶರಣಾಗಿದ್ದರೆ ಮತ್ತೊಬ್ಬ ಸೇನಾಪಡೆ ಗುಂಡಿಗೆ ಬಲಿಯಾಗಿದ್ದಾನೆ.
ಅಬ್ಬಬ್ಬಾ ಈ ರೀತಿಯ ಸಾಹಸ, ಧೈರ್ಯ ಮೆಚ್ಚುವಂತದ್ದೇ. ಲೆಫ್ಟೆನೆಂಟ್ ಉಮರ್ ಫಯಾಜ್ ಸಾವಿಗೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡುವ ಮೂಲಕ ಮತ್ತೊಮ್ಮೆ ನಮ್ಮ ತಾಕತ್ತನ್ನು ತೋರಿಸಿದ್ದಾರೆ.
ತಾಯಿ ಭಾರತೀಯನ್ನು ರಕ್ಷಿಸುತ್ತಾ ಉಗ್ರರ ಗುಂಡೇಟಿಗೆ ಹುತಾತ್ಮರಾದ ವೀರಯೋಧರಿಗೆ ನಮನಗಳನ್ನು ಸಲ್ಲಿಸೋಣ. ಅವರು ನಮಗಾಗಿ ಮತ್ತೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಅವರಿಗಾಗಿ ಪ್ರಜ್ಞೆಯಿಂದ ನಮ್ಮ ಕೆಲಸಗಳನ್ನು ಮಾಡೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.