News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಡಿಯಾ ಪೋಸ್ಟ್ ಬ್ಯಾಂಕಿಂಗ್ ಲೋಗೋ ವಿನ್ಯಾಸಕ್ಕೆ ಆಹ್ವಾನ

ನವದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ಪೇಮೆಂಟ್ ಬ್ಯಾಂಕ್‌ನ ಲೋಗೋ (ಲಾಂಛನ), ಟ್ಯಾಗ್‌ಲೈನ್ ವಿನ್ಯಾಸಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದೆ. ಸ್ಪರ್ಧೇಯ ವಿಜೇತರಿಗೆ ರೂ.50,000 ಬಹುಮಾನ ನೀಡಲಾಗುವುದು ಎಂದು ಇಲಾಖೆ ಘೋಷಿಸಿದೆ. ಅಂಚೆ ಇಲಾಖೆ MyGov ವೆಬ್‌ಸೈಟ್‌ನಲ್ಲಿ ಆರಂಭಿಸಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ...

Read More

ಕರ್ನಾಟಕ ಪೊಲೀಸ್ ಇಲಾಖೆ ವೆಬ್‌ಸೈಟ್ ಹ್ಯಾಕ್

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಶುಕ್ರವಾರ ಹ್ಯಾಕ್‌ಗೆ ಒಳಗಾಗಿತ್ತು. ಪಾಕಿಸ್ಥಾನ ಮೂಲದ ಹ್ಯಾಕರ್‌ಗಳ ಕೃತ್ಯ ಇದೆಂದು ಹೇಳಲಾಗಿದೆ. ಹ್ಯಾಕ್ ಬಳಿಕ ದುಷ್ಕರ್ಮಿಗಳು ಪಾಕ್ ಧ್ವಜವನ್ನು ವೆಬ್‌ಸೈಟ್‌ನ ಹೋಂ ಪೇಜ್‌ನಲ್ಲಿ ಹಾಕಿದ್ದರು. ಇದು ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿದೆ. ಹ್ಯಾಕರ್...

Read More

2016ರ ರಿಯೋ ಒಲಿಂಪಿಕ್ಸ್ ಬಳಿಕ ಅಭಿನವ್ ಬಿಂದ್ರಾ ರಾಜೀನಾಮೆ

ನವದೆಹಲಿ: ಭಾರತದ ಚಾಂಪಿಯನ್ ಶೂಟರ್ ಅಭಿನವ್ ಬಿಂದ್ರಾ 2016ರ ರಿಯೋ ಒಲಿಂಪಿಕ್ಸ್ ಬಳಿಕ ನಿವೃತ್ತಿಯನ್ನು ಪಡೆಯಲು ನಿರ್ಧರಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಏಕೈಕ ಕ್ರೀಡಾಪಟುವಾಗಿರುವ ಬಿಂದ್ರಾ ಈ ಬಾರಿಯ ಒಲಿಂಪಿಕ್ಸ್ ಉದ್ಘಾಟನೆಯ ವೇಳೆ ಭಾರತದ ಧ್ವಜವನ್ನು...

Read More

ಜೂನ್ 18ಕ್ಕೆ ಮೂವರು ಮಹಿಳಾ ಫೈಟರ್ ಪೈಲೆಟ್‌ಗಳ ಅಧಿಕೃತ ಸೇರ್ಪಡೆ

ಹೈದರಾಬಾದ್: ಮೂವರು ಭಾರತದ ಮೊದಲ ಮಹಿಳಾ ಫೈಟರ್‌ಗಳು ಜೂನ್ 18 ರಂದು ಅಧಿಕೃತವಾಗಿ ಭಾರತೀಯ ನೌಕಾ ಸೇನೆಗೆ ಸೇರ್ಪಡೆಗೊಳ್ಳಲಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ಮೂವರು ಮಹಿಳಾ ಫೈಟರ್ ಪೈಲೆಟ್‌ಗಳನ್ನು ಮತ್ತು ವಿವಿಧ ಬ್ರಾಂಚ್‌ನ ಐಎಎಸ್ ಕೆಡೆಟ್‌ಗಳ ಅಧಿಕೃತ ಜಂಟಿ...

Read More

ಐಎನ್‌ಎಸ್ ವಿಕ್ರಮಾದಿತ್ಯದಿಂದ ಟಾಕ್ಸಿಕ್ ಗ್ಯಾಸ್ ಲೀಕ್: 2 ಸಾವು

ಕಾರವಾರ: ಭಾರತೀಯ ನೌಕಾ ಸೇನೆಯ ಏರ್‌ಕ್ರಾಫ್ಟ್ ಕ್ಯಾರಿಯರ್ ಐಎನ್‌ಎಸ್ ವಿಕ್ರಮಾದಿತ್ಯದಿಂದ ಟಾಕ್ಸಿಕ್ ಗ್ಯಾಸ್ ಲೀಕ್ ಆಗಿ ಇಬ್ಬರು ಮೃತರಾಗಿ, ಇಬ್ಬರು ಗಾಯಗೊಂಡ ಘಟನೆ ಕಾರವಾರ ಕಡಲ ಕಿನಾರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕಾರವಾರ ವಾಯುನೆಲೆಯಲ್ಲಿ ಕೆಲವೊಂದು ರಿಪೇರಿ ನಡೆಯುತ್ತಿದ್ದ ವೇಳೆ ಈ...

Read More

26/11 ದಾಳಿಯ ವೇಳೆ ಗೃಹಸಚಿವಾಲಯದ ಅಧಿಕಾರಿಗಳು ಪಾಕ್‌ನಲ್ಲಿದ್ದರು!

ನವದೆಹಲಿ: ಮುಂಬಯಿ ದಾಳಿ ನಡೆಸಲು ಭಾರತಕ್ಕೆ ಪಾಕಿಸ್ಥಾನ ಮೂಲದ ಉಗ್ರರು ಆಗಮಿಸಿದ್ದ ವೇಳೆ ಅಂದರೆ 2008ರ ನವೆಂಬರ್ 25ರಂದು ಭಾರತದ ಗೃಹಸಚಿವಾಲಯದ ಅಧಿಕಾರಿಗಳು ಪಾಕಿಸ್ಥಾನಕ್ಕೆ ಮಾತುಕತೆಗಾಗಿ ತೆರಳಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 2008ರ ನ.26ರಂದು ಲಷ್ಕರ್ ಇ ತೋಯ್ಬಾ ಸಂಘಟನೆಯ...

Read More

ಪಠಾನ್ಕೋಟ್ ದಾಳಿ ಸಾಕ್ಷ್ಯ ತೃಪ್ತಿದಾಯಕವಾಗಿಲ್ಲ ಎಂದ ಪಾಕ್

ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ವಿಚಾರಣೆಗೆಂದು ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಜಂಟಿ ತನಿಖಾ ತಂಡ ಇದೀಗ ಭಾರತ ಒದಗಿಸಿರುವ ದಾಳಿಯ ಸಾಕ್ಷಿಗಳು ನಮಗೆ ತೃಪ್ತಿ ತಂದಿಲ್ಲ ಎಂದಿದೆ. ವರದಿಯ ಪ್ರಕಾರ ದಾಳಿಯ ಆರೋಪಿಗಳು ಪಾಕಿಸ್ಥಾನದಲ್ಲಿ ನೆಲೆಸಿರುವ ಜೈಶೇ ಮುಖಂಡ...

Read More

ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ವರ್ಷದಿಂದ ವರ್ಷಕ್ಕೆ ಕಡಿಮೆ

ಬೆಳ್ತಂಗಡಿ : ಸರಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಇದರಿಂದಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು, ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಬಳೆಂಜದ...

Read More

ಪಾಠ ಹೇಳಲು ಜಾಗ ನೀಡಿ ಹೃದಯ ವೈಶಾಲ್ಯತೆ ಮೆರೆದ ಡಿಸಿ ಪ್ರಶಾಂತ್

ಕೋಝಿಕೋಡ್: ಕೋಝಿಕೋಡ್ ಜಿಲ್ಲಾಧಿಕಾರಿ ಎನ್ ಪ್ರಶಾಂತ್ ಹೃದಯ ವೈಶಾಲ್ಯತೆ ಮೆರೆದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಮಲಪರಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬೀಗ ಜಡಿಯಲಾಗಿದ್ದು, ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಅವರು ತಮ್ಮ...

Read More

ಜೂ.13 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ

ಬೆಂಗಳೂರು : ಜೂನ್ ಅಂತ್ಯದೊಳಗೆ ಸಂಪುಟ ಪುನಾರಚನೆಗೆ ಚಂತನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ. ಜೂ.13 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿ, ಹೈಕಮಾಂಡ್ ಜೊತೆ ಮಾತು ಕತೆ ನಡೆಸಿ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಲು...

Read More

Recent News

Back To Top