ಕೊಚಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ 15 ವರ್ಷದ ವಿಶಾಲ್ನ ಹೃದಯ ಟ್ರಾನ್ಸ್ಪ್ಲಾಂಟ್ ಮಾಡುವ ಮೂಲಕ 27 ವರ್ಷದ ಮಹಿಳೆಯ ಜೀವ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ವಿಶಾಲ್ನ ಕುಟುಂಬದವರ ಅನುಮತಿ ಮೇರೆಗೆ ಆತನ ಹೃದಯವನ್ನು ಭಾರತೀಯ ನೌಕಾಪಡೆಯ ಡಾರ್ನಿಯರ್ ವಮಾನದ ಸಹಾಯದಿಂದ ತಿರುವನಂತಪುರಂನಿಂದ ನೌಕೆಯ ಏರ್ ಅಂಬ್ಯುಲೆನ್ಸ್ ಮೂಲಕ ೨೦೦ ಕಿ.ಮೀ. ದೂರದ ಕೊಚಿಗೆ ಸಾಗಿಸಲಾಗಿತ್ತು. ಕೊಚಿಯ ಲಿಸೀ ಆಸ್ಪತ್ರೆಯ ವೈದ್ಯರ ತಂಡ ಹೃದಯವನ್ನು ಸಂಧ್ಯಾ ಅವರಿಗೆ ಟ್ರಾನ್ಸ್ಪ್ಲಾಂಟ್ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವೈದ್ಯರ ತಂಡ ಹೇಳಿದೆ.
ಆತನ ಕಿಡ್ನಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿನ 2 ರೋಗಿಗಳಿಗೆ ದಾನ ಮಾಡಲಾಗಿದೆ.
ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಶಾಲ್ ಸಾವನ್ನಪ್ಪಿದ್ದು, ಅಪಘಾತಕ್ಕೆ ಕಾರಣವಾಗಿದ್ದ ಕಾರು ಚಾಲಕ ನಂತರ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.