ನವದೆಹಲಿ : ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕಾಗಿ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ಸ್ಥಾನದಿಂದ ದಯಾ ಶಂಕರ ಸಿಂಗ್ನನ್ನು ವಜಾಗೊಳಿಸಲಾಗಿದೆ.
ಬುಧವಾರ ಸಂಸತ್ತಿನಲ್ಲಿ ಈ ವಿಷಯ ಪ್ರತಿಧ್ವನಿಸಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಮಾಯಾವತಿಯವರು ಈ ರೀತಿಯ ಹೇಳಿಕೆಯಿಂದಾಗಿ ಜನರು ದಂಗೆ ಎದ್ದಲ್ಲಿ ನಾನು ಹೊಣೆಗಾರಳಲ್ಲ. ದಯಾಶಂಕರ್ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.
ದಯಾಶಂಕರ್ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿರುವ ಬಿಜೆಪಿ ಇದಕ್ಕಾಗಿ ವಿಷಾದವನ್ನೂ ವ್ಯಕ್ತಪಡಿಸಿದೆ.
ಇಂತಹ ಶಬ್ದಗಳ ಬಳಕೆ ನಿಜಕ್ಕೂ ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ. ಅವರೇಕೆ ಹೀಗೆ ಹೇಳಿದ್ದಾರೆಂಬ ಕುರಿತು ತನಿಖೆ ಮಾಡುತ್ತೇವೆ. ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಗೌರವಕ್ಕೆ ನಾವು ಬೆಲೆ ನೀಡುತ್ತೇವೆ. ವೈಯಕ್ತಿಕವಾಗಿ ನಾನು ವಿಷಾದ ಹೇಳುತ್ತೇನೆ ಎಂದು ರಾಜ್ಯಸಭೆಯಲ್ಲಿ ಮಾಯಾವತಿಯವರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲೆ ಹೇಳಿದರು.
ದಯಾಶಂಕರ್ ಅವರ ಹೇಳಿಕೆಯನ್ನು ಉತ್ತರ ಪ್ರದೇಶದ ಬಿಜೆಪಿ ಘಟಕ ಕೂಡಾ ತೀವ್ರವಾಗಿ ಖಂಡಿಸಿದೆ.
ಟಿಕೆಟ್ ಹಂಚಿಕೆಯಲ್ಲಿ ಬಿಎಸ್ಪಿ ಭ್ರಷ್ಟಾಚಾರವೆಸಗಿದೆ ಎಂಬ ಆರೋಪದ ಕುರಿತು ಮಾತನಾಡುತ್ತಿರುವಾಗ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿ ಆಘಾತಕಾರಿ ಹೇಳಿಕೆಯನ್ನು ದಯಾಶಂಕರ್ ಸಿಂಗ್ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.