ನವದೆಹಲಿ: ಟಿವಿ, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಅಥವಾ ಇನ್ನಿತರ ಯಾವುದೇ ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಮುಂದಾಗಿದೆ.
ಪ್ರಸ್ತುತ ಇರುವ ಶಿಷ್ಟಾಚಾರ ನಿಯಮದಂತೆ ಸರ್ಕಾರಿ ಅಧಿಕಾರಿಗಳು ರೇಡಿಯೋ ಬ್ರಾಡ್ಕಾಸ್ಟ್, ಪಬ್ಲಿಕ್ ಮೀಡಿಯಾ ಕಮ್ಯುನಿಕೇಶನ್, ಯಾವುದೇ ದಾಖಲೆ, ಪ್ರೆಸ್ಗಳಲ್ಲಿ ಸರ್ಕಾರವನ್ನು ಟೀಕಿಸುವಂತಿಲ್ಲ.
ಇದೀಗ ಈ ನಿಯಮವನ್ನು ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳಿಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಶಿಷ್ಟಾಚಾರ ನಿಯಮದಲ್ಲಿ ತಿದ್ದುಪಡಿ ತರಲು ಚಿಂತನೆ ನಡೆಸಿದೆ.
ಸರ್ಕಾರಗಳ ಇತ್ತೀಚಿನ ಕ್ರಮ, ಯೋಜನೆಗಳ ಬಗ್ಗೆ ಅಥವಾ ರಾಜ್ಯ-ಕೇಂದ್ರಗಳ ಸಂಬಂಧ ಹಾಳುಗೆಡಹುವಂತಹ ಅಥವಾ ವಿದೇಶಿ ಸಂಬಂಧಕ್ಕೆ ಧಕ್ಕೆಯಾಗುವ ರೀತಿಯ ಟೀಕೆಗಳನ್ನು ಸರ್ಕಾರಿ ಅಧಿಕಾರಿಗಳು ಮಾಡಬಾರದು ಎಂಬ ನಿಯಮವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.