ನವದೆಹಲಿ: ಕ್ಯೂಎಸ್ ಯೂನಿವರ್ಸಿಟಿ ರ್ಯಾಂಕಿಂಗ್ಸ್ ಏಷ್ಯಾ 2016 ಪ್ರಕಾರ ಭಾರತ 17 ರಾಷ್ಟ್ರಗಳ 350 ಉನ್ನತ ವಿಶ್ವವಿದ್ಯಾಲಯಗಳ ಟಾಪ್ 100ರಲ್ಲಿ 9 ಹಾಗೂ ಟಾಪ್ 50ರಲ್ಲಿ 5 ವಿಶ್ವವಿದ್ಯಾಲಯಗಳನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.
‘ಜಾಗತಿಕ ಶೈಕ್ಷಣಿಕ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸ್ಥಿತಿಗತಿ’ ವರದಿಯ ಭಾಗವಾಗಿ ಒಪಿ ಜಿಂದಾಲ್ ಗ್ಲೋಬಲ್ ವಿಶವವಿದ್ಯಾಲಯ ಹಾಗೂ ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ್ಯಾಂಕಿಂಗ್ಸ್ ಅಂಡ್ ಎಕ್ಸೆಲೆನ್ಸ್ (ಐಸಿಎಆರ್ಇ) ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಈ ಮಾಹಿತಿ ನೀಡಿದೆ.
ಬ್ರಿಕ್ಸ್ (BRICS) ರ್ಯಾಂಕಿಂಗ್ 2016ರಲ್ಲಿ ಭಾರತ ಟಾಪ್ ೧೦ರಲ್ಲಿ 6ನೇ ಶ್ರೇಯಾಂಕ ಗಳಿಸಿದೆ.
ಟಾಪ್ 50ರಲ್ಲಿ ಭಾರತದ 8 ವಿಶ್ವವಿದ್ಯಾಲಯಗಳು ರಷ್ಯಾದ ವಿಶ್ವವಿದ್ಯಾಲಯಗಳಿಗೆ ಸಮಾನವಾಗಿವೆ ಹಾಗೂ ಭಾರತದ ಒಂದು ವಿಶ್ವವಿದ್ಯಾಲಯ ಬ್ರೆಸಿಲ್ಗಿಂತಲೂ ಉನ್ನತ ಸ್ಥಾನದಲ್ಲಿದೆ.
ಬ್ರಿಕ್ಸ್ ರ್ಯಾಂಕಿಂಗ್ಸ್ 2016ರ ಟಾಪ್ 250 ಸಂಸ್ಥೆಗಳಲ್ಲಿ ಭಾರತದ ಸಂಸ್ಥೆಗಳು ಕಳೆದ ವರ್ಷದ 31ರಿಂದ 44ಕ್ಕೆ ಏರಿಕೆಯಾಗಿದೆ.
ಜಾಗತಿಕವಾಗಿ ಟಾಪ್ 10 ಅತೀ ಹೆಚ್ಚು ಸಂಶೋಧನೆಗಳನ್ನು ನಡೆಸುತ್ತಿರುವ ಟಾಪ್ 10 ರಾಷ್ಟ್ರಗಳಲ್ಲಿ ಭಾರತ ಸ್ಥಾನ ಪಡೆದಿದೆ.
ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯ ಮೂಲಕ ಭಾರತ ತನ್ನ ಸುವರ್ಣ ಯುಗವನ್ನು ಕಾಣಬಹುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.