News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಡಿಜಿಧನ್ ಮಿಷನ್ ಫಿನ್-ಟೆಕ್ ಪ್ರಶಸ್ತಿ ಗೆದ್ದ BharatPe

ನವದೆಹಲಿ:  MeitY ಸ್ಟಾರ್ಟ್ ಅಪ್ ಸಮಿತ್­ 2019 ರಲ್ಲಿ ಭಾರತದ ಅತಿದೊಡ್ಡ ವ್ಯಾಪಾರಿ ಫಿನ್-ಟೆಕ್ ಕಂಪನಿಯಾದ ಭಾರತ್‌ಪೆ (BharatPe), ‘ಉದಯೋನ್ಮುಖ ತಂತ್ರಜ್ಞಾನದ ಮೂಲಕ ಡಿಜಿಟಲ್ ಪಾವತಿಗಳಲ್ಲಿ ಹೊಸತನ’ ಕ್ಕಾಗಿ ಡಿಜಿಧನ್ ಮಿಷನ್ ಫಿನ್-ಟೆಕ್ ಪ್ರಶಸ್ತಿ 2018-2019 ಅನ್ನು ಗೆದ್ದುಕೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ...

Read More

ಪಾಕಿಸ್ಥಾನದ ISI ಸೃಷ್ಟಿಸಿದ 500ಕ್ಕೂ ಅಧಿಕ URLಗಳನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ಪಾಕಿಸ್ಥಾನದ ಗೂಢಾಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಸೈಬರ್ ಜಿಹಾದಿಗಳು ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ನಡೆಸುತ್ತಿವೆ. ಭಾರತ ಸರ್ಕಾರವು ಅದರ 500ಕ್ಕೂ ಹೆಚ್ಚು URL ಅನ್ನು ಗುರುತಿಸಿದ್ದು,...

Read More

ಪಾಕಿಸ್ಥಾನದ ಎರಡು ಮಿಸೈಲ್ ಶೆಲ್ಸ್­ಗಳನ್ನು ನಾಶಪಡಿಸಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ಪಡೆಗಳು ಹಾರಿಸಿದ ಎರಡು ಮಿಸೈಲ್ ಶೆಲ್ಸ್­ಗಳನ್ನು ಪೂಂಚ್‌ನ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಬಳಿಯ ಗ್ರಾಮವೊಂದರಲ್ಲಿ ಭಾರತೀಯ ಸೇನೆಯು ನಾಶಪಡಿಸಿವೆ. ಪಾಕಿಸ್ಥಾನ ಪೂಂಚ್‌ನ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿವೆ. ಪಾಕಿಸ್ಥಾನ ಆಕ್ರಮಿತ...

Read More

ಝಾರ್ಖಾಂಡ್: ಬಿಜೆಪಿಗೆ ಸೇರ್ಪಡೆಗೊಂಡ ಕಾಂಗ್ರೆಸ್, ಜೆಎಂಎಂ ಪಕ್ಷದ ಶಾಸಕರು

ರಾಂಚಿ: ಝಾರ್ಖಾಂಡ್ ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ತೀವ್ರ ಸ್ವರೂಪದ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತು ಝಾರ್ಖಾಂಡ್ ಮುಕ್ತಿ ಮೋರ್ಚಾದ ಪ್ರಮುಖ ಶಾಸಕರುಗಳು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಝಾರ್ಖಾಂಡ್ ಕಾಂಗ್ರೆಸ್­ನ ಮಾಜಿ ಅಧ್ಯಕ್ಷ ಮತ್ತು ಶಾಸಕ ಸುಖದೇವ್ ಭಗತ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು...

Read More

ಸ್ಕೂಟರಿನಲ್ಲಿ ತಾಯಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯುತ್ತಿರುವ ಮಗನಿಗೆ ಕಾರು ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಮೈಸೂರು: ತನ್ನ ವೃದ್ಧ ತಾಯಿಯನ್ನು ಹಳೆ ಸ್ಕೂಟರಿನಲ್ಲಿ ಕುಳ್ಳರಿಸಿಕೊಂಡು ದೇಶದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ನಡೆಸುತ್ತಿರುವ ಮೈಸೂರಿನ ನಿವಾಸಿಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಕೃಷ್ಣ ಕುಮಾರ್ ಹಾಗೂ ಅವರ ತಾಯಿ ರತ್ನಮ್ಮ ಅವರ ತೀರ್ಥಯಾತ್ರೆಯ...

Read More

ಅ. 31 ರಂದು 25 ವರ್ಷಗಳನ್ನು ಪೂರೈಸಲಿದೆ ಭಾರತದ ಪಲ್ಸ್ ಪೋಲಿಯೋ ಕಾರ್ಯಕ್ರಮ

ನವದೆಹಲಿ: 2019ರ ಅಕ್ಟೋಬರ್ 31 ರಂದು ಭಾರತದ ಪಲ್ಸ್ ಪೋಲಿಯೋ ಕಾರ್ಯಕ್ರಮ 25 ವರ್ಷಗಳನ್ನು ಪೂರೈಸಲಿದೆ. ಈ 25 ವರ್ಷಗಳಲ್ಲಿ ಪೋಲಿಯೋ ಮುಕ್ತ ದೇಶವಾಗಿ ಭಾರತ ಹೊರಹೊಮ್ಮಿದೆ. “2019ರ ಅಕ್ಟೋಬರ್ 31, ಭಾರತದಲ್ಲಿ  ಪಲ್ಸ್ ಪೋಲಿಯೋ ಕಾರ್ಯಕ್ರಮದ 25 ವರ್ಷಗಳನ್ನು ಸೂಚಿಸುತ್ತದೆ,...

Read More

ದೀಪಾವಳಿಗೂ ಮುನ್ನ ಚೀನಿ ಪಟಾಕಿಗಳ ಹಾವಳಿ ತಡೆಗಟ್ಟಲು ಕ್ರಮಕೈಗೊಂಡ ಕಂದಾಯ ಇಲಾಖೆ

ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಭಾರತ ಕಾತುರದಿಂದ ಕಾಯುತ್ತಿದೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ಈ ವೇಳೆಯಲ್ಲಿ, ಕಂದಾಯ ಇಲಾಖೆ ಯಾವುದೇ ವಿಧಾನದಲ್ಲಿ ಪಟಾಕಿಗಳ ಆಮದಿಗೆ ಸಂಪೂರ್ಣ ನಿರ್ಬಂಧವನ್ನು ಹೇರಿದೆ. ಒಂದು ವೇಳೆ ಆಮದು ಮಾಡಿಕೊಂಡರೆ ಕಂದಾಯ ಕಾಯ್ದೆ 1962ರ ಅಡಿಯಲ್ಲಿ...

Read More

ವೇಗದ ಟಿಕೆಟಿಂಗ್­ಗಾಗಿ ಒನ್ ಟಚ್ ATVM ಅನ್ನು ಪರಿಚಯಿಸುತ್ತಿದೆ ಸೆಂಟ್ರಲ್ ರೈಲ್ವೇ

ಮುಂಬಯಿ: ಸೆಂಟ್ರಲ್ ರೈಲ್ವೇಯು ಅಕ್ಟೋಬರ್ 24ರಿಂದ ತನ್ನ ಮುಂಬಯಿ ಉಪನಗರ ನೆಟ್‌ವರ್ಕ್­ನಲ್ಲಿ ಒನ್-ಟಚ್ ಎಟಿವಿಎಂ ಅನ್ನು ಅನಾವರಣಗೊಳಿಸಲಿದೆ. ತನ್ನ ಲಕ್ಷಾಂತರ ಪ್ರಯಾಣಿಕರಿಗೆ ವೇಗವಾಗಿ ಟಿಕೆಟ್ ನೀಡಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಸೆಂಟ್ರಲ್ ರೈಲ್ವೆಯು ತನ್ನ 42 ಉಪನಗರ ನಿಲ್ದಾಣಗಳಲ್ಲಿ 92 ಒನ್-ಟಚ್ ಎಟಿವಿಎಂಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಒನ್-ಟಚ್...

Read More

ಬಿಸಿಸಿಐ ಮುಖ್ಯಸ್ಥನಾಗಿ ಪದಗ್ರಹಣ ಮಾಡಿದ ಸೌರವ್ ಗಂಗೂಲಿ

ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬುಧವಾರ ಮುಂಬಯಿನಲ್ಲಿ ಬಿಸಿಸಿಐ ಮುಖ್ಯಸ್ಥರಾಗಿ ಪದಗ್ರಹಣ ಮಾಡಿದ್ದಾರೆ. ಇತ್ತೀಚಿಗೆ ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ಮುಖ್ಯಸ್ಥ ಹುದ್ದೆಗೆ ನಾಮಪತ್ರ...

Read More

ವಿಶ್ವದ ಎಲ್ಲಾ ಖಂಡಗಳನ್ನು ಸುತ್ತಿದ ಭಾರತದ ಅತೀ ಕಿರಿಯ ಎಂಬ ಹೆಗ್ಗಳಿಕೆ ಪಡೆದ ವಿವಾನ್ ಗುಪ್ತಾ

ನವದೆಹಲಿ: ಕೇವಲ 8 ವರ್ಷ ವಯಸ್ಸಿನ ದೆಹಲಿ ಬಾಲಕ ವಿವಾನ್ ಗುಪ್ತಾ  ವಿಶ್ವದ ಎಲ್ಲಾ ಖಂಡಗಳಿಗೂ ಪ್ರಯಾಣಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲ್ ಭಾರತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವಿವಾನ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು...

Read More

Recent News

Back To Top