ನವದೆಹಲಿ: ಕೇವಲ 8 ವರ್ಷ ವಯಸ್ಸಿನ ದೆಹಲಿ ಬಾಲಕ ವಿವಾನ್ ಗುಪ್ತಾ ವಿಶ್ವದ ಎಲ್ಲಾ ಖಂಡಗಳಿಗೂ ಪ್ರಯಾಣಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲ್ ಭಾರತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವಿವಾನ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯ ಬುಕ್ ಆಫ್ ರೆಕಾರ್ಡ್ ಎರಡಲ್ಲೂ ಸ್ಥಾನ ಪಡೆದುಕೊಂಡಿದ್ದಾನೆ.
ವಿವಾನ್ ಇಷ್ಟು ಸಣ್ಣ ವಯಸ್ಸಿಗೆ ವಿಶ್ವದ ಎಲ್ಲಾ ಖಂಡಗಳನ್ನು ಸುತ್ತಾಡಲು ಕಾರಣೀಕರ್ತರಾಗಿದ್ದು ಆತನ ಪ್ರಯಾಣ ಪ್ರಿಯ ಕುಟುಂಬ. ತನ್ನ ತಂದೆ ತಾಯಿ ಮತ್ತು ಅಜ್ಜ ಅಜ್ಜಿಯರೊಂದಿಗೆ ಈತ ವಿಶ್ವದ ಏಳು ಖಂಡಗಳನ್ನು ಸುತ್ತಾಡಿದ್ದಾನೆ. 2015ರಲ್ಲಿ ಈತ ಉತ್ತರ ಕೆನಡಾಗೆ ಭೇಟಿ ನೀಡಿದ್ದಾನೆ, 2019ರಲ್ಲಿ ಈತ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದಾನೆ. ನಾಲ್ಕು ವರ್ಷಗಳ ಅವಧಿಯಲ್ಲಿ 7 ಖಂಡಗಳಿಗೂ ಭೇಟಿ ಕೊಟ್ಟಿದ್ದಾನೆ.
ವಿವಾನ್ ಇದುವರೆಗೆ ಒಟ್ಟು 32 ದೇಶಗಳಿಗೆ ಭೇಟಿ ನೀಡಿದ್ದಾನೆ. ಅಂಟಾರ್ಟಿಕಾದಲ್ಲಿ ಮುದ್ದಾದ ಪುಟ್ಟ ಪೆಂಗ್ವಿನ್ಗಳು ಮಂಜುಗಡ್ಡೆಯ ನಡುವೆ ಓಡಾಡುತ್ತಿದ್ದ ದೃಶ್ಯ ನನ್ನ ಪ್ರಯಾಣದ ವೇಳೆ ನನಗೆ ಅತೀಹೆಚ್ಚು ಆನಂದ ನೀಡಿದ ಸನ್ನಿವೇಶ ಎಂದು ಈತ ಹೇಳಿಕೊಂಡಿದ್ದಾನೆ. ಫಿನ್ಲೆಂಡ್ನ ಲ್ಯಾಪ್ಲ್ಯಾಂಡ್ನಲ್ಲಿ ಸಾಂತಾಕ್ಲಾಸ್ ತನ್ನನ್ನು ಭೇಟಿಯಾಗಿದ್ದನ್ನು ಈತ ತುಂಬಾ ಇಷ್ಟಪಟ್ಟಿದ್ದಾನೆ. ತಾಂಜೇನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿನ ವನ್ಯಜೀವಿ ಸಫಾರಿ ಮತ್ತು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಡೈವಿಂಗ್ ಮಾಡಿದ್ದನ್ನೂ ಈತ ನೆನಪಿಸಿಕೊಳ್ಳುತ್ತಾನೆ.
“ನಮ್ಮ ಮಗು ದಾಖಲೆ ಮಾಡಿದ್ದಾನೆ ಎಂಬುದನ್ನು ತಿಳಿದು ನಿಜಕ್ಕೂ ಸಂತೋಷಪಟ್ಟೆವು. ನಮ್ಮ ಕುಟುಂಬ ಹಿಂದಿನಿಂದಲೂ ಪ್ರವಾಸವನ್ನು ಅತೀವ ಇಷ್ಟಪಡುತ್ತದೆ. ಆದರೆ ನಮ್ಮ ಕುಟುಂಬದ ಪುಟ್ಟ ಸದಸ್ಯ ಪ್ರವಾಸದಿಂದಾಗಿ ರಾಷ್ಟ್ರೀಯ ಮತ್ತು ಏಷ್ಯಾ ದಾಖಲೆ ಮಾಡಿರುವುದಕ್ಕೆ ಹೆಮ್ಮೆಯಾಗುತ್ತಿದೆ” ಎಂದು ವಿವಾನ್ ಅಜ್ಜ ಅನಿಲ್ ಗುಪ್ತಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.