ಮುಂಬಯಿ: ಸೆಂಟ್ರಲ್ ರೈಲ್ವೇಯು ಅಕ್ಟೋಬರ್ 24ರಿಂದ ತನ್ನ ಮುಂಬಯಿ ಉಪನಗರ ನೆಟ್ವರ್ಕ್ನಲ್ಲಿ ಒನ್-ಟಚ್ ಎಟಿವಿಎಂ ಅನ್ನು ಅನಾವರಣಗೊಳಿಸಲಿದೆ. ತನ್ನ ಲಕ್ಷಾಂತರ ಪ್ರಯಾಣಿಕರಿಗೆ ವೇಗವಾಗಿ ಟಿಕೆಟ್ ನೀಡಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಸೆಂಟ್ರಲ್ ರೈಲ್ವೆಯು ತನ್ನ 42 ಉಪನಗರ ನಿಲ್ದಾಣಗಳಲ್ಲಿ 92 ಒನ್-ಟಚ್ ಎಟಿವಿಎಂಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಒನ್-ಟಚ್ ಎಟಿವಿಎಂನ ಪ್ರಮುಖ ಲಕ್ಷಣಗಳೆಂದರೆ, ಕೇವಲ ಎರಡು ಹಂತಗಳೊಂದಿಗೆ ಇಲ್ಲಿ ಟಿಕೆಟ್ ಪಡೆಯಬಹುದು. ಹಿಂದಿನ ಸಾಮಾನ್ಯ ಎಟಿವಿಎಂನಲ್ಲಿ ಆರು-ಹಂತದ ಪ್ರಕ್ರಿಯೆಯನ್ನು ನಡೆಸಬೇಕಾಗಿತ್ತು. ಸಿಂಗಲ್ / ರಿಟರ್ನ್ ಪ್ರಯಾಣದ ಟಿಕೆಟ್ಗಳನ್ನು ಆಯ್ಕೆ ಮಾಡಲು ಒನ್-ಟಚ್ ಎಟಿವಿಎಂ ಒಂದು ಸ್ಕ್ರೀನ್ ಡಿಸ್ಪ್ಲೇ ಅನ್ನು ತೋರಿಸುತ್ತದೆ. ಪ್ರಯಾಣದ ಟಿಕೆಟ್ಗಾಗಿ ಅಥವಾ ವಾಪಾಸ್ಸಾತಿ ಟಿಕೆಟ್ಗಳಿಗಾಗಿ “up to station” ಟ್ಯಾಬ್ ಅನ್ನು ಒತ್ತುವ ಮೂಲಕ ಡಿಸ್ಟೆನ್ಸ್ ಸ್ಲ್ಯಾಬ್ನಲ್ಲಿ ಬಯಸಿದ ನಿಲ್ದಾಣವನ್ನು ಆಯ್ಕೆ ಮಾಡಬಹುದು. ಇದಲ್ಲದೆ, ಪ್ರಯಾಣಿಕರು ಒಂದೇ ಸ್ಪರ್ಶದಿಂದ ಪ್ಲಾಟ್ಫಾರ್ಮ್ ಟಿಕೆಟ್ ಸಹ ಪಡೆಯಬಹುದು.
“ಮುಂಬಯಿ ಪ್ರಯಾಣಿಕರ ವೇಗದ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ಒನ್-ಟಚ್ ಎಟಿವಿಎಂ ಅನ್ನು ಪರಿಚಯಿಸಲಾಗಿದೆ. ಇದು ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ” ಎಂದು ಸೆಂಟ್ರಲ್ ರೈಲ್ವೇ ಮುಖ್ಯ ಪಿಆರ್ ಓ ಶಿವಾಜಿ ಸುತಾರ್ ಹೇಳಿದ್ದಾರೆ.
ಒನ್-ಟಚ್ ಎಟಿವಿಎಂನಲ್ಲಿನ ಬಳಕೆದಾರ-ಸ್ನೇಹಿ ಮತ್ತು ಜಟಿಲವಲ್ಲದ ಕಾರ್ಯವಿಧಾನವು ಮುಂಬಯಿ ಉಪನಗರ ನೆಟ್ವರ್ಕ್ನ ಟಿಕೆಟಿಂಗ್ ವ್ಯವಸ್ಥೆಯಲ್ಲಿನ ಹೊರೆಗಳನ್ನು ಬಹಳವಾಗಿ ಸರಾಗಗೊಳಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.