ನವದೆಹಲಿ: MeitY ಸ್ಟಾರ್ಟ್ ಅಪ್ ಸಮಿತ್ 2019 ರಲ್ಲಿ ಭಾರತದ ಅತಿದೊಡ್ಡ ವ್ಯಾಪಾರಿ ಫಿನ್-ಟೆಕ್ ಕಂಪನಿಯಾದ ಭಾರತ್ಪೆ (BharatPe), ‘ಉದಯೋನ್ಮುಖ ತಂತ್ರಜ್ಞಾನದ ಮೂಲಕ ಡಿಜಿಟಲ್ ಪಾವತಿಗಳಲ್ಲಿ ಹೊಸತನ’ ಕ್ಕಾಗಿ ಡಿಜಿಧನ್ ಮಿಷನ್ ಫಿನ್-ಟೆಕ್ ಪ್ರಶಸ್ತಿ 2018-2019 ಅನ್ನು ಗೆದ್ದುಕೊಂಡಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
“ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಈ ಪ್ರತಿಷ್ಠಿತ ಮನ್ನಣೆಯನ್ನು ಸ್ವೀಕರಿಸಲು ನಾವು ಗೌರವಪಡುತ್ತೇವೆ. ಇದು ಭಾರತದ ಎಸ್ಎಂಇ ಮತ್ತು ಅಸಂಘಟಿತ ಚಿಲ್ಲರೆ ವ್ಯಾಪಾರಿಗಳಲ್ಲಿ ಆರ್ಥಿಕ ಸೇರ್ಪಡೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಸಚಿವಾಲಯವು ಡಿಜಿಟಲೀಕರಣದ ವಿಷಯದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬುದ್ಧರಾಗಿದ್ದೇವೆ “ಭಾರತ್ ಪೆ ಎಂದು ಸಹ ಸಂಸ್ಥಾಪಕ ಮತ್ತು ಸಿಇಒ ಅಶ್ನೀರ್ ಗ್ರೋವರ್ ಹೇಳಿದರು.
ಭಾರತ್ಪೆ ಭಾರತದ ಅತಿದೊಡ್ಡ ವ್ಯಾಪಾರಿ ಫಿನ್-ಟೆಕ್ ಕಂಪನಿಯಾಗಿದೆ. ಪ್ರಾರಂಭವಾದ ಮೊದಲ ವರ್ಷದಲ್ಲಿ, ಕಂಪನಿಯು 20 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳ ಜಾಲವನ್ನು ಸ್ಥಾಪಿಸಿದೆ ಮತ್ತು ಒಂದು ಕ್ಯೂಆರ್ ಕೋಡ್, ಸಾಲ ಮತ್ತು ಠೇವಣಿಗಳ ಮೂಲಕ ಉಚಿತ ಯುಪಿಐ ಪಾವತಿಗಳೊಂದಿಗೆ ವ್ಯಾಪಾರಿ ಸಮುದಾಯವನ್ನು ಬೆಂಬಲಿಸುತ್ತಾ ಬರುತ್ತಿದೆ.
ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ವಾಸ್ತವ ಮಾಡುವುದು, ಮತ್ತು ವ್ಯಾಪಾರಿಗಳ ಮೂಲಕ ತಳಮಟ್ಟದಿಂದಲೇ ಪ್ರಭಾವ ಬೀರಿ ದೇಶದಲ್ಲಿ ಪಾವತಿ, ಸಾಲ ಮತ್ತು ವಿಮೆಯನ್ನು ಸರ್ವವ್ಯಾಪಿಯಾಗಿ ಮಾಡುವುದು ಭಾರತ್ಪೆಯ ಗುರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.