ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಭಾರತ ಕಾತುರದಿಂದ ಕಾಯುತ್ತಿದೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ಈ ವೇಳೆಯಲ್ಲಿ, ಕಂದಾಯ ಇಲಾಖೆ ಯಾವುದೇ ವಿಧಾನದಲ್ಲಿ ಪಟಾಕಿಗಳ ಆಮದಿಗೆ ಸಂಪೂರ್ಣ ನಿರ್ಬಂಧವನ್ನು ಹೇರಿದೆ. ಒಂದು ವೇಳೆ ಆಮದು ಮಾಡಿಕೊಂಡರೆ ಕಂದಾಯ ಕಾಯ್ದೆ 1962ರ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ದೀಪಾವಳಿ ವೇಳೆಯಲ್ಲಿ ಭಾರತೀಯ ಮಾರುಕಟ್ಟೆಗೆ ಬಂದು ಬೀಳುವ ಟನ್ ಗಟ್ಟಲೆ ಚೀನಿ ಪಟಾಕಿಗಳಿಗೆ ನಿರ್ಬಂಧವನ್ನು ವಿಧಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
“ಚೀನಾ ಮೂಲದ ಪಟಾಕಿಗಳ ಕಳ್ಳಸಾಗಾಣೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಅವುಗಳ ಅಕ್ರಮ ಮಾರಾಟ ಗಂಭೀರ ಪ್ರಕರಣವಾಗಿದೆ. ಯಾವುದೇ ವಿಧಾನದಲ್ಲಿ ಪಟಾಕಿಗಳನ್ನು ಆಮದು ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಕ್ರಮ ಪಟಾಕಿಗಳನ್ನು ಇಟ್ಟುಕೊಳ್ಳುವುದು, ಮಾರಾಟ ಮಾಡುವುದು ಮತ್ತು ಖರೀದಿ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚೀನಿ ಪಟಾಕಿಗಳ ಬಳಕೆ ಸ್ಫೋಟಕ ನಿಯಮಗಳು 2008 ಕ್ಕೆ ವಿರುದ್ಧವಾಗಿದೆ ಮತ್ತು ಅವು ಕೆಂಪು ಸೀಸ, ಕಾಪರ್ ಆಕ್ಸೈಡ್, ಲಿಥಿಯಂ ಮುಂತಾದ ನಿಷೇಧಿತ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಹಾನಿಕಾರಕವಾಗಿದೆ. ಈ ರಾಸಾಯನಿಕಗಳು ಹೆಚ್ಚು ಅಪಾಯಕಾರಿ ಮತ್ತು ಪರಿಸರಕ್ಕೆ ವಿಮಾರಕವಾಗಿವೆ. ಚೀನಿ ಪಟಾಕಿಗಳನ್ನು ಖರೀದಿಸುವುದರಿಂದ ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ದೇಶೀಯ ಉದ್ಯಮಕ್ಕೂ ಇದು ಅಪಾಯವನ್ನುಂಟು ಮಾಡುತ್ತದೆ.
ಲೇಬಲ್ ವಿವರಗಳನ್ನು ಪರಿಶೀಲನೆ ನಡೆಸುವ ಮೂಲಕ ಇಂತಹ ಅಪಾಯಕಾರಿ ಚೀನೀ ಕ್ರ್ಯಾಕರ್ಗಳನ್ನು ಖರೀದಿಸುವುದನ್ನು ತಪ್ಪಿಸಬೇಕು ಕಸ್ಟಮ್ಸ್ ಇಲಾಖೆಯು ಸೂಚನೆ ನೀಡಿದೆ. ಆಟದ ಸಾಮಾನುಗಳ ರೂಪದಲ್ಲಿ ಚೀನಿ ಕ್ರ್ಯಾಕರ್ಗಳನ್ನು ರಹಸ್ಯವಾಗಿ ಆಮದು ಮಾಡಿಕೊಳ್ಳುವುದನ್ನು ತಡೆಯಲು ಕೇಂದ್ರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.