ನವದೆಹಲಿ: ಪಾಕಿಸ್ಥಾನದ ಗೂಢಾಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಸೈಬರ್ ಜಿಹಾದಿಗಳು ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ನಡೆಸುತ್ತಿವೆ. ಭಾರತ ಸರ್ಕಾರವು ಅದರ 500ಕ್ಕೂ ಹೆಚ್ಚು URL ಅನ್ನು ಗುರುತಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಆ ಖಾತೆಗಳನ್ನು ನಿರ್ಬಂಧಿಸುತ್ತಿದೆ.
ಭಾರತದ ಘನತೆಗೆ ಧಕ್ಕೆ ತರುವಂತೆ ಟ್ವಿಟರ್ನಲ್ಲಿ ಟ್ರೆಂಡಿಂಗ್ ಹ್ಯಾಶ್ಟ್ಯಾಗ್ಗಳನ್ನು ರಚಿಸಲು ಮಧ್ಯಪ್ರಾಚ್ಯ ಮತ್ತು ಯುರೋಪಿನ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಐಎಸ್ಐ ನೇಮಿಸಿಕೊಂಡಿದೆ ಎನ್ನಲಾಗಿದೆ.
ಐಎಸ್ಐನ ಸೈಬರ್ ಸಮೂಹದಿಂದ ರಚಿಸಲ್ಪಡುವ ನೂರಾರು ಫೇಸ್ಬುಕ್ ಪುಟಗಳು ಮತ್ತು ಟ್ವಿಟರ್ ಖಾತೆಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ. ಅಂತಹ FB ಪುಟಗಳು ಮತ್ತು ಟ್ವಿಟರ್ ಖಾತೆಗಳ ಪಟ್ಟಿಯನ್ನು ಗೃಹ ಸಚಿವಾಲಯವು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (ಎಂಇಐಟಿ) ರವಾನಿಸಿದೆ.
ಭಾರತ ವಿರೋಧಿ ಅಭಿಯಾನ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ URL ಗಳು ಮತ್ತು ಗುಂಪುಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು MEITY ಯ ಸೈಬರ್ ಕಾನೂನುಗಳು ಮತ್ತು ಇ-ಸೆಕ್ಯುರಿಟಿ ಗುಂಪು ಫೇಸ್ಬುಕ್, ಯೂಟ್ಯೂಬ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
“ಪ್ರಸ್ತುತ, ನಾವು 500 ಕ್ಕೂ ಹೆಚ್ಚು URL ಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು” ಎಂದು MEITY ಯ ಸೈಬರ್ ಕಾನೂನುಗಳು ಮತ್ತು ಇ-ಸೆಕ್ಯುರಿಟಿ ಗುಂಪಿನ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.